ಗೋಲಬಾಂವಿ ಕೆರೆಗೆ ನೀರು ಹರಿಸಲು ಚಾಲನೆ

ತೇರದಾಳ ತಾಲೂಕಿನ ಗೋಲಬಾಂವಿ ಗ್ರಾಮದ ಕೆರೆಗೆ ನೀರು ತುಂಬಲಾಗುತ್ತಿರುವುದು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಸಿಬ್ಬಂದಿ ಬಸವರಾಜ ಗುರವ ಇತರರಿದ್ದರು.
ತೇರದಾಳ ತಾಲೂಕಿನ ಗೋಲಬಾಂವಿ ಗ್ರಾಮದ ಕೆರೆಗೆ ನೀರು ತುಂಬಲಾಗುತ್ತಿರುವುದು. ತಹಸೀಲ್ದಾರ್ ವಿಜಯಕುಮಾರ ಕಡಕೋಳ, ಸಿಬ್ಬಂದಿ ಬಸವರಾಜ ಗುರವ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ವಿಜಯಕುಮಾರ ಕಡಕೋಳ ಪರಿಶೀಲನೆ
  • ಜನ-ಜಾನುವಾರುಗಳಿಗೆ ತಾತ್ಕಾಲಿಕ ಪರಿಹಾರ
  • ಕಷ್ಣಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವುದು ಆತಂಕ ಮೂಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ.
ತೇರದಾಳ : ತಲೆಸುಡುವ ಬಿಸಿಲಿನಿಂದ ಕಂಗ್ಗೆಟ್ಟು ಜನರು ಬಾರೋ ಮಳೆರಾಯ, ಪವಮಾನ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ನೀಗಿಸಿದರೆ ಸಾಕಪ್ಪ ಎಂದುಕೊಂಡು ಅಧಿಕಾರಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
ಕಷ್ಣಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿರುವುದು ಆತಂಕ ಮೂಡಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆ ಹಾಗೂ ಸ್ಥಳೀಯ ಆಡಳಿತವು ಕೆರೆಗಳನ್ನು ತುಂಬಿಸುವ ಕಾರ್ಯವನ್ನು ವೇಗಗೊಳಿಸಿದೆ.
ಗೋಲಬಾಂವಿ ಕೆರೆಗೆ ನೀರು ಹರಿಸುವ ಕಾರ್ಯ ಶನಿವಾರ ಆರಂಭಗೊಂಡಿದ್ದು, ಕೆಲವೆಡೆ ಉಂಟಾದ ಅಡಚಣೆಗಳನ್ನು ಪೊಲೀಸರು ಸಹಕಾರದಿಂದ ನಿವಾರಿಸಲಾಗಿದೆ. ಗ್ರಾಮ ಆಡಳಿತಾಧಿಕಾರಿ ಸದಾಶಿವ ಕುಂಬಾರ ಅವರ ಪ್ರಕಾರ, ಕೆರೆಗೆ ಉತ್ತಮ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಜಾನುವಾರುಗಳಿಗೆ ಇದರಿಂದ ಸಹಾಯವಾಗಲಿದೆ. ಅಲ್ಲದೆ, ಗ್ರಾಮ ವಾಸ್ತವ್ಯ ಪ್ರದೇಶದ ಬಳಿಯಿರುವ ಬಸವೇಶ್ವರ ದೇವಸ್ಥಾನದ ಬಾಂದಾರವನ್ನು ಕೂಡ ತುಂಬಿಸುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಹಸೀಲ್ದಾರ್‌ಭೇಟಿ

ತಹಸೀಲ್ದಾರ್ ವಿಜಯಕುಮಾರ ಕಡಕೋಳ ಅವರು ಕೂಡ ಗೋಲಬಾಂವಿ ಕೆರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಹಿಡಕಲ್ ಜಲಾಶಯದಿಂದ ಕಾಲುವೆಗೆ ಹರಿಯುತ್ತಿರುವ ನೀರು ಗೋಲಬಾಂವಿ ಹಾಗೂ ಸಸಾಲಟ್ಟಿ ಕೆರೆಗಳಿಗೆ ತಲುಪುತ್ತಿದೆ ಎಂದು ತಿಳಿಸಿದರು.
ಹನಗಂಡಿ ಗ್ರಾಮದ ಕೆರೆಗೆ ಸೋಮವಾರದೊಳಗೆ ನೀರು ಹರಿಯುವ ಸಾಧ್ಯತೆ ಇದ್ದು, ತೇರದಾಳ ಕೆರೆಗೆ ಇನ್ನೂ ನೀರು ತಲುಪದಿರುವುದರಿಂದ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಈ ನೀರನ್ನು ಮುಖ್ಯವಾಗಿ ಜನ-ಜಾನುವಾರುಗಳ ಅಗತ್ಯಗಳಿಗೆ ಬಳಸುವಂತೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯತ್ ಸಿಬ್ಬಂದಿ, ಲೆಕ್ಕಾಧಿಕಾರಿ ಕಚೇರಿ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯ ಸುಗಮವಾಗಿ ನಡೆಯುತ್ತಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net