ನೀರಿನ ಮಿತ ಬಳಕೆ ಅನಿವಾರ್ಯ

ಕಲಾದಗಿ ಸಮೀಪದ ಸೊಕನಾದಗಿ ಗ್ರಾಮದಲ್ಲಿ ಏತನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ಮುಖಂಡರಾದ ಪಾಂಡು ಪೊಲೀಸ್, ಸಂಗಣ್ಣ ಮುಧೋಳ, ಬಸವರಾಜ ಸಂಶಿ, ಸಿದ್ರಾಯಪ್ಪ ರಾಯಪ್ಪನವರ, ಬಿ.ಎಲ್. ನಾವಲಗಿ ಮುಂತಾದವರಿದ್ದರು.
ಕಲಾದಗಿ ಸಮೀಪದ ಸೊಕನಾದಗಿ ಗ್ರಾಮದಲ್ಲಿ ಏತನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿ ಶಾಸಕ ಜೆ.ಟಿ.ಪಾಟೀಲ ಮಾತನಾಡಿದರು. ಮುಖಂಡರಾದ ಪಾಂಡು ಪೊಲೀಸ್, ಸಂಗಣ್ಣ ಮುಧೋಳ, ಬಸವರಾಜ ಸಂಶಿ, ಸಿದ್ರಾಯಪ್ಪ ರಾಯಪ್ಪನವರ, ಬಿ.ಎಲ್. ನಾವಲಗಿ ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜೆ.ಟಿ. ಪಾಟೀಲ
  • ಸೊಕನಾದಗಿಯಲ್ಲಿ 17 ಕೋಟಿ ರೂ. ಏತನೀರಾವರಿ ಯೋಜನೆಗೆ ಚಾಲನೆ
ಕಲಾದಗಿ: ರಾಜ್ಯದಲ್ಲಿ ಬರದ ಮುನ್ಸೂಚನೆ ಗೋಚರಿಸುತ್ತಿದ್ದು, ಜಲಾಶಯಗಳು ಶೀಘ್ರದಲ್ಲೇ ಖಾಲಿಯಾಗುವ ಸಾಧ್ಯತೆ ಇದೆ. ಹೀಗಾಗಿ ಕೃಷಿ, ಕುಡಿಯುವ ನೀರು ಹಾಗೂ ದೈನಂದಿನ ಬಳಕೆಗೆ ಲಭ್ಯವಿರುವ ನೀರನ್ನು ಮಿತವ್ಯಯವಾಗಿ ಬಳಸಿಕೊಳ್ಳುವುದು ಅತ್ಯಗತ್ಯ ಎಂದು ಶಾಸಕ ಜೆ.ಟಿ. ಪಾಟೀಲ ಕರೆ ನೀಡಿದರು.
ಸಮೀಪದ ಸೊಕನಾದಗಿ ಗ್ರಾಮದಲ್ಲಿ 17 ಕೋಟಿ ರೂ. ವೆಚ್ಚದ ಏತನೀರಾವರಿ ಯೋಜನೆಗೆ ಬುಧವಾರ ಭೂಮಿಪೂಜೆ ನೆರವೇರಿಸಿದರು ಮಾತನಾಡಿದ ಅವರು, ಸಣ್ಣ ನೀರಾವರಿ ಇಲಾಖೆಯ ಈ ಯೋಜನೆಯಿಂದ ಸೊಕನಾದಗಿ, ಛಬ್ಬಿ, ದೇವನಾಳ ಹಾಗೂ ತುಳಸಿಗೇರಿ ಗ್ರಾಮಗಳ ಸುಮಾರು 588 ಹೆಕ್ಟೇರ್ (ಸುಮಾರು 1,500 ಎಕರೆ) ಕೃಷಿಭೂಮಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಅಲ್ಲದೆ, ಸುತ್ತಮುತ್ತಲಿನ ಸುಮಾರು 4,000 ಎಕರೆ ಪ್ರದೇಶದಲ್ಲಿ ಅಂತರ್ಜಲ ಮಟ್ಟವೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಬೀಳಗಿ ಕ್ಷೇತ್ರದ ಅಭಿವೃದ್ಧಿಗೆ ಹಿಂದಿನ ಅಽವಯಲ್ಲಿ ಸಾಕಷ್ಟು ಅನುದಾನ ತರಲಾಗಿದ್ದು, ಪ್ರಸ್ತುತ ಸರ್ಕಾರದಿಂದಲೂ ಇನ್ನಷ್ಟು ಅನುದಾನ ಪಡೆದು ಬಾಕಿ ಉಳಿದ ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದ ಜನಪರ ಯೋಜನೆಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದರು.
ಪಾಂಡು ಪೊಲೀಸ್, ಸಂಗಣ್ಣ ಮುಧೋಳ, ಬಸವರಾಜ ಸಂಶಿ, ಸಿದ್ರಾಯಪ್ಪ ರಾಯಪ್ಪನವರ, ಬಿ.ಎಲ್. ನಾವಲಗಿ, ಶ್ರೀಕಾಂತ ಜೈನಾಪುರ, ವಿಷ್ಣುಗೌಡ ಪಾಟೀಲ, ಅರ್ಜುಣ ಪರೆಡ್ಡಿ, ಚಂದ್ರಶೇಖರ ಸಾಳಗುಂದಿ, ಭೀಮಪ್ಪ ಕುಂದರಗಿ, ರಾಮಣ್ಣ ಸೊನ್ನದ, ಶೇಖರ ದೇಸಾಯಿ ಹಾಗೂ ಗುತ್ತಿಗೆದಾರ ಎಸ್.ಬಿ. ಪಾಟೀಲ ಸೇರಿ ಹಲವು ಮುಖಂಡರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net