ಸ್ವಯಂಪ್ರೇರಿತ ರಕ್ತದಾನ ಸಮಾಜಕ್ಕೆ ಅಮೂಲ್ಯ ಕೊಡುಗೆ

ಬಾದಾಮಿಯಲ್ಲಿ ಎಸ್‌ಬಿಐ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ನಿವತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಮಾತನಾಡಿದರು. ಎಸ್‌ಬಿಐ ಶಾಖಾ ವ್ಯವಸ್ಥಾಪಕ ಶಂಭುಕುಮಾರ ಸಾಹು, ಎಂ.ಎಸ್. ಹಿರೇಮಠ, ಶೇಷಗಿರಿರಾವ್ ಕಾರಕೂನ್ ಇತರರಿದ್ದರು.
ಬಾದಾಮಿಯಲ್ಲಿ ಎಸ್‌ಬಿಐ ವತಿಯಿಂದ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ನಿವತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಮಾತನಾಡಿದರು. ಎಸ್‌ಬಿಐ ಶಾಖಾ ವ್ಯವಸ್ಥಾಪಕ ಶಂಭುಕುಮಾರ ಸಾಹು, ಎಂ.ಎಸ್. ಹಿರೇಮಠ, ಶೇಷಗಿರಿರಾವ್ ಕಾರಕೂನ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಿವತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಕರೆ
  • ರಕ್ತದಾನವು ಜೀವದಾನಕ್ಕೆ ಸಮಾನವಾಗಿದೆ
  • ಸ್ವಯಂಪ್ರೇರಿತ ರಕ್ತದಾನ ಶಿಬಿರ
ಬಾದಾಮಿ: ರಕ್ತದಾನವು ಜೀವದಾನಕ್ಕೆ ಸಮಾನವಾಗಿದೆ ಎಂದು ನಿವತ್ತ ಪ್ರಾಚಾರ್ಯ ಜಿ.ಬಿ. ಶೀಲವಂತರ ಹೇಳಿದರು.
ನಗರದ ರಾಮದುರ್ಗ ರಸ್ತೆಯ ಎಸ್‌ಬಿಐ ಆವರಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಬಾದಾಮಿ ಶಾಖೆ ಹಾಗೂ ಬನಶಂಕರಿ ರಕ್ತ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅಗತ್ಯವಿರುವವರ ಜೀವ ಉಳಿಸಲು ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಎಸ್‌ಬಿಐ ಬ್ಯಾಂಕಿನ ಕಾನೂನು ಸಲಹೆಗಾರ ಎಂ.ಎಸ್. ಹಿರೇಮಠ ಮಾತನಾಡಿ, ಬ್ಯಾಂಕ್ ಹಣಕಾಸು ಸೇವೆಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯ ಕಾರ್ಯಕ್ರಮಗಳಿಗೂ ಆದ್ಯತೆ ನೀಡುತ್ತಿದ್ದು, ರಕ್ತದಾನ ಶಿಬಿರಗಳು ಹಾಗೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಕಾರ್ಯಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ ಎಂದು ತಿಳಿಸಿದರು.
ಎಸ್‌ಬಿಐ ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರು ಸೇರಿ 20 ಮಂದಿ ರಕ್ತದಾನ ಮಾಡಿದರು. ದಾವಣಗೆರೆಯ ಮಹಡಿಮನೆ ಶಿವಕುಮಾರ ಅವರು 108ನೇ ಬಾರಿ ರಕ್ತದಾನ ಮಾಡುವ ಮೂಲಕ ಮಾನವೀಯತೆ ಮೆರೆದರು.
ಎಸ್‌ಬಿಐ ಶಾಖಾ ವ್ಯವಸ್ಥಾಪಕ ಶಂಭುಕುಮಾರ ಸಾಹು ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರಾಧಿಕಾರಿ ಶೇಷಗಿರಿರಾವ್ ಕಾರಕೂನ್, ಸೇವಾ ವ್ಯವಸ್ಥಾಪಕ ಶಿವಾನಂದ ವಡತಿಲ್ಲೆ, ಕ್ಯಾಶಿಯರ್ ಧೂಳಪ್ಪ ಕಿತ್ತಲಿ, ಬನಶಂಕರಿ ರಕ್ತ ಕೇಂದ್ರದ ಮುಖ್ಯಸ್ಥ ಮುತ್ತು ಶೆಟ್ಟಿ, ಸಿಬ್ಬಂದಿ ಪ್ರಕಾಶ ಚಲವಾದಿ ಸೇರಿ ಬ್ಯಾಂಕ್ ಸಿಬ್ಬಂದಿ, ಗ್ರಾಹಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net