ಕಾರ್ಮಿಕರ ಕಾನೂನು ಸುರಕ್ಷತೆಗೆ ಧಕ್ಕೆ

ಬನಹಟ್ಟಿಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜ್‌ಮೋಹನ ಡಾಗಾ ಮಾತನಾಡಿದರು. ಎಂ.ಎಸ್. ದೇವರವರ. ಸಿದ್ದರಾಜ ಪೂಜಾರಿ ಇದ್ದರು.
ಬನಹಟ್ಟಿಯಲ್ಲಿ ಕಾರ್ಮಿಕ ದಿನಾಚರಣೆ ಅಂಗವಾಗಿ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಜ್‌ಮೋಹನ ಡಾಗಾ ಮಾತನಾಡಿದರು. ಎಂ.ಎಸ್. ದೇವರವರ. ಸಿದ್ದರಾಜ ಪೂಜಾರಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷ ಎಂ.ಎಸ್. ದೇವರವರ ಆಕ್ರೋಶ
  • ಬನಹಟ್ಟಿ ನಗರದಲ್ಲಿ ಕಾರ್ಮಿಕ ದಿನಾಚರಣೆ
  • ದೇಶದ ಕಾರ್ಮಿಕರ ಏಳಿಗೆ-ನೆಮ್ಮದಿಗೆ ಕಾರ್ಮಿಕರಿಗಾಗಿ 26 ಕಾನೂನು ನಿಯಮಗಳಿದ್ದವು.
ರಬಕವಿ-ಬನಹಟ್ಟಿ: ದೇಶದ ಕಾರ್ಮಿಕರ ಏಳಿಗೆ-ನೆಮ್ಮದಿಗೆ ಕಾರ್ಮಿಕರಿಗಾಗಿ 26 ಕಾನೂನು ನಿಯಮಗಳಿದ್ದವು. ಇದೀಗ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ವಲಯ ಹತ್ತಿಕ್ಕುವ ಕಾರ್ಯ ನಡೆಯುತ್ತಿದ್ದು, ಕೇವಲ ಉದ್ದಿಮೆದಾರರ ಪರ ನಿಂತಿದೆ. ಇದು ಆತಂಕಕಾರಿ ಬೆಳವಣಿಗೆ ಎಂದು ಹಿರಿಯ ನ್ಯಾಯವಾದಿ, ಕಾರ್ಮಿಕ ಸಂಘದ ಉಪಾಧ್ಯಕ್ಷ ಎಂ.ಎಸ್. ದೇವರವರ ಹೇಳಿದರು.
ಬನಹಟ್ಟಿಯಲ್ಲಿ ಕಾರ್ಮಿಕ ದಿನಾಚರಣೆ ನಿಮಿತ್ತ ನಡೆದ ನೇಕಾರ ಹಾಗೂ ವಿವಿಧ ಸಂಘಟನೆ ಕಾರ್ಮಿಕರ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಮಿಕರು ಮುಂದಿನ ದಿನಗಳಲ್ಲಿ ಹೋರಾಟ ಹಾಗೂ ದಿನಾಚರಣೆಗಳನ್ನೇ ಮಾಡುವ ಭಯ ಕಾಡುವಂತಾಗುತ್ತದೆ. ಅಷ್ಟೊಂದು ಪ್ರಮಾಣದಲ್ಲಿ ದೇಶದಲ್ಲಿ ಕಾರ್ಮಿಕರ ಮೇಲೆ ಕಾನೂನು ಕಾಯ್ದೆ ಕಸಿದುಕೊಂಡು ಕೇವಲ ಉಳ್ಳವರ ಪಾಲಾಗುತ್ತಿರುವ ನಿಯಮಗಳಿಂದ ಕಾರ್ಮಿಕರಿಗೆ ಕರಾಳ ದಿನಗಳು ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಬ್ರಿಜ್‌ಮೋಹನ ಡಾಗಾ ಮಾತನಾಡಿ, ನೇಕಾರ ಕಾರ್ಮಿಕ ವರ್ಗಕ್ಕೆ ಬನಹಟ್ಟಿಯ ದಿ. ಮಲ್ಲಿಕಾರ್ಜುನ ಜುಮನಾಳರ ಕೊಡುಗೆ ಅಪಾರವಾಗಿತ್ತು. ಅವರ ಕಾರ್ಯ ಶ್ಲಾಘನೀಯ. ಮಾಲೀಕರನ್ನೂ ಪೋಷಿಸುವುದರೊಂದಿಗೆ ನೇಕಾರ ಕಾರ್ಮಿಕ ವಲಯಕ್ಕೆ ಮಜೂರಿ ಸೇರಿ ಇತರೆ ಸೌಲಭ್ಯಗಳನ್ನು ಒದಗಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಹಿರಿಯ ಸಾಹಿತಿ ಸಿದ್ಧರಾಜ ಪೂಜಾರಿ ಮಾತನಾಡಿ, ಸಮಾಜ ಮತ್ತು ದೇಶದ ಅಭಿವೃದ್ಧಿಯಲ್ಲಿ ಕಾರ್ಮಿಕ ವರ್ಗದ ಕೊಡುಗೆ ಶ್ರೇಷ್ಠ್ಠವಾದುದು. ಆದ್ದರಿಂದ ಕಾರ್ಮಿಕರನ್ನು ಗೌರವಿಸುವುದರ ಜೊತೆಗೆ ಅವರ ಹಕ್ಕುಗಳ ರಕ್ಷಣೆಯಾಗಬೇಕು. ಕಾರ್ಮಿಕರು ದೇಶದ ಬೆನ್ನೆಲುಬಾಗಿದ್ದು, ಅವರು ಶ್ರಮ ಜೀವಿಗಳು. ಅವರ ಯೋಗ ಕ್ಷೇಮದ ಕುರಿತು ಪ್ರತಿಯೊಬ್ಬರು ಗಮನ ನೀಡಬೇಕು. ಕಾರ್ಮಿಕರು ತಮ್ಮ ಆರೋಗ್ಯದ ಕಡೆಗೆ ಗಮನ ನೀಡುವುದರ ಜೊತೆಗೆ ಉತ್ತಮವಾದ ಆರೋಗ್ಯವನ್ನು ಹೊಂದಿರಬೇಕೆ ಎಂದರು.
ಇದಕ್ಕೂ ಪೂರ್ವದಲ್ಲಿ ನಗರಾದ್ಯಂತ ನೂರಾರು ನೇಕಾರ ಕಾರ್ಮಿಕರಿಂದ ಮೆರವಣಿಗೆ ನಡೆಯಿತು. ಪ್ರಭು ಕೋಪರ್ಡೆ, ಆರ್.ಡಿ. ಹಳಿಂಗಳಿ, ಸಂಗಪ್ಪ ಕುಂದಗೋಳ, ಸದಾಶಿವ ಗೋಂದಕರ, ಮಹಾಂತೇಶ ಬಸಪ್ಪಗೋಳ, ಸದಾ ಮುಂಡಗನೂರ, ಶಂಕರ ಹುನ್ನೂರ, ನಜೀರ ಜಮಾದಾರ, ಬಸಪ್ಪ ಕೊಣ್ಣೂರ, ಸಂಗಯ್ಯ ಬಂಗಿ ಸೇರಿ ಅನೇಕರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net