ರಾಷ್ಟ್ರೀಯ ಚುನಾವಣೆ ಮಾದರಿಯಲ್ಲೇ ಮತದಾನ

ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್‌ನಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ ವಿದ್ಯಾರ್ಥಿನಿ.
ಬಾಗಲಕೋಟೆ ಬಸವೇಶ್ವರ ಹೈಸ್ಕೂಲ್‌ನಲ್ಲಿ ನಡೆದ ಶಾಲಾ ಸಂಸತ್ ಚುನಾವಣೆಯಲ್ಲಿ ಮತದಾನ ಮಾಡಿದ ವಿದ್ಯಾರ್ಥಿನಿ.
Published on

ಪ್ರಮುಖ ಮುಖ್ಯಾಂಶಗಳು

  • ವಿವಿಧ ಹುದ್ದೆಗಳಿಗೆ ಒಟ್ಟು 12 ಅಭ್ಯರ್ಥಿಗಳ ಸ್ಪರ್ಧೆ
  • ಪ್ರಜಾಪ್ರಭುತ್ವದ ಪಾಠ ಕಲಿತ ವಿದ್ಯಾರ್ಥಿಗಳು
ಬಾಗಲಕೋಟೆ: ಬಿವಿವಿ ಸಂಘದ ಬಸವೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಶಾಲಾ ಸಂಸತ್ ಚುನಾವಣೆ ಶನಿವಾರ ನಡೆಯಿತು.
ವಿದ್ಯಾರ್ಥಿಗಳಲ್ಲಿ ಪ್ರಜಾಪ್ರಭುತ್ವದ ಅರಿವು, ಮತದಾನದ ಮಹತ್ವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಚುನಾವಣೆಯನ್ನು ಆಯೋಜಿಸಲಾಗಿತ್ತು.
ವಿವಿಧ ಹುದ್ದೆಗಳಿಗೆ ಒಟ್ಟು 12 ಅಭ್ಯರ್ಥಿಗಳು ಸ್ಪಧಿðಸಿದ್ದು, ಅಭ್ಯರ್ಥಿಗಳು ತಮ್ಮ ಚುನಾವಣಾ ಭರವಸೆಗಳು ಹಾಗೂ ಕಾರ್ಯ ಯೋಜನೆಗಳನ್ನು ವಿದ್ಯಾರ್ಥಿಗಳ ಮುಂದೆ ಮಂಡಿಸಿದರು. ನಂತರ ರಹಸ್ಯ ಮತದಾನದ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು.ರಾಷ್ಟ್ರೀಯ ಚುನಾವಣೆ ಮಾದರಿಯಲ್ಲೇ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆ ನಡೆಸಿ, ಫಲಿತಾಂಶವನ್ನು ಘೋಷಿಸಲಾಯಿತು.
ಶಾಲೆಯ ಒಟ್ಟು 1,025 ವಿದ್ಯಾರ್ಥಿಗಳ ಪೈಕಿ ವರ್ಗವಾರು ಆಯ್ಕೆಯಾದ 64 ಮತದಾರರು ತಮ್ಮ ಮತ ಚಲಾಯಿಸಿ ಪ್ರತಿನಿಽಗಳನ್ನು ಆಯ್ಕೆ ಮಾಡಿದರು. ಈ ಮೂಲಕ ವಿದ್ಯಾರ್ಥಿಗಳಿಗೆ ಚುನಾವಣಾ ಪ್ರಕ್ರಿಯೆ, ಮತದಾನದ ಜವಾಬ್ದಾರಿ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ಪ್ರಾಯೋಗಿಕ ಅರಿವು ಮೂಡಿಸಲಾಯಿತು.
ಉಪ ಪ್ರಾಚಾರ್ಯ ಎಸ್.ಕೆ. ರಾಥೋಡ, ಶಾಲಾ ಸಂಸತ್ ಸಂಯೋಜಕ ಎಂ.ವೈ. ಕೂಗನವರ, ಆರ್.ವಿ. ಮುದಿಉಪ್ಪನವರ, ಆರ್.ಎಸ್. ಕ್ಯಾತನ್ನವರ, ಎಸ್.ಬಿ. ಗಲಗಲಿ, ಡಿ.ಎಸ್.ಎಸ್. ಬದಾಮಿ, ಎಸ್.ಬಿ. ಮಡಿವಾಳರ, ಆರ್.ಎಂ. ಬೆಣ್ಣೂರ, ಎಚ್.ಎ. ಪಾಟೀಲ, ಪಿ.ಆರ್. ಬಿಲ್ಲಾರ, ಆರ್.ಜಿ. ಕುಲಕರ್ಣಿ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net