ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ

ಕೆಲಸದಿಂದ ತೆಗೆದಿದ್ದಾರೆಂದು ಮನನೊಂದು ವಿಷ ಸೇವಿಸಿ ನರಳುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯಕ್ಕೆ ಯಾಚಿಸಿ ಕಣ್ಣೀರು ಹಾಕುತ್ತಿರುವ ತಾಯಿ.
ಕೆಲಸದಿಂದ ತೆಗೆದಿದ್ದಾರೆಂದು ಮನನೊಂದು ವಿಷ ಸೇವಿಸಿ ನರಳುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಾಯಕ್ಕೆ ಯಾಚಿಸಿ ಕಣ್ಣೀರು ಹಾಕುತ್ತಿರುವ ತಾಯಿ.
Published on

ಪ್ರಮುಖ ಮುಖ್ಯಾಂಶಗಳು

  • ದಿನಗೂಲಿ ಕೆಲಸದಿಂದ ತೆಗೆದಿದ್ದಾರೆಂದು ಆರೋಪ
  • ಆಸ್ಪತ್ರೆಗೆ ದಾಖಲು
ಬಾಗಲಕೋಟೆ: ದಿನಗೂಲಿ ಕೆಲಸದಿಂದ ತೆಗೆದಿದ್ದಕ್ಕೆ ಮನನೊಂದ ಮಹಿಳೆ ತಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ವಿಷ ಸೇವಿಸಿ ಆತ್ಕಹತ್ಯೆಗೆ ಯತ್ನಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನವನಗರದ ಮ್ಯೂಸಿಯಂನಲ್ಲಿ ದಿನಗೂಲಿ ಆಧಾರದ ಮೇಲೆ ಸಿಪಾಯಿ ಕೆಲಸ ಮಾಡುತ್ತಿದ್ದ ಮಂಜುಳಾ ದಾಸರ ವಿಷ ಸೇವಿಸಿದ್ದ ಮಹಿಳೆ.
ಕಳೆದ ಐದು ವರ್ಷಗಳಿಂದ ಮ್ಯೂಸಿಯಂನಲ್ಲಿ ಕೆಲಸ ಮಾಡುತ್ತಿದ್ದ ಮಂಜುಳಾ ಅವರನ್ನು ದಿಢೀರನೇ ಕೆಲಸದಿಂದ ತೆಗೆದಿದ್ದಾರೆ ಎಂದು ಆರೋಪಿಸಿ, ಇದರಿಂದ ಮನನೊಂದು ಮ್ಯೂಸಿಯಂ ಮುಖ್ಯ ದ್ವಾರದ ಬಳಿ ನೀರಿನ ಬಾಟಲಿನಲ್ಲಿ ತಂದಿದ್ದ ಕೀಟನಾಶಕ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಸ್ಥಳೀಯರು ಸೇರಿಕೊಂಡು ಟಂಟಂ ವಾಹನದಲ್ಲಿ ಆಸ್ಪತ್ರೆಗೆ ಕಳುಹಿಸಿದರು.
ತಮ್ಮ ಮಗಳು ವಿಷ ಸೇವಿಸಿದ್ದಾಳೆಂದು ತಿಳಿದು ಸ್ಥಳಕ್ಕೆ ಧಾವಿಸಿದ ತಾಯಿ ಕಣ್ಣೀರು ಹಾಕಿದರು. ತಮ್ಮ ಮಗಳನ್ನು ಕೆಲಸದಿಂದ ತೆಗೆಯಬೇಡಿ ಎಂದು ಎಲ್ಲರ ಕಾಲಿಗೆ ಬಿದ್ದು ಬೇಡಿಕೊಂಡರೂ ಯಾರೂ ಸ್ಪಂದಿಸಲಿಲ್ಲ. ಓರ್ವ ಮಗ ಇದ್ದು, ಆಕೆಗೆ ಯಾರೂ ಇಲ್ಲ ಎಂದು ರೋದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net