ಎತ್ತಿನ ಬಂಡಿ ಸಮೇತ ಗ್ರಾಮಸ್ಥರ ಪ್ರತಿಭಟನೆ

ಹುನಗುಂದ ತಹಸೀಲ್ದಾರ ಕಚೇರಿ ಎದುರು ಚಿಕ್ಕಬಾದವಾಡಗಿ ಗ್ರಾಮಸ್ಥರು ಎತ್ತಿನ ಬಂಡಿಗಳ ಸಮೇತ ಮಂಗಳವಾರ ಪ್ರತಿಭಟನೆ ನಡೆಸಿದರು. ಮುಖಂಡರಾದ ಬಸವರಾಜ ಹೊರಕೇರಿ, ಪರನಗೌಡ ಪಾಟೀಲ, ಸಂಗಪ್ಪ ಗೋಡಿ, ಸಂಗನಬಸಪ್ಪ ಉಪನಾಳ ಇತರರಿದ್ದರು.
ಹುನಗುಂದ ತಹಸೀಲ್ದಾರ ಕಚೇರಿ ಎದುರು ಚಿಕ್ಕಬಾದವಾಡಗಿ ಗ್ರಾಮಸ್ಥರು ಎತ್ತಿನ ಬಂಡಿಗಳ ಸಮೇತ ಮಂಗಳವಾರ ಪ್ರತಿಭಟನೆ ನಡೆಸಿದರು. ಮುಖಂಡರಾದ ಬಸವರಾಜ ಹೊರಕೇರಿ, ಪರನಗೌಡ ಪಾಟೀಲ, ಸಂಗಪ್ಪ ಗೋಡಿ, ಸಂಗನಬಸಪ್ಪ ಉಪನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ ಕಚೇರಿ ಎದುರು ಹೋರಾಟ
  • ರಸ್ತೆ ಸಂಪರ್ಕ ಕಲ್ಪಿಸುವಂತೆ ಆಗ್ರಹ
  • ಡಾಂಬರಿಕರಣವಾಗದ ಪರಿಣಾಮ ನಿತ್ಯವು ಅಪಘಾತ ಸಂಭವಿಸಿ ಆಸ್ಪತ್ರೆಗೆ ಗ್ರಾಮಸ್ಥರು ದಾಖಲಾಗುತ್ತಿದ್ದಾರೆ.
ಹುನಗುಂದ: ರಸ್ತೆ ಸಂಪರ್ಕ ಇಲ್ಲದೇ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಿ ತಾಲೂಕಿನ ಚಿಕ್ಕಬಾದವಾಡಗಿ ಗ್ರಾಮಸ್ಥರು ತಹಸೀಲ್ದಾರ ಕಚೇರಿ ಎದುರು ಎತ್ತಿನ ಬಂಡಿಗಳ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು.
ಹುನಗುಂದ- ಚಿತ್ತವಾಡಗಿ ದಾರಿಯಲ್ಲಿರುವ ಚಿಕ್ಕಬಾದಾವಾಡಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಅಂದಾಜು ಅರ್ಧ ಕಿಮೀ. ರಸ್ತೆ ಡಾಂಬರಿಕರಣ ಕಾಮಗಾರಿ ಏಕಾಏಕಿ ನಿಲ್ಲಿಸಲಾಗಿದೆ. ಗ್ರಾಮ ನಕಾಶೆ ದಾಖಲೆಯಲ್ಲಿ ಈ ರಸ್ತೆಯೇ ಇಲ್ಲದ್ದರಿಂದ ಜಮೀನಿನ ಮಾಲೀಕರೊಬ್ಬರು ತಡೆಯೋಡ್ಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಡಾಂಬರಿಕರಣವಾಗದ ಪರಿಣಾಮ ನಿತ್ಯವು ಅಪಘಾತ ಸಂಭವಿಸಿ ಆಸ್ಪತ್ರೆಗೆ ಗ್ರಾಮಸ್ಥರು ದಾಖಲಾಗುತ್ತಿದ್ದಾರೆ. ವಾಹನಗಳ ಸಂಚಾರಕ್ಕೂ ತೀವ್ರ ಅಡೆತಡೆ ಉಂಟಾಗಿದೆ. ಯಾರೊಬ್ಬರು ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಕಿಡಿಕಾರಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಗ್ರಾಮಸ್ಥರು ಹಾಗೂ ಜಮೀನು ಮಾಲೀಕನೊಂದಿಗೆ ಮಾತುಕತೆ ನಡೆಸಿ ಪರಿಹರಿಸಲಾಗುವುದು. ಸರ್ವೇ ನಡೆಸಿ ಭೂ ಸ್ವಾಧೀನಕ್ಕೆ ಪ್ರಯತ್ನಿಸಲಾಗುವುದು. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮನವಿ ಮಾಡಿದರು.
ಮುಖಂಡರಾದ ಬಸವರಾಜ ಹೊರಕೇರಿ, ಪರನಗೌಡ ಪಾಟೀಲ, ಸಂಗಪ್ಪ ಗೋಡಿ, ಸಂಗನಬಸಪ್ಪ ಉಪನಾಳ, ಸಿಂಗಾರಿಗೌಡ ಪಾಟೀಲ ಗುರಪ್ಪ ವಂದಾಲಿ, ಮಲ್ಲಪ್ಪ ಉಪನಾಳ, ನಿಂಗನಗೌಡ ಗೌಡರ, ಭೀಮನಗೌಡ ಗೌಡ್ರ, ಅಶೋಕ ಗೌಡರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net