ಅರಿಶಿಣಕ್ಕೆ ಮೌಲ್ಯವರ್ಧನೆ ಅಗತ್ಯ

 ಮಹಾಲಿಂಗಪುರದಲ್ಲಿ ನಡೆದ ರಾಜ್ಯಮಟ್ಟದ ಅರಿಶಿಣ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಅರಿಶಿಣ ಬೆಳೆ ಕೈಪಿಡಿ ಬಿಡುಗಡೆಗೊಳಿಸಲಾಯಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ,ತೋವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಕ್ರುದ್ದೀನ್, ಪ್ರಗತಿಪರ ರೈತ ವೆಂಕಟೇಶ ಗುಂಡಾ ಮತ್ತಿತರರಿದ್ದರು.
ಮಹಾಲಿಂಗಪುರದಲ್ಲಿ ನಡೆದ ರಾಜ್ಯಮಟ್ಟದ ಅರಿಶಿಣ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಅರಿಶಿಣ ಬೆಳೆ ಕೈಪಿಡಿ ಬಿಡುಗಡೆಗೊಳಿಸಲಾಯಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ,ತೋವಿವಿ ಸಂಶೋಧನಾ ನಿರ್ದೇಶಕ ಡಾ.ಬಿ.ಕ್ರುದ್ದೀನ್, ಪ್ರಗತಿಪರ ರೈತ ವೆಂಕಟೇಶ ಗುಂಡಾ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಬಿ. ಫಕ್ರುದ್ದೀನ್ ಹೇಳಿಕೆ
  • ತಜ್ಞರ ಮಾಹಿತಿಯನ್ನು ರೈತರು ಅಳವಡಿಸಿಕೊಳ್ಳಬೇಕು
  • ಔಷಧೀಯ ಗುಣ ಹೊಂದಿರುವ ಅರಿಶಿಣ ಬೆಳೆ ಕರ್ನಾಟಕದ ಪಾರಂಪರಿಕ ಬೆಳೆ
ಮಹಾಲಿಂಗಪುರ: ಔಷಧೀಯ ಗುಣ ಹೊಂದಿರುವ ಅರಿಶಿಣ ಬೆಳೆ ಕರ್ನಾಟಕದ ಪಾರಂಪರಿಕ ಬೆಳೆಯಾಗಿದ್ದು, ರೈತರ ಆದಾಯ ಹೆಚ್ಚಿಸಲು ಮೌಲ್ಯವರ್ಧನೆ ಅನಿವಾರ್ಯವಾಗಿದೆ ಎಂದು ಬಾಗಲಕೋಟ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ. ಬಿ. ಫಕ್ರುದ್ದೀನ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಬಾಗಲಕೋಟ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಅಡಿಕೆ ಮತ್ತು ಸಾಂಬಾರ ಪದಾರ್ಥಗಳ ಅಭಿವೃದ್ಧಿ ನಿರ್ದೇಶನಾಲಯ ಕಲ್ಲಿಕೋಟೆ ಹಾಗೂ ತೋಟಗಾರಿಕೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಅರಿಶಿಣ ಬೆಳೆ ಸುಧಾರಿತ ಬೇಸಾಯ ಮತ್ತು ಮಾರುಕಟ್ಟೆ ಅವಕಾಶಗಳ ಕುರಿತ ರಾಜ್ಯಮಟ್ಟದ ತಾಂತ್ರಿಕ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ 10 ರಿಂದ 15 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದ್ದು, ನಾಟಿ ವಿಧಾನ, ಅಂತರ, ಸಸಿ ಗಾತ್ರ, ಹಂತವಾರು ನಿರ್ವಹಣೆ, ಸಮಯೋಚಿತ ಕಟಾವು ಹಾಗೂ ಮಾರುಕಟ್ಟೆ ಆಯ್ಕೆ ಲಾಭದಾಯಕ ಕೃಷಿಗೆ ಮಹತ್ವದ್ದೆಂದರು. ಈ ಹಿನ್ನೆಲೆಯಲ್ಲಿ ತಜ್ಞರು ನೀಡುವ ಮಾಹಿತಿಯನ್ನು ರೈತರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ಬಾಗಲಕೋಟ ಜಿಲ್ಲೆಯಲ್ಲಿ 4,500 ಎಕರೆ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದ್ದು, ಹೆಚ್ಚಿನ ಬೆಳೆ ಸಾಂಗ್ಲಿ ಮಾರುಕಟ್ಟೆಗೆ ಸಾಗುತ್ತಿದೆ. ಜಿಲ್ಲೆಯಲ್ಲಿ ಶೇಖರಣೆ ಹಾಗೂ ಸಂಸ್ಕರಣ ಘಟಕ ಆರಂಭಿಸಿದರೆ ರೈತರಿಗೆ ಹೆಚ್ಚಿನ ಲಾಭ ಸಾಧ್ಯವಿದೆ. ಇಲಾಖೆ ಅಗತ್ಯ ಸಹಾಯ ನೀಡಲಿದೆ ಎಂದು ಭರವಸೆ ನೀಡಿದರು.
ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮಾತನಾಡಿ, ಬೀಜೋಪಚಾರ ಹಾಗೂ ಒಂದೇ ಕಣ್ಣಿನ ಬೀಜ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದೆಂದು ತಿಳಿಸಿದರು. ಮಹಾಲಿಂಗಪುರ ಭಾಗದಲ್ಲಿ 1,700 ಹೆಕ್ಟೇರ್ ಪ್ರದೇಶದಲ್ಲಿ ಅರಿಶಿಣ ಬೆಳೆಯಲಾಗುತ್ತಿದೆ ಎಂದರು.
ನಂತರ ನಡೆದ ತಾಂತ್ರಿಕ ಗೋಷ್ಠಿಯಲ್ಲಿ ರೈತರು ಪ್ರಶ್ನೆ ಕೇಳಿ, ತಮ್ಮ ಕೃಷಿ ಅನುಭವ ಹಂಚಿಕೊಂಡರು.
ಸಹ ಸಂಶೋಧನಾ ನಿರ್ದೇಶಕ ಡಾ. ವಸಂತ ಗಾಣಿಗೇರ, ಕೃಷಿ ವಿಜ್ಞಾನಿಗಳಾದ ಸಚಿನ್ ಮಾಚಕನೂರ, ಅಭಯಕುಮಾರ ಮೊರಬ, ಡಾ. ಮಂಜುನಾಥ ಹುಬ್ಬಳ್ಳಿ, ಡಾ. ರಮೇಶ ಪ್ರಗತಿಪರ ರೈತರು ಮತ್ತಿತರರಿದ್ದರು. ಡಾ. ಪಲ್ಲವಿ ಎಚ್.ಎಂ. ನಿರೂಪಿಸಿದರು.
"

ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದ ಹತ್ತಿರ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ಹೊಸ ಸಂಶೋಧನಾ ಕೇಂದ್ರ ತೆರೆಯಲಾಗಿದೆ.ಅದರಲ್ಲಿ ರೈತರ ಬೆಳೆಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಲಾಗುವದು.

ಡಾ. ವೆಂಕಟೇಶಲು, ಕಷಿ ವಿಜ್ಞಾನಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net