ವೆಂಕಟೇಶ್ವರ ಏತ ನೀರಾವರಿ ನೀರು ಪೋಲು

 ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಕುಲಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಸೀಮಿ ಲಕ್ಕಮ್ಮ ದೇವಸ್ಥಾನದ ಪಕ್ಕದ ವೆಂಕಟೇಶ್ವರ ಲ್‌ಟಿ ಇರಿಗೇಶನ್ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು.
ರಬಕವಿ ಬನಹಟ್ಟಿ ತಾಲೂಕಿನ ನಾವಲಗಿ ಕುಲಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಸೀಮಿ ಲಕ್ಕಮ್ಮ ದೇವಸ್ಥಾನದ ಪಕ್ಕದ ವೆಂಕಟೇಶ್ವರ ಲ್‌ಟಿ ಇರಿಗೇಶನ್ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನಾವಲಗಿ ಸಮೀಪ ಅಪಾರ ಜಲ ರಸ್ತೆ ಪಾಲು
  • ಕ್ರಮಕ್ಕೆ ರೈತರ ಆಗ್ರಹ
  • ವೆಂಕಟೇಶ್ವರ ಲಿಫ್ಟ್​ ಇರಿಗೇಶನ್ ಕಾಲುವೆ
ರಬಕವಿ/ಬನಹಟ್ಟಿ : ಬರಗಾಲದ ಛಾಯೆ ಎದುರಾಗಿರುವ ಸಂದರ್ಭದಲ್ಲಿ ರೈತರು ನೀರಿಗಾಗಿ ಪರದಾಡುತ್ತಿರುವುದರ ನಡುವೆ, ತಾಲೂಕಿನ ನಾವಲಗಿ ಕುಲಹಳ್ಳಿ ಗ್ರಾಮದ ಮಧ್ಯಭಾಗದಲ್ಲಿರುವ ಸೀಮಿ ಲಕ್ಕಮ್ಮ ದೇವಸ್ಥಾನದ ಪಕ್ಕದ ವೆಂಕಟೇಶ್ವರ ಲಿಫ್ಟ್​ ಇರಿಗೇಶನ್ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಪೋಲಾಗುತ್ತಿರುವುದು ಶನಿವಾರ ಬೆಳಗ್ಗೆಯಿಂದ ಕಂಡು ಬಂದಿದೆ.
ವೆಂಕಟೇಶ್ವರ ಲಿಫ್ಟ್​ ಇರಿಗೇಶನ್ ಕಾಲುವೆಯು ಸಂಜಯ ಚಂದರಗಿ ಫಾರ್ಮ್‌ಹೌಸ್‌ಗೆ ಹೋಗುವ ರಸ್ತೆಯುದ್ದಕ್ಕೂ ನೀರು ಪೋಲಾಗುತಿದ್ದು, ಇದರಿಂದ ಒಂದು ಕಡೆ ರೈತರು ನೀರಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ನೀರು ಪೋಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೃಷ್ಣಾ ನದಿಯಿಂದ ಲಿಫ್ಟ್ ಮೂಲಕ ಅಪಾರ ಪ್ರಮಾಣದ ನೀರನ್ನು ರೈತರ ಹೊಲ, ಗದ್ದೆಗಳಿಗೆ ಅನುಕೂಲವಾಗಲು ಈ ಯೋಜನೆ ರೂಪಿಸಿದ್ದು, ಆದರೆ ನೀರು ಇಲ್ಲಿ ಪೋಲಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ, ಕಾಲುವೆಯಿಂದ ಪೋಲಾಗುತ್ತಿರುವ ನೀರನ್ನು ತಡೆದು, ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net