ಕರ್ನಾಟಕದ ನೆಲ ಸಂತರ, ಶರಣರ ನೆಲೆಬೀಡು

ವಿಜಯ ಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ ಮಹೋತ್ಸವ
ಬಾಗಲಕೋಟೆ: ಕರ್ನಾಟಕದ ನೆಲ ಸಂತರ ಮತ್ತು ಶರಣರ ನೆಲೆ ಬೀಡು. ಈ ನೆಲದಲ್ಲಿ ಮಹಾನ್ ಶರಣರು ಮತ್ತು ಸಂತರು ಜೀವಕಾರುಣ್ಯದ ಬೀಜಬಿತ್ತಿ ಮಾನವತೆಯ ಸಮಾಜವನ್ನು ಕಟ್ಟಿಕೊಟ್ಟಿರುವರು. ಶರಣರ ಬದುಕನ್ನು ಪುರಾಣ ಪ್ರವಚನದ ಮೂಲಕ ಇಂದಿನ ಯುವಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳು ತಿಳಿಸಿದರು.

 ಹುನಗುಂದ ತಾಲೂಕಿನ ಚಿತ್ತರಗಿಯಲ್ಲಿ ಲಿಂಗೈಕ್ಯ ಶ್ರೀ ವಿಜಯಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಒಂದು ತಿಂಗಳಕಾಲ ನಡೆಯುವ ಪುರಾಣ ಪ್ರವಚನದ ಪ್ರಾರಂಭೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. 

ಶರಣರ ಬದುಕು ಆದರ್ಶಮಯವಾದದ್ದು. ಕಾಯಕವೇ ಕೈಲಾಸವೆಂದು ಬದುಕಿ ಬಾಳಿದ ಮಹಾಮಹಿಮರು. ಅವರ ಬದುಕು ಅನುಕರಣೀಯವಾದದ್ದು. ಅಂಥ ಮಹಿಮರ ಬದುಕನ್ನು ಇಂದಿನ ಮಕ್ಕಳಿಗೆ ಬರವಣಿಗೆ ಮತ್ತು ಪುರಾಣದ ಮೂಲಕ ಕಟ್ಟಿಕೊಡುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದರು. 

 ಬಿವಿವಿ ಸಂಘದ ವಿದ್ಯಾರ್ಥಿ ನಿಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ವಿಶೇಷವಾಗಿ ಯುವ ಜನಾಂಗ ಪುರಾಣ ಪ್ರವಚನವನ್ನು ಆಲಿಸುವ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಪುರಾಣ ಶ್ರವಣ ಒಂದರ್ಥದಲ್ಲಿ ಅಧ್ಯಾತ್ಮದ ಪ್ರಕ್ರಿಯೆಯಾಗಿದೆ. ಮನಶಾಂತಿಗಾಗಿ ಹಾಗೂ ಬದುಕಿನ ಅರ್ಥವನ್ನು ಅರಿಯಲು ಶರಣರ ಜೀವನ ಮತ್ತು ಸಾಧನೆ ಮಾರ್ಗದರ್ಶನವಾಗಿವೆ ಎಂದು ತಿಳಿಸಿದರು. 

ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಗಂಗಾಧರ ಶಾಸಿಗಳು, ಅ. 26 ರಿಂದ ನ. 24ರವರೆಗೆ ಮುಳಗುಂದದ ಮಹಾಂತಸ್ವಾಮಿಗಳು ಗವಿಮಠ ಅವರ ಜೀವನ ಮತ್ತು ಸಾಧನೆ ಕುರಿತು ಪ್ರತಿನಿತ್ಯ ಸಂಜೆ 7 ಗಂಟೆಗೆ ಪ್ರವಚನ ಏರ್ಪಡಿಸಲಾಗಿದೆ. ವೇದಮೂರ್ತಿ ಪಂಚಾಕ್ಷರಿ ಶಾಸಿಗಳು ಹಿರೇಮಠ ಅವರು ಪ್ರವಚನ ನೀಡಲಿರುವರು ಎಂದು ಹೇಳಿದರು.

 ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿತ್ತರಗಿ ಮಠದ ಬಸವಲಿಂಗ ಸ್ವಾಮೀಜಿ, ಹರನಾಳ ಮಠದ ಸಂಗನಬಸವ ಸ್ವಾಮೀಜಿ ಇತರರಿದ್ದರು.
ಹುನಗುಂದ ತಾಲೂಕಿನ ಚಿತ್ತರಗಿ ಲಿಂಗೈಕ್ಯ ಶ್ರೀ ವಿಜಯಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಒಂದು ತಿಂಗಳಕಾಲ ನಡೆಯುವ ಪುರಾಣ ಪ್ರವಚನ ಪ್ರಾರಂಭೋತ್ಸವವನ್ನು ಗುರುಮಹಾಂತ ಸ್ವಾಮೀಜಿ ಉದ್ಘಾಟಿಸಿದರು. ಕುಮಾರಸ್ವಾಮಿ ಹಿರೇಮಠ, ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಇತರರಿದ್ದರು.
Published on: 

ಬಾಗಲಕೋಟೆ: ಕರ್ನಾಟಕದ ನೆಲ ಸಂತರ ಮತ್ತು ಶರಣರ ನೆಲೆ ಬೀಡು. ಈ ನೆಲದಲ್ಲಿ ಮಹಾನ್ ಶರಣರು ಮತ್ತು ಸಂತರು ಜೀವಕಾರುಣ್ಯದ ಬೀಜಬಿತ್ತಿ ಮಾನವತೆಯ ಸಮಾಜವನ್ನು ಕಟ್ಟಿಕೊಟ್ಟಿರುವರು. ಶರಣರ ಬದುಕನ್ನು ಪುರಾಣ ಪ್ರವಚನದ ಮೂಲಕ ಇಂದಿನ ಯುವಪೀಳಿಗೆಗೆ ತಲುಪಿಸುವುದು ಅಗತ್ಯವಾಗಿದೆ ಎಂದು ಚಿತ್ತರಗಿ ಸಂಸ್ಥಾನ ಮಠದ ಗುರುಮಹಾಂತ ಮಹಾಸ್ವಾಮಿಗಳು ತಿಳಿಸಿದರು.

ಹುನಗುಂದ ತಾಲೂಕಿನ ಚಿತ್ತರಗಿಯಲ್ಲಿ ಲಿಂಗೈಕ್ಯ ಶ್ರೀ ವಿಜಯಮಹಾಂತ ಶಿವಯೋಗಿಗಳವರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಒಂದು ತಿಂಗಳಕಾಲ ನಡೆಯುವ ಪುರಾಣ ಪ್ರವಚನದ ಪ್ರಾರಂಭೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಶರಣರ ಬದುಕು ಆದರ್ಶಮಯವಾದದ್ದು. ಕಾಯಕವೇ ಕೈಲಾಸವೆಂದು ಬದುಕಿ ಬಾಳಿದ ಮಹಾಮಹಿಮರು. ಅವರ ಬದುಕು ಅನುಕರಣೀಯವಾದದ್ದು. ಅಂಥ ಮಹಿಮರ ಬದುಕನ್ನು ಇಂದಿನ ಮಕ್ಕಳಿಗೆ ಬರವಣಿಗೆ ಮತ್ತು ಪುರಾಣದ ಮೂಲಕ ಕಟ್ಟಿಕೊಡುವುದು ಸಮಾಜದ ಆರೋಗ್ಯದ ದೃಷ್ಟಿಯಿಂದ ಅವಶ್ಯಕವಾಗಿದೆ ಎಂದರು.

ಬಿವಿವಿ ಸಂಘದ ವಿದ್ಯಾರ್ಥಿ ನಿಲಯಗಳ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಕುಮಾರಸ್ವಾಮಿ ಹಿರೇಮಠ ಮಾತನಾಡಿ, ವಿಶೇಷವಾಗಿ ಯುವ ಜನಾಂಗ ಪುರಾಣ ಪ್ರವಚನವನ್ನು ಆಲಿಸುವ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಪುರಾಣ ಶ್ರವಣ ಒಂದರ್ಥದಲ್ಲಿ ಅಧ್ಯಾತ್ಮದ ಪ್ರಕ್ರಿಯೆಯಾಗಿದೆ. ಮನಶಾಂತಿಗಾಗಿ ಹಾಗೂ ಬದುಕಿನ ಅರ್ಥವನ್ನು ಅರಿಯಲು ಶರಣರ ಜೀವನ ಮತ್ತು ಸಾಧನೆ ಮಾರ್ಗದರ್ಶನವಾಗಿವೆ ಎಂದು ತಿಳಿಸಿದರು.

ಮಹೋತ್ಸವ ಸಮಿತಿ ಅಧ್ಯಕ್ಷ ಶಿವಕುಮಾರ ಗಂಗಾಧರ ಶಾಸಿಗಳು, ಅ. 26 ರಿಂದ ನ. 24ರವರೆಗೆ ಮುಳಗುಂದದ ಮಹಾಂತಸ್ವಾಮಿಗಳು ಗವಿಮಠ ಅವರ ಜೀವನ ಮತ್ತು ಸಾಧನೆ ಕುರಿತು ಪ್ರತಿನಿತ್ಯ ಸಂಜೆ 7 ಗಂಟೆಗೆ ಪ್ರವಚನ ಏರ್ಪಡಿಸಲಾಗಿದೆ. ವೇದಮೂರ್ತಿ ಪಂಚಾಕ್ಷರಿ ಶಾಸಿಗಳು ಹಿರೇಮಠ ಅವರು ಪ್ರವಚನ ನೀಡಲಿರುವರು ಎಂದು ಹೇಳಿದರು.

ರುದ್ರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚಿತ್ತರಗಿ ಮಠದ ಬಸವಲಿಂಗ ಸ್ವಾಮೀಜಿ, ಹರನಾಳ ಮಠದ ಸಂಗನಬಸವ ಸ್ವಾಮೀಜಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net