ಎಥೆನಾಲ್ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳು ಆರೋಪ

ಮಾಜಿ ಸಚಿವ ಮುರುಗೇಶ ನಿರಾಣಿ ವ್ಯಂಗ್ಯ
ಬಾಗಲಕೋಟೆ: ದೇಶದಲ್ಲಿ ಇಂಧನ ಕೊರತೆ, ಬಳಕೆ ಸರಿದೂಗಿಸಲು ಎಥೆನಾಲ್ ಬಳಕೆ ಮಾಡುವುದರಿಂದ ಯಾವುದೇ ಸಮಸ್ಯೆ ಇಲ್ಲ. ಕಾಂಗ್ರೆಸ್ ಸುಖಾಸುಮ್ಮನೇ ಆರೋಪಮಾಡಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.

 ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಥೆನಾಲ್ ಉತ್ಪಾದನೆ, ಬಳಕೆ ಈಚಿನ ವರ್ಷಗಳಲ್ಲಿ ನಡೆದಿಲ್ಲ. ಮೈಸೂರು ಸಂಸ್ಥಾನದಲ್ಲಿ ಸರ್.ಎಂ. ವಿಶ್ವೇಶರಯ್ಯ ಅವರು ದೇಶದಲ್ಲಿಯೇ ಮೊದಲು ದಿನಕ್ಕೆ 30 ಸಾವಿರ ಲೀಟರ್ ಎಥೆನಾಲ್ ಉತ್ಪಾದಿಸಿ ಬಳಕೆ ಮಾಡಿದ್ದರು ಎಂದರು.

 ಬ್ರೇಜಿಲ್ ದೇಶದಲ್ಲಿ 70 ವರ್ಷಗಳ ಹಿಂದಿನಿಂದಲೂ ಸರ್ಕಾರಿ ವಾಹನಗಳಿಗೆ ಎಥೆನಾಲ್ ಬಳಸುತ್ತಿದೆ. ಡೀಸೆಲ್‌ಗೆ ಎಥೆನಾಲ್‌ಅನ್ನು ಮಿಶ್ರಣ ಮಾಡಲು ಬರುವುದಿಲ್ಲ. ಕೇವಲ ಪೆಟ್ರೋಲ್‌ಗೆ ಮಾತ್ರ ಶೇ. 30ರಷ್ಟು ಮಿಶ್ರಣಮಾಡಿ ಬಳಕೆ ಮಾಡಬಹುದು. ಅನೇಕ ದೇಶಗಳಲ್ಲಿ ಎಥೆನಾಲ್ ಅವಲಂಬಿತ ವಾಹನಗಳನ್ನು ಓಡಿಸಲಾಗುತ್ತಿದೆ. ಭಾರತದಲ್ಲಿ ದಿನಕ್ಕೆ 2200 ಲೀಟರ್ ಎಥೆನಾಲ್ ಉತ್ಪಾದನೆ ಇದೆ. ಈ ಪೈಕಿ 12000 ಲೀಟರ ಮಾತ್ರ ಬಳಕೆ ಮಾಡಲಾಗುತ್ತಿದೆ. ಕಬ್ಬು, ಮೊಲಾಸೀಸ್, ಅಕ್ಕಿಯಿಂದ ಎಥೆನಾಲ್ ಉತ್ಪಾದನೆ ಮಾಡಲಾಗುತ್ತಿದೆ. ಬರಗಾಲದ ಪರಿಣಾಮ ಪ್ರಸಕ್ತ ವರ್ಷ ಕಬ್ಬು ಉತ್ಪಾದನೆ ಶೇ. 30ರಷ್ಟು ಕುಂಠಿತಗೊಂಡಿದೆ. ಮುಂದಿನ ವರ್ಷ ಶೇ. 50ರಷ್ಟು ಕಬ್ಬು ಉತ್ಪಾದನೆ ಕುಂಠಿತಗೊಳ್ಳಲಿದೆ. ಕಾಂಗ್ರೆಸ್ ನಾಯಕರಿಗೆ ಇದೆಲ್ಲ ಅರ್ಥವಾಗುವುದಿಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದರು.

 ಆರೋಪ ಮಾಡುವ ಮುನ್ನ ಲ್ಯಾಬ್‌ನಲ್ಲಿ ಚೆಕ್ ಮಾಡಬೇಕು. ಆದರೆ ಕಾಂಗ್ರೆಸ್ ನಾಯಕರು ಜನರ ಮನಸ್ಸು ಬದಲಾವಣೆ ಮಾಡಲು ಆರೋಪ ಮಾಡುತ್ತಿದ್ದಾರೆ. ಎಥೆನಾಲ್ ಬಳಕೆಯಿಂದ ಯಾವುದೇ ಸಮಸ್ಯೆ ಇಲ್ಲ. ದೇಶದಲ್ಲಿ ಇಂಧನ ಬಳಕೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದೆ. ಪರ್ಯಾಯ ಶಕ್ತಿಯಾಗಿ ಬೆಳೆದು ನಿಂತಿರುವ ಎಥೆನಾಲ್ ಬಳಕೆಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

 ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಮುಖಂಡರಾದ ಚಂದ್ರಕಾಂತ ಕೇಸನೂರ, ರಮೇಶ ಮೊಟಗಿ, ಮಹೇಶ ಮೇಟಿ ಇದ್ದರು. 

ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ
 ಎಸ್‌ಐಆರ್ ವಿಚಾರದಲ್ಲಿ ಕಾಂಗ್ರೆಸ್ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಪ್ರತಿ 20 ವರ್ಷಕ್ಕೆ ಪರಿಷ್ಕರಣೆ ಮಾಡಿ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಮೃತರ ಹೆಸರು ಡಿಲೀಟ್ ಮಾಡುವುದು, ಡಬಲ್ ಕಾರ್ಡ್ ರದ್ದು ಪಡಿಸುವುದು, ಹೊಸಬರ ಹೆಸರು ಸೇರ್ಪಡೆ ಸೇರಿದಂತೆ ಎಲ್ಲವು ಪಾರದರ್ಶನವಾಗಿ ನಡೆಯುತ್ತದೆ. ನೈಜವಾದ ಮತದಾರರ ಪಟ್ಟಿ ಸಿದ್ಧಪಡಿಸಲಾಗುತ್ತದೆ. ಇದಕ್ಕೆ ವಿನಾಕಾರಣ ಆರೋಪ ಮಾಡುವುದು ತರವಲ್ಲ ಎಂದು ನಿರಾಣಿ ಟೀಕಿಸಿದರು. 

ರಾಜ್ಯದಲ್ಲಿ ಲಕ್ಷಾಂತರ ರೂ., ಸಾಲ
 ಬೆಲೆ ಏರಿಕೆ ವಿಚಾರದಲ್ಲಿ ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಸ್ಟಾೃಂಪ್ ಡ್ಯೂಟಿ, ಬಸ್ ದರ, ಹಾಲಿ ದರ ಹೆಚ್ಚಳ ಮಾಡಿದ್ದಾರೆ. ಬಜೆಟ್ ಗಾತ್ರಕ್ಕೂ ಮೀರಿ ಸಾಲ ಮಾಡಿದ್ದಾರೆ. ರಾಜ್ಯದ ಮೇಲೆ 4 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅಭಿವೃದ್ಧಿ ಶೂನ್ಯವಾಗಿದೆ ಎಂದ ಮಾಜಿ ಸಚಿವ ಮುರುಗೇಶ ನಿರಾಣಿ, ‘ಒನ್ ನೇಷನ್ ಒನ್ ಎಲೆಕ್ಷನ್’ ನಡೆಯುವ ಸಾಧ್ಯತೆ ಇದೆ. ಕ್ಷೇತ್ರ ಪುನರ್ವಿಂಗಡಣೆ ನಡೆಯಲಿದೆ. ಇದಾದ ಬಳಿಕ ಎಲ್ಲವು ನಿರ್ಧಾರವಾಗಲಿದೆ. ನಾನು ಬೀಳಗಿ ಮತ ಕ್ಷೇತ್ರ ಬಿಟ್ಟು ಹೋಗುವ ಪ್ರಶ್ನೆ ಇಲ್ಲ. ಬೀಳಗಿ ಮತದಾರರ ಆಶೀರ್ವಾದಿಂದ ಶಾಸಕ, ಮಂತ್ರಿಯಾಗಿದ್ದೇನೆ ಎಂದು ತಿಳಿಸಿದರು.
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಮುಖಂಡರಾದ ಚಂದ್ರಕಾಂತ ಕೇಸನೂರ, ರಮೇಶ ಮೊಟಗಿ, ಮಹೇಶ ಮೇಟಿ ಇದ್ದರು.
Published on: 