ತೋಟಗಾರಿಕೆ ಮೇಳಕ್ಕೆ ತೋವಿವಿ ಸಂಪೂರ್ಣ ಸಜ್ಜು

 ಬಾಗಲಕೋಟೆ ತೋವಿವಿ ಆವರಣದಲ್ಲಿ ಶುಕ್ರವಾರ ತೋಟಗಾರಿಕೆ ಮೇಳದ ಸಿದ್ಧತೆ ಬಗ್ಗೆ ಕುಲಪತಿ ಡಾ. ವಿಷ್ಣುವರ್ಧನ ಮಾಹಿತಿ ಹರವಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮತ್ತಿತರರು ಇದ್ದರು.
ಬಾಗಲಕೋಟೆ ತೋವಿವಿ ಆವರಣದಲ್ಲಿ ಶುಕ್ರವಾರ ತೋಟಗಾರಿಕೆ ಮೇಳದ ಸಿದ್ಧತೆ ಬಗ್ಗೆ ಕುಲಪತಿ ಡಾ. ವಿಷ್ಣುವರ್ಧನ ಮಾಹಿತಿ ಹರವಿದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮತ್ತಿತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾಹಿತಿ
  • 3 ಮೂರು ದಿನ ತೋಟಗಾರಿಕೆ ಮೇಳ
  • ಡಿ. 23ರಂದು ಮೇಳದಲ್ಲಿ ರೈತ ದಿನಾಚರಣೆ
ಬಾಗಲಕೋಟೆ: ಬಾಗಲಕೋಟೆ ತೋವಿವಿ ಉದ್ಯಾನ ನಗರಿಯನ್ನು ಡಿ. 21 ರಿಂದ 23 ವರೆಗೆ ನಡೆಯುವ ಮೂರು ದಿನಗಳ ತೋಟಗಾರಿಕೆ ಮೇಳಕ್ಕೆ ಸಂಪೂರ್ಣ ಸಜ್ಜುಗೊಳಿಸಲಾಗಿದೆ ಎಂದು ತೋವಿವಿಯ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.
ತೋವಿವಿಯ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮೇಳದ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಡಾ. ವಿಷ್ಣುವರ್ಧನ, ಮೇಳದ ಮೊದಲ ದಿನ ಉದ್ಘಾಟನೆ ಹಾಗೂ ಲ ಶ್ರೇಷ್ಠ ರೈತರಿಗೆ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಚಿತ್ತರಗಿ-ಇಳಕಲ್ಲ ವಿಜಯ ಮಹಾಂತೇಶ ಸಂಸ್ಥಾನದ ಮಠದ ಗುರುಮಹಾಂತ ಶ್ರೀಗಳು ದಿವ್ಯ ಸಾನ್ನಿಧ್ಯ ವಹಿಸುವರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಡಿ. 22ರಂದು ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ನಿಡಸೋಸಿಯ ಸಿದ್ಧ ಸಂಸ್ಥಾನ ಮಠದ ಡಾ. ಪಂಚಮ ಶಿವಲಿಂಗೇಶ್ವರ ಶ್ರೀಗಳು ವಹಿಸಲಿದ್ದು, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳೆ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಮೂರನೇ ದಿನ ನಡೆಯುವ ಲಶ್ರೇಷ್ಠ ರೈತ ಪ್ರಶಸ್ತಿ ಪ್ರದಾನ ಹಾಗೂ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಗದಗ ನಂದಿವೇರಿ ಸಂಸ್ಥಾನಮಠದ ಶಿವಕುಮಾರ ಶ್ರೀಗಳು ವಹಿಸಲಿದ್ದು, ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್. ಭೋಸರಾಜು ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ವಹಿಸಲಿದ್ದಾರೆ. ಮೂರು ದಿನಗಳ ಕಾರ್ಯಕ್ರಮದ ಅತಿಥಿಗಳಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಶಾಸಕರು ಹಾಗೂ ಇತರೆ ಗಣ್ಯಮಾನ್ಯರು ಆಗಮಿಸಲಿದ್ದಾರೆಂದು ವಿವರಿಸಿದರು. ನಂತರ ಪ್ರಾತ್ಯಕ್ಷಿಕೆಗಳಲ್ಲಿ ವಿಶೇಷವಾದ ಕೆಲವು ಬೆಳೆಗಳ ಬಗ್ಗೆ ವಿಜ್ಞಾನಿಗಳು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಮಹಾಂತೇಶ ಹಟ್ಟಿ, ಜಂಟಿ ಕೃಷಿ ನಿರ್ದೇಶಕ ರುದ್ರೇಶ, ತೋವಿವಿಯ ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು, ಸಂಶೋಧನಾ ನಿರ್ದೇಶಕ ಕ್ರುದ್ದಿನ ಸೇರಿ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಶ್ರೇಷ್ಠ ತೋಟಗಾರಿಕೆ ರೈತ ಪ್ರಶಸ್ತಿಗೆ ಆಯ್ಕೆಯಾದವರು

ತೋಟಗಾರಿಕೆ ವಿವಿ ಮೇಳದಲ್ಲಿ ಪ್ರತಿ ವರ್ಷ ವಿತರಣೆ ಮಾಡುವ ಶ್ರೇಷ್ಠ ತೋಟಗಾರಿಕೆ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿಗೆ 2025ನೇ ಸಾಲಿನಲ್ಲಿ ರಾಜ್ಯದ 24 ಜಿಲ್ಲೆಗಳಿಂದ ತಲಾ ಒಬ್ಬರಂತೆ ಒಟ್ಟು 24 ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಕುಲಪತಿ ಡಾ. ವಿಷ್ಣುವರ್ಧನ ಮಾಧ್ಯಮಗಳಿಗೆ ಬಿಡುಗಡೆ ಮಾಡಿದರು.
ವಿ. ಮಂಜುನಾಥ- ಕೋಲಾರ, ಬಿ. ನಂಜುಂಡಗೌಡ- ಚಿಕ್ಕಬಳ್ಳಾಪುರ, ನಾಗಪ್ಪ ಕುಪ್ಪು ಗೌಡ- ಉತ್ತರ ಕನ್ನಡ, ಮಹಾದೇವ ಮೆಳ್ಳಿಗೇರಿ- ಬಾಗಲಕೋಟೆ, ಸತ್ಯಶೀಲ ನಿಡೋದ- ಬೀದರ, ಶರ್ವಕುಮಾರ ಆವಂಟಿ- ಕಲಬುರಗಿ, ವಿಶ್ವಶಂಕರ ಸಂತೋಷಕುಮಾರ- ಯಾದಗಿರಿ, ಬಸವರಾಜ ಸಿದ್ದಾಪುರ- ವಿಜಯಪುರ, ಜಗದೀಶ ಪಿ- ಮೈಸೂರ, ಸಿದ್ದೇಗೌಡ ಎನ್- ಚಾಮರಾಜನಗರ, ಎಚ್.ಎನ್. ಸತ್ಯನಾರಾಯಣ- ಮಂಡ್ಯ, ಲಕ್ಷ್ಮೀ ಟಿ.ಎಂ.- ಹಾಸನ, ಕಲಾವತಿ ಚವನಗೌಡರ- ಧಾರವಾಡ, ಭೀಮರಾವ್ ಶಿಂಧೆ-ಗದಗ, ನಾಗರಾಜ ಹುಲಗೂರ- ಹಾವೇರಿ, ಬಾಳಪ್ಪ ಬೆಳಕೂಡ- ಬೆಳಗಾವಿ, ರಮೇಶ ಎಚ್.- ಬೆಂಗಳೂರ ಗ್ರಾಮಾಂತರ, ಮುನಿರಾಜು ಬಿ.ಎನ್.- ಬೆಂಗಳೂರ ನಗರ, ದೇವರಾಜು ಜಿ.- ರಾಮನಗರ, ಚನ್ನಕೇಶವ ಸ್ವಾಮಿ-ತುಮಕೂರ, ಸುದೇಶಕುಮಾರ ಪಟ್ಟಣಶೆಟ್ಟಿ- ಕೊಪ್ಪಳ, ಪದ್ಮಾವತಿ ಬಾಗೋಡಿ- ರಾಯಚೂರ, ಕೆ.ಬಸಪ್ಪ ಚನ್ನಬಸಪ್ಪ-ಬಳ್ಳಾರಿ, ಪೂಜ್ಯ ಡಾ. ಮಹೇಶ್ವರ ಸ್ವಾಮಿಗಳು-ವಿಜಯನಗರ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net