ಇಬ್ಬರು ಅಂತಾರಾಜ್ಯ ಶ್ರೀಗಂಧ ಕಳ್ಳರ ಬಂಧನ

ಬೀಳಗಿ ಅಮಲಝರಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಬಂಽಸಿ, ವಶಪಡಿಸಿಕೊಂಡ ಶ್ರೀಗಂಧ ಕಟ್ಟಿಗೆಯೊಂದಿಗೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ. ಆರ್‌ಎಫ್‌ಒ ಅಮೃತ ಗಂಡೋಸಿ, ಸಿಬ್ಬಂದಿ ಬಿ.ಜಿ. ಕಮತಾರ, ಪ್ರಭು ಗುಡ್ಡಕಾರ, ವಿದ್ಯಾನಂದ ಹೊಸಮನಿ, ಯಲ್ಲಪ್ಪ ಹಿರೇಕುರಬರ, ವಿಠ್ಠಲ ಮುಲಿಮನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಯಡಹಳ್ಳಿ ಚಿಂಕಾರ ಅರಣ್ಯ ಪ್ರದೇಶ
  • 397.227 ಕೆ.ಜಿ. ತೂಕದ ಶ್ರೀಗಂಧದ ಕಟ್ಟಿಗೆ ವಶ
ಬೀಳಗಿ: ತಾಲೂಕಿನ ಅಮಲಝರಿ ಗ್ರಾಮದ ಯಡಹಳ್ಳಿ ಚಿಂಕಾರ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಶ್ರೀಗಂಧದ ಮರಗಳನ್ನು ಕಡಿದು ಸಾಗಿಸುತ್ತಿದ್ದ ಅಂತಾರಾಜ್ಯ ಕಳ್ಳರ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಮಿಂಚಿನ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಽಕಾರಿಗಳು, ಅರಣ್ಯ ಸರ್ವೇ ನಂ. 258ರಲ್ಲಿ ಕಡಿದು ತುಂಡುಗಳಾಗಿಸಿದ್ದ 397.227 ಕೆ.ಜಿ. ತೂಕದ ಶ್ರೀಗಂಧ ಕಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ಮಧ್ಯಪ್ರದೇಶ ಹಾಗೂ ಮಹಾರಾಷ್ಟç ಮೂಲದವರಾಗಿದ್ದು, ಅಕ್ರಮವಾಗಿ ಶ್ರೀಗಂಧ ಸಾಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಶಪಡಿಸಿಕೊಂಡಿರುವ ಶ್ರೀಗಂಧದ ಮೌಲ್ಯದ ಕುರಿತು ಅರಣ್ಯ ಇಲಾಖೆ ಮಾಹಿತಿ ಸಂಗ್ರಹಿಸುತ್ತಿದೆ ಎಂದು ಅಽಕಾರಿಗಳು ತಿಳಿಸಿದ್ದಾರೆ.
ಬಾಗಲಕೋಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಕಾರಿ ಸ್ವಪ್ನಿಲ್ ಅಹಿರೇ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರದೀಪ್ ರಾಠೋಡ್ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಆರ್‌ಎಫ್‌ಒ ಅಮೃತ ಗಂಡೋಸಿ, ಸಿಬ್ಬಂದಿ ಬಿ.ಜಿ. ಕಮತಾರ, ಪ್ರಭು ಗುಡ್ಡಕಾರ, ವಿದ್ಯಾನಂದ ಹೊಸಮನಿ, ಯಲ್ಲಪ್ಪ ಹಿರೇಕುರಬರ, ವಿಠ್ಠಲ ಮುಲಿಮನಿ, ಅಶೋಕ ಪೂಜಾರಿ, ಶಿವಾಜಿ ಮಾದರ, ಪೀರಪ್ಪ, ಗಣೇಶ, ಮಹಾಂತೇಶ ಸೇರಿ ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net