ಪಾರದರ್ಶಕ ಆಡಳಿತವೇ ಯಶಸ್ಸಿನ ಗುಟ್ಟು

ಮುಧೋಳ ನಗರದಲ್ಲಿ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ 12ನೇ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ವಿನಯ್ ತಿಮ್ಮಾಪೂರ, ದಯಾನಂದ ಪಾಟೀಲ್, ನಿಂಗರಾಜ್ ಪಾಟೀಲ್ ಇತರರಿದ್ದರು
ಮುಧೋಳ ನಗರದಲ್ಲಿ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ 12ನೇ ಶಾಖೆಯನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು. ವಿನಯ್ ತಿಮ್ಮಾಪೂರ, ದಯಾನಂದ ಪಾಟೀಲ್, ನಿಂಗರಾಜ್ ಪಾಟೀಲ್ ಇತರರಿದ್ದರು
Published on

ಪ್ರಮುಖ ಮುಖ್ಯಾಂಶಗಳು

  • ಎಂಎಲ್‌ಸಿ ಸುನೀಲಗೌಡ ಪಾಟೀಲ ಅಭಿಮತ
  • ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ ಮುಧೋಳ ಶಾಖೆ ಆರಂಭ
ಮುಧೋಳ: ಸಹಕಾರಿ ರಂಗದಲ್ಲಿ ಪಾರದರ್ಶಕ ಮತ್ತು ಶಿಸ್ತಿನಿಂದ ಕೆಲಸ ಮಾಡಿದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ. ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘ ಕಳೆದ ಮೂರೂವರೆ ವರ್ಷಗಳ ಅಲ್ಪಾವಧಿಯಲ್ಲಿಯೇ ಉತ್ತಮ ವ್ಯವಹಾರ ನಡೆಸಿ, ಗ್ರಾಹಕರ ವಿಶ್ವಾಸ ಗಳಿಸಲು ಶಿಸ್ತುಬದ್ಧ ಆಡಳಿತವೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ನಗರದ ರೂಗಿ ಹೈಟ್ಸ್ ಕಟ್ಟಡದಲ್ಲಿ ನೂತನ ಆರಂಭಗೊಂಡ ಬಿಎಲ್‌ಡಿ ಸೌಹಾರ್ದ ಸಹಕಾರಿ ಸಂಘದ 12ನೇ ಶಾಖೆ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಹಕರಿಗೆ ಆಕರ್ಷಕ ಬಡ್ಡಿ ದರ ನೀಡುವ ಮೂಲಕ ಅವರ ಆರ್ಥಿಕ ಪ್ರಗತಿಯಲ್ಲಿ ಭಾಗಿಯಾಗುತ್ತಿದ್ದೇವೆ. ಹಿರಿಯ ನಾಗರಿಕರು ಮತ್ತು ಮಾಜಿ ಸೈನಿಕರಿಗೆ ಶೇ. 0.5ರಷ್ಟು ಹೆಚ್ಚಿನ ಬಡ್ಡಿ ಸೌಲಭ್ಯವಿದ್ದು, ಮುಧೋಳ ಭಾಗದ ಜನತೆ ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನಯ್ ತಿಮ್ಮಾಪೂರ ಮಾತನಾಡಿ, ಸಹಕಾರಿ ಕ್ಷೇತ್ರವು ಇಂದು ಜನ ಸಾಮಾನ್ಯರ ಆರ್ಥಿಕ ಬದುಕಿಗೆ ದೊಡ್ಡ ಬಲ ನೀಡುತ್ತಿದೆ. ಬಿಎಲ್‌ಡಿಇ ಸಂಸ್ಥೆ ಕೇವಲ ಬ್ಯಾಂಕಿಂಗ್ ವ್ಯವಹಾರಕ್ಕೆ ಸೀಮಿತವಾಗದೆ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದಯಾನಂದ ಪಾಟೀಲ್ ಮಾತನಾಡಿ, ಸುನೀಲಗೌಡ ಪಾಟೀಲರ ಸಮರ್ಥ ಮಾರ್ಗದರ್ಶನ ಆಡಳಿತ ಮಂಡಳಿ ಪ್ರಾಮಾಣಿಕತೆಯಿಂದಾಗಿ ಸಂಸ್ಥೆ ವೇಗವಾಗಿ ಬೆಳೆಯುತ್ತಿದೆ. ಬ್ಯಾಂಕುಗಳಲ್ಲಿ ಗ್ರಾಹಕರ ಹಿತಾಸಕ್ತಿಯೇ ಮೊದಲು. ಇಲ್ಲಿ ಠೇವಣಿಗಳಿಗೆ ಹೆಚ್ಚಿನ ಭದ್ರತೆ ಇದ್ದು, ಸಾಲ ಸೌಲಭ್ಯಗಳನ್ನು ಸರಳೀಕೃತಗೊಳಿಸಲಾಗಿದೆ. ಮುಧೋಳ ಶಾಖೆ ಆರಂಭಿಸಿರುವುದು ಇಲ್ಲಿನ ಮಧ್ಯಮ ವರ್ಗದ ಕುಟುಂಬಗಳಿಗೆ ವರದಾನವಾಗಲಿದೆ ಎಂದರು.
ಕೆಎಂಎಫ್ ಅಧ್ಯಕ್ಷ ನಿಂಗರಾಜ್ ಪಾಟೀಲ್, ಸಂಘದ ಸಲಹಾ ಸಮಿತಿ ಅಧ್ಯಕ್ಷ ಡಾ. ಮೋಹನ್ ಬಿರಾದಾರ, ಉದಯ ಸಾರವಾಡ, ರಾಜುಗೌಡ ಪಾಟೀಲ, ಅಪ್ಪಣ್ಣ ರೂಗಿ, ಮುದುಕಣ್ಣ ಅಂಬಿಗೇರ, ಕಲ್ಮೇಶ ಪಂಚಗಾಂವಿ, ಪಾಂಡುಗೌಡ ಪಾಟೀಲ್ ಹಾಗೂ ಸಂಘದ ಆಡಳಿತ ಮಂಡಳಿ ಸದಸ್ಯರು ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net