ಜಮಖಂಡಿ ತಾಲೂಕಿನ ಕೊಣ್ಣೂರ ಗ್ರಾ.ಪಂ. ಆವರಣದಲ್ಲಿ ಪಿಡಿಒ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಧರಣಿ ನಡೆಸಿದರು. ಮಲ್ಲಪ್ಪ ಮಲಘಾಣ, ರುದ್ರಪ್ಪ ಜಾನಮಟ್ಟಿ, ಮಂಜು ನೆಂಬರಗಿ, ಮಹಮ್ಮದ ಪೆಂಡಾರಿ, ತಾ.ಪಂ. ಮಾಜಿ ಸದಸ್ಯ ಭಿಮಶಿ ಹಾದಿಮನಿ ಇತರರಿದ್ದಾರೆ.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಿಡಿಒ ವಜಾಕ್ಕೆ ಆಗ್ರಹ
ಧರಣಿ ಸತ್ಯಾಗ್ರಹ
ಜಮಖಂಡಿ: ತಾಲೂಕಿನ ಕೊಣ್ಣೂರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದು ಬಿರಾದಾರ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಶುಕ್ರವಾರದಿಂದ ಗ್ರಾ.ಪಂ. ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಪಿಡಿಒ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸಿನ ಅವ್ಯವಹಾರ ನಡೆಸಿದ್ದಾರೆ. ಯಾವುದೇ ಕೆಲಸ ಮಾಡದೆಯೇ ಹಣ ಪಡೆದು ಬಿಲ್ ಮಾಡಿಕೊಂಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಅವರ ತಂಡ ನಡೆಸಿದ ತನಿಖೆಯಲ್ಲೂ ಅವರ ಅವ್ಯವಹಾರ ಸಾಬೀತಾಗಿದೆ. ಆದರೂ ಅಧಿಕಾರಿಗಳು ಅವರನ್ನು ವಜಾಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಪಿಡಿಒ ಸಿದ್ದು ಬಿರಾದಾರ ಅವರನ್ನು ವಜಾಗೊಳಿಸುವವರೆಗೂ ನಮ್ಮ ಧರಣಿ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.