ಇಬ್ಬರು ಅಂತಾರಾಜ್ಯ ಕಳ್ಳರ ಬಂಧನ

ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳುವಾದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯೆಲ್, ಜಮಖಂಡಿ  ಪೊಲೀಸ್ ಉಪಾಧೀಕ್ಷಕರು ಎಸ್. ಜಮೀರ ಮತ್ತು ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ ಇತರರಿದ್ದರು.
ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಳುವಾದ ವಸ್ತುಗಳನ್ನು ಪ್ರದರ್ಶಿಸಲಾಯಿತು. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯೆಲ್, ಜಮಖಂಡಿ ಪೊಲೀಸ್ ಉಪಾಧೀಕ್ಷಕರು ಎಸ್. ಜಮೀರ ಮತ್ತು ರಬಕವಿ-ಬನಹಟ್ಟಿ ಸಿಪಿಐ ಆರ್.ಆರ್. ಪಾಟೀಲ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 22.49 ಲಕ್ಷ ರೂ. ಮೌಲ್ಯದ ವಸ್ತುಗಳ ವಶ
  • ಮಾಲೀಕರಿಗೆ ಕೆಲವು ವಸ್ತುಗಳ ಹಸ್ತಾಂತರ
  • 62 ಗ್ರಾಂ ಬಂಗಾರದ ಆಭರಣಗಳು (13.34 ಲಕ್ಷ ರೂ.) ಹಾಗೂ 30 ಮೊಬೈಲ್ ಫೋನ್‌ಗಳು (9.15 ಲಕ್ಷರೂ.) ಪತ್ತೆಯಾಗಿವೆ
ಮಹಾಲಿಂಗಪುರ : ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪೊಲೀಸರು ಒಟ್ಟು ರೂ. 22.49 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು, ಅವುಗಳಲ್ಲಿ ಕೆಲವು ವಸ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದರು.
ವಿವಿಧ ಪ್ರಕರಣಗಳಲ್ಲಿ ಒಟ್ಟು 62 ಗ್ರಾಂ ಬಂಗಾರದ ಆಭರಣಗಳು (13.34 ಲಕ್ಷ ರೂ.) ಹಾಗೂ 30 ಮೊಬೈಲ್ ಫೋನ್‌ಗಳು (9.15 ಲಕ್ಷರೂ.) ಪತ್ತೆಯಾಗಿವೆ. ಸಮೀರವಾಡಿಯ ಮಂಜುನಾಥ ಹಕ್ಕಲ ಅವರ ಮನೆಯಿಂದ 32 ಗ್ರಾಂ. ಬಂಗಾರ ಮತ್ತು ಶಿವಾಪೂರ ಗ್ರಾಮದ ಮಂಜುಳಾ ಪಾಟೀಲ್ ಅವರ 30 ಗ್ರಾಂ ಮಂಗಳಸೂತ್ರ ಕಳವಾಗಿದ್ದವು.
ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೋಲಾಪುರ ಮೂಲದ ಗೋರಕನಾಥ ಜಾಧವ ಹಾಗೂ ಬಸವ್ವ ಸಿದ್ದಪ್ಪ ಭದ್ರಶೆಟ್ಟಿ ಎಂಬ ಆರೋಪಿತರನ್ನು ಬಂಧಿಸಿ, ಕಳುವಾದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದೆ. ಅಲ್ಲದೆ, ಸಿಇಆರ್ ಪೋರ್ಟಲ್ ಬಳಸಿ 2026ರಲ್ಲಿ ಕಳೆದುಹೋದ 30 ಮೊಬೈಲ್‌ಗಳನ್ನು ಪತ್ತೆ ಹಚ್ಚಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಸಿದ್ಧಾರ್ಥ ಗೋಯೆಲ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಅಧೀಕ್ಷಕ ಎಂ. ಜಗದೀಶ, ಡಿವೈಎಸ್ಪಿ ಎಸ್. ಜಮೀರ ಮತ್ತು ಸಿಪಿಐ ಆರ್.ಆರ್. ಪಾಟೀಲ ನೇತತ್ವದಲ್ಲಿ ಪಿಎಸ್‌ಐ ಶಾಂತಾಹಳ್ಳಿ, ಕಿರಣಕುಮಾರ ಸತ್ತಿಗೇರಿ ಸೇರಿ ತಂಡ ಈ ಕಾರ್ಯಾಚರಣೆ ನಡೆಸಿತು. ಯಶಸ್ವಿ ಕಾರ್ಯಾಚರಣೆಗೆ ಪೊಲೀಸ್ ಸಿಬ್ಬಂದಿಗೆ ಎಸ್‌ಪಿ ಬಹುಮಾನ ಘೋಷಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net