ಕಳ್ಳರ ಸಂಚಾರ ಸಿಸಿ ಟಿವಿಯಲ್ಲಿ ದಾಖಲು

ರಬಕವಿಯ ವಿದ್ಯಾನಗರ ಹಾಗೂ ಬಸವನಗರ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ಜಾವ ಕಳ್ಳರ ಗುಂಪು ಸಂಚರಿಸಿದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ರಬಕವಿಯ ವಿದ್ಯಾನಗರ ಹಾಗೂ ಬಸವನಗರ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ಜಾವ ಕಳ್ಳರ ಗುಂಪು ಸಂಚರಿಸಿದ ದೃಶ್ಯಗಳು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
Published on

ಪ್ರಮುಖ ಮುಖ್ಯಾಂಶಗಳು

  • ನಾಗರಿಕರಲ್ಲಿ ಆತಂಕ
  • ಪೊಲೀಸ್ ಬಂದೋಬಸ್ತ್‌ಗೆ ಆಗ್ರಹ
  • ವಯೋವೃದ್ಧ ಮಹಿಳೆಯ ಬಂಗಾರದ ಆಭರಣಗಳು ಕಳ್ಳತನ
ರಬಕವಿ/ಬನಹಟ್ಟಿ : ನಗರದ ವಿದ್ಯಾನಗರ ಹಾಗೂ ಬಸವನಗರ ಪ್ರದೇಶಗಳಲ್ಲಿ ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಳ್ಳರ ಗುಂಪು ಸಂಚರಿಸಿದ್ದು, ಸಿಸಿ ಕ್ಯಾಮರಾಗಳಿಗೆ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನತೆಯ ಆತಂಕಕ್ಕೆ ಕಾರಣವಾಗಿದೆ.
ಸಿಸಿ ಟಿವಿಯಲ್ಲಿ ಕಳ್ಳರು ಲಾಂಗು ಹಾಗೂ ಮಚ್ಚುಗಳೊಂದಿಗೆ ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು ಸಂಚರಿಸುತ್ತಿರುವ ದೃಶ್ಯಗಳು ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿವೆ. ಶಿವದಾಶಿಮಯ್ಯ ಸಮುದಾಯ ಭವನದ ಎದುರಿನ ಮನೆಯಲ್ಲಿ ಕಳ್ಳತನ ಯತ್ನದ ವೇಳೆ ಪಕ್ಕದ ಮನೆಯವರು ಕೂಗಿದಾಗ ಕಳ್ಳರು ಪರಾರಿಯಾದರೆಂದು ತಿಳಿದು ಬಂದಿದೆ.
ಮತ್ತೊಂದೆಡೆ, ಆಶ್ರಯ ಮನೆಯೊಂದರಲ್ಲಿ ವಾಸವಿದ್ದ ವಯೋವೃದ್ಧ ಮಹಿಳೆಯ ಬಂಗಾರದ ಆಭರಣಗಳು ಕಳ್ಳತನವಾಗಿವೆ ಎಂದು ಹೇಳಲಾಗಿದೆ. ಇದುವರೆಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.
ಘಟನೆ ಹಿನ್ನೆಲೆ ಹಗಲು ರಾತ್ರಿ ಗಸ್ತು ವ್ಯವಸ್ಥೆ ಬಲಪಡಿಸಿ, ಗಸ್ತು ವಾಹನಗಳನ್ನು ವಸತಿ ಬಡಾವಣೆಗಳಲ್ಲಿ ನಿರಂತರವಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ನಗರದಲ್ಲಿ ಕಳ್ಳತನಗಳಿಗೆ ಶಾಶ್ವತ ಪರಿಹಾರ ಯಾವಾಗ ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net