ತೇರದಾಳದ ಎಸ್‌ಡಿಎಂ ಟ್ರಸ್ಟ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬನಹಟ್ಟಿ-ತೇರದಾಳದ ಕಾ.ಪ್ರಾ.ಸೇವಾ ಸಮಿತಿ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಸೌಮ್ಯ ಹುಲಿ, ಡಾ.ಮಹಾವೀರ ದಾನಿಗೊಂಡ, ಪಿಎಸ್‌ಐ ಶಿವಾನಂದ ಸಿಂಘನ್ನವರ ಇತರರಿದ್ದರು.
ತೇರದಾಳ: ತಂಬಾಕು ಸೇವನೆಯಿಂದ ಶರೀರ ಅನೇಕ ರೋಗಾದಿಗಳ ಮನೆಯಾಗುವುದರ ಜೊತೆಗೆ ನಿಮ್ಮನ್ನು ನಂಬಿಕೊಂಡ ಕುಟುಂಬಕ್ಕೆ ನೀವು ತೊಂದರೆ ಮಾಡುತ್ತಿರಿ. ಬದುಕು ಸುಂದರವಾಗಿಸಲು ತಂಬಾಕು ಸೇವನೆ ಬಿಡಬೇಕೆಂದು ಪಿಎಸ್‌ಐ ಶಿವಾನಂದ ಸಿಂಘನ್ನವರ ಹೇಳಿದರು.
ಪಟ್ಟಣದ ಎಸ್‌ಡಿಎಂ ಟ್ರಸ್ಟ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಶುಕ್ರವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬನಹಟ್ಟಿ-ತೇರದಾಳದ ಕಾ.ಪ್ರಾ.ಸೇವಾ ಸಮಿತಿ, ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ನಿಷೇಧ ದಿನ ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ರು ಮಾತನಾಡಿದರು.
ಬನಹಟ್ಟಿಯ ದಿವಾನಿ ನ್ಯಾಯಾಧೀಶ ಸೌಮ್ಯ ಹೂಲಿ ಕಾರ್ಯಕ್ರಮ ಉದ್ಘಾಟಿಸಿ, ಕಾನೂನು ಅರಿವು ಮೂಡಿಸಿದರು.
ಸಂಸ್ಥೆ ಅಧ್ಯಕ್ಷ ಡಾ. ಮಹಾವೀರ ದಾನಿಗೊಂಡ ಮಾತನಾಡಿ, ತಂಬಾಕು ಸೇವನೆಯ ದುಷ್ಪರಿಣಾಮಗಳನ್ನು ತಿಳಿಸಿದರು.
ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಸರ್ಕಾರಿ ಸಹಾಯಕ ಅಭಿಯೋಜಕ ಆರ್.ಜಿ. ಶಹಾ, ಪ್ರಾಂಶುಪಾಲ ಡಾ. ಪ್ರಭಾಕರ ಅಪರಾಜ, ಡಾ. ಶಕುಂತಲಾ ಸಾಸ್ವಿಹಳ್ಳಿ ಹಾಗೂ ವಕೀಲರು ಹಾಗೂ ಉಪನ್ಯಾಸಕರು ಭಾಗಿಯಾಗಿದ್ದರು.