ಹರಿಸೇವೆ ಪ್ರಸಾದಕ್ಕೆ ಬೇಕಾಗುವ ಎಂಟು-ಹತ್ತು ಕ್ವಿಂಟಾಲ್ ಕಡಲೆಬೇಳೆ ಹಿಟ್ಟಿನ ಕಡುಬುಗಳನ್ನು ಸಿದ್ಧಪಡಿಸಲು ಊರಿನ ನೂರಾರು ಮಹಿಳೆಯರು, ಪುರುಷರು ಸೇವೆ ಸಲ್ಲಿಸಿದರು. ಮುಂಜಾನೆ ಪ್ರಾರಂಭವಾದ ಕಡುಬು ತಯಾರಿಕೆ ಕೆಲಸ ಸಂಜೆಯವರೆಗೂ ಮುಂದುವರಿದಿತ್ತು. ನೂರಾರು ಸಂಖ್ಯೆಯಲ್ಲಿ ಊರಿನ ಹೆಂಗಳೆಯರು, ಹಿರಿಯರು, ಮಕ್ಕಳು ಕಡುಬಿನ ಹಿಟ್ಟನ್ನು ಲಟ್ಟಿಸಿಕೊಡುವಲ್ಲಿ ಪಾಲ್ಗೊಂಡಿದ್ದರೆ, ಊರಿನ ಗಂಡು ಮಕ್ಕಳು ಕಡುಬನ್ನು ಕರಿಯುವ ಕೆಲಸದಲ್ಲಿ ಪಾಲ್ಗೊಂಡಿದ್ದರು.