ಇಂದು ಸಿದ್ಧಲಿಂಗೇಶ್ವರ ಮಹಾ ರಥೋತ್ಸವ

ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು
ಸಿದ್ಧಲಿಂಗೇಶ್ವರ ಮಹಾಸ್ವಾಮಿಗಳು
Published on

ಪ್ರಮುಖ ಮುಖ್ಯಾಂಶಗಳು

  • ಸಿದ್ಧಲಿಂಗೇಶ್ವರ
  • 45ನೇ ಮಹಾ ರಥೋತ್ಸವ
ಮುಧೋಳ: ಪಟ್ಟಣದ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಸಿದ್ಧ ಕ್ಷೇತ್ರ ಬ್ರಹ್ಮಗಡ್ಡಿ ಮಠದಲ್ಲಿ ಏ. 27ರಂದು ಸಿದ್ಧಲಿಂಗೇಶ್ವರರ 45ನೇ ಮಹಾ ರಥೋತ್ಸವ ಭಕ್ತಿಭಾವದಿಂದ ಜರುಗಲಿದೆ.
ಸೋಮವಾರ ಬೆಳಗ್ಗೆ 7.15ಕ್ಕೆ ರುದ್ರಾಭಿಷೇಕ ಪೂಜೆ, 10.15ಕ್ಕೆ ರಥದ ಕಲಶಾರೋಹಣ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ಮಧ್ಯಾಹ್ನ 2.15ಕ್ಕೆ ಅಡ್ಡಪಲ್ಲಕ್ಕಿ ಮಹೋತ್ಸವ ಪುರಪ್ರವೇಶ ಮಾಡಲಿದೆ. ಸಂಜೆ 6:25ಕ್ಕೆ ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ನಡೆಯಲಿದೆ.
ಜಾತ್ರಾ ಮಹೋತ್ಸವ ಅಂಗವಾಗಿ ಏ. 28ರಂದು ಬೆಳಗ್ಗೆ ವಿಭೂತಿ ಮಹಾಪೂಜೆ, ರಾತ್ರಿ ಭಕ್ತಿ ಸಂಗೀತ ಮತ್ತು ಕೌದಿ ಮಹಾಪೂಜೆ ಕಾರ್ಯಕ್ರಮಗಳು ನಡೆಯಲಿದ್ದು, ಧಾರ್ಮಿಕ ಕಾರ್ಯಕ್ರಮಗಳು ಸಮಾರೋಪಗೊಳ್ಳಲಿವೆ ಮಠದ ಸಮಿತಿ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net