ಬಂಕ್ ಎದುರು ಸಾಲುಗಟ್ಟಿದ ವಾಹನಗಳು

 ಗುಳೇದಗುಡ್ಡ ಪಟ್ಟಣದ ಆಸಂಗಿ ರಸ್ತೆಯಲ್ಲಿನ ಬಾಲಾಜಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ವಾಹನಗಳು.
ಗುಳೇದಗುಡ್ಡ ಪಟ್ಟಣದ ಆಸಂಗಿ ರಸ್ತೆಯಲ್ಲಿನ ಬಾಲಾಜಿ ಪೆಟ್ರೋಲ್ ಬಂಕ್‌ನಲ್ಲಿ ಸಾಲುಗಟ್ಟಿ ನಿಂತ ವಾಹನಗಳು.
Published on

ಪ್ರಮುಖ ಮುಖ್ಯಾಂಶಗಳು

  • ಪೆಟ್ರೋಲ್ ಅಭಾವದ ವದಂತಿ
  • ಪೆಟ್ರೋಲ್ ಬಂಕ್ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ
  • ಕೊಲ್ಲಿಯಲ್ಲಿನ ಯುದ್ಧದಿಂದಾಗಿ ಪೆಟ್ರೋಲ್, ಡಿಸೇಲ್ ಅಭಾವವಾಗಲಿದೆ ಎಂಬ ವದಂತಿ ವಾಹನ ಸವಾರರನ್ನು ನಿದ್ದೆಗೆಡಿಸಿದೆ
ಗುಳೇದಗುಡ್ಡ: ಪೆಟ್ರೋಲ್ ಹಾಗೂ ಡಿಸೇಲ್ ಅಭಾವದ ವದಂತಿ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಪಟ್ಟಣದ ಪೆಟ್ರೋಲ್ ಬಂಕ್ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ದೃಶ್ಯ ಪಟ್ಟಣದಲ್ಲಿ ಕಂಡು ಬಂದಿತು.
ಕೊಲ್ಲಿಯಲ್ಲಿನ ಯುದ್ಧದಿಂದಾಗಿ ಪೆಟ್ರೋಲ್, ಡಿಸೇಲ್ ಅಭಾವವಾಗಲಿದೆ ಎಂಬ ವದಂತಿ ವಾಹನ ಸವಾರರನ್ನು ನಿದ್ದೆಗೆಡಿಸಿದೆ. ಅದರಲ್ಲೂ ಬೈಕ್ ಸವಾರರು ಇಂಧನ ಖಾಲಿಯಾಗುವ ಭೀತಿಯಿಂದ ಪೆಟ್ರೋಲ್ ಬಂಕ್ ಎದುರು ಜಮಾಯಿಸುತ್ತಿದ್ದಾರೆ.
ಪಟ್ಟಣದಲ್ಲಿ ಒಟ್ಟು ಮೂರು ಪೆಟ್ರೋಲ್ ಬಂಕ್‌ಗಳಿದ್ದು, ಬಸ್ ನಿಲ್ದಾಣದ ಬಳಿಯ ಧುತ್ತರಗಿ ಪೆಟ್ರೋಲ್ ಬಂಕ್, ಬಾಗಲಕೋಟ ರಸ್ತೆಯ ಬಳಿ ಇರುವ ಭಾರತ ಪೆಟ್ರೋಲಿಯಂ ಬಂಕ್ ಹಾಗೂ ಬಾಲಾಜಿ ಪೆಟ್ರೋಲ ಬಂಕ್ ಎದುರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪೆಟ್ರೋಲ್, ಡಿಸೇಲ್‌ಗಾಗಿ ಯಾರೂ ಆತಂಕ ಪಡಬಾರದು, ನಮ್ಮ ಕಂಪನಿಯಿಂದ ಪೆಟ್ರೋಲ್, ಡಿಸೇಲ್ ಬೇಡಿಕೆಗೆ ತಕ್ಕಂತೆ ಸರಬರಾಜು ಆಗುತ್ತಿದೆ. ಬಿಸಿಲಿನ ಧಗೆಯಿಂದಾಗಿ ಈಗ ಬಾಟಲಿ ಹಾಗೂ ಕ್ಯಾನ್‌ನಲ್ಲಿ ಪೆಟ್ರೋಲ್ ಹಾಕಿಕೊಡುವುದಿಲ್ಲ. ಗ್ರಾಹಕರು ಯಾವುದೇ ಆತಂಕ ಪಡದೇ ವಾಹನಗಳನ್ನು ತಂದು ಇಂಧನ ಭರ್ತಿ ಮಾಡಿಕೊಳ್ಳಬೇಕೆಂದು ಬಂಕ್‌ಗಳ ಮಾಲೀಕರು ಪ್ರತಿಕ್ರಿಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net