ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಕುಸಿತ

ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಹೀಷವಾಡಗಿ ಸೇತುವೆ ತೆರೆದುಕೊಂಡಿದ್ದು.
ರಬಕವಿ ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿದ ಮಹೀಷವಾಡಗಿ ಸೇತುವೆ ತೆರೆದುಕೊಂಡಿದ್ದು.
Published on

ಪ್ರಮುಖ ಮುಖ್ಯಾಂಶಗಳು

  • ಮಹೀಷವಾಡಗಿ ಬ್ಯಾರೇಜ್ ಮೇಲೆ ಸಂಚಾರ ಆರಂಭ
  • ಮರಳು ಗಳ್ಳರ ಚಟುವಟಿಕೆ ಹೆಚ್ಚಳ
ರಬಕವಿ/ಬನಹಟ್ಟಿ: ಸಮೀಪದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ತೀವ್ರವಾಗಿ ಇಳಿದ ಹಿನ್ನೆಲೆ, ಮಹೀಷವಾಡಗಿ ಬ್ಯಾರೇಜ್ ಮೇಲ್ಬಾಗ ತೆರೆಯಲ್ಪಟ್ಟು ಇದೀಗ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ನದಿ ಒಡಲು ಬಹಳಷ್ಟು ಬಯಲಾಗಿರುವುದರಿಂದ ಮರಳು ಸಂಗ್ರಹ ಸ್ಪಷ್ಟವಾಗಿ ಕಾಣಿಸುತ್ತಿದ್ದು, ಇದರಿಂದ ಅಕ್ರಮ ಮರಳು ಗಣಿಗಾರಿಕೆ ಚಟುವಟಿಕೆಗಳು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅಕ್ರಮ ಗಣಿಗಾರಿಕೆಯನ್ನು ಕಟ್ಟುನಿಟ್ಟಾಗಿ ತಡೆಯುವ ಜವಾಬ್ದಾರಿ ಹೊಂದಿದ್ದು, ನದಿ ಪಾತ್ರದ ಮೇಲ್ವಿಚಾರಣೆಯನ್ನು ಬಲಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಕಾನೂನುಬದ್ಧವಾಗಿ ಪರವಾನಿಗೆ ಪಡೆದು ಮರಳು ಗಣಿಗಾರಿಕೆ ನಡೆಸಿದರೆ ಸರ್ಕಾರಕ್ಕೂ ಆದಾಯ ಹೆಚ್ಚಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.
ಅನಧಿಕೃತ ಮರಳು ತೆಗೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net