ಸರ್ಕಾರದ ಆದೇಶದಲ್ಲಿ ಯಾವುದೇ ಗೊಂದಲ ಬೇಡ

 ರಬಕವಿ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೌಧ ಶಂಕುಸ್ಥಾಪನೆ ಪೂರ್ವಭಾವಿ ಸಭೆಯಲ್ಲಿ ನೀಲಕಂಠ ಮುತ್ತೂರ ಮಾತನಾಡಿದರು. ಮಲ್ಲೇಶ ಕುಚನೂರ, ಸಂಜಯ ಜೋತಾವರ, ಸತ್ಯಪ್ಪ ಮಗದುಮ್, ಮಹಾದೇವ ದುಪದಾಳ, ಧರೆಪ್ಪ ಉಳ್ಳಾಗಡ್ಡಿ ಇತರರಿದ್ದರು.
ರಬಕವಿ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಸೌಧ ಶಂಕುಸ್ಥಾಪನೆ ಪೂರ್ವಭಾವಿ ಸಭೆಯಲ್ಲಿ ನೀಲಕಂಠ ಮುತ್ತೂರ ಮಾತನಾಡಿದರು. ಮಲ್ಲೇಶ ಕುಚನೂರ, ಸಂಜಯ ಜೋತಾವರ, ಸತ್ಯಪ್ಪ ಮಗದುಮ್, ಮಹಾದೇವ ದುಪದಾಳ, ಧರೆಪ್ಪ ಉಳ್ಳಾಗಡ್ಡಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೋರಾಟ ಸಮಿತಿ ಮುಖಂಡ ಸಂಜು ಜೋತಾವರ ಸ್ಪಷ್ಟನೆ
  • ಸೆಪ್ಟೆಂಬರ್ ಅಂತ್ಯದೊಳಗೆ ಪ್ರಜಾಸೌಧ ಭೂಮಿಪೂಜೆಗೆ ದಿನಾಂಕ ಶೀಘ್ರ ನಿರ್ಧಾರ
  • ಪ್ರಜಾಸೌಧ ಕುರಿತು ಹರಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು
ರಬಕವಿ/ಬನಹಟ್ಟಿ: ರಬಕವಿ ನಗರದ ಜಿಎಲ್‌ಬಿಸಿ ಕಚೇರಿ ಆವರಣದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ಸರ್ಕಾರ ಅನುಮೋದನೆ ನೀಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ, ಸೆಪ್ಟೆಂಬರ್ ಕೊನೆಯ ವಾರದೊಳಗೆ ಭೂಮಿಪೂಜೆ ದಿನಾಂಕ ನಿಗದಿಯಾಗುವ ನಿರೀಕ್ಷೆಯಿದೆ ಎಂದು ಹೋರಾಟ ಸಮಿತಿ ಮುಖಂಡ ಸಂಜು ಜೋತಾವರ ಹೇಳಿದರು.
ರಬಕವಿ ಶಿವದಾಸಿಮಯ್ಯ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಬಕವಿ, ಹೊಸೂರ, ರಾಮಪುರ ಹಾಗೂ ಮದನಮಟ್ಟಿ ಗ್ರಾಮಗಳ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ಅವರು, ಪ್ರಜಾಸೌಧ ಕುರಿತು ಹರಡುತ್ತಿರುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ರಬಕವಿ ನಗರದಲ್ಲೇ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿರುವುದರಿಂದ ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದು ಮನವಿ ಮಾಡಿದರು.
ಹಿರಿಯರಾದ ನೀಲಕಂಠ ಮುತ್ತೂರ, ರಾಮಣ್ಣ ಹುಲಕುಂದ ಹಾಗೂ ಸಂಗಪ್ಪ ಮಾಡಿವಾಳರ ಮಾತನಾಡಿ, ಬನಹಟ್ಟಿ ಜನರ ಸುದೀರ್ಘ ಹೋರಾಟಕ್ಕೆ ಸರ್ಕಾರ ಸ್ಪಂದಿಸಿರುವುದು ಸ್ವಾಗತಾರ್ಹ. ಆದರೆ ರಬಕವಿ ನಗರಕ್ಕೆ ಪ್ರಜಾಸೌಧ ಮಂಜೂರಾಗಿ ಅಧಿಕತ ಆದೇಶ ಹೊರಬಿದ್ದಿರುವುದರಿಂದ ವಿಷಯವನ್ನು ಮತ್ತಷ್ಟು ಗೊಂದಲಕ್ಕೆ ಎಡೆಮಾಡಿಕೊಡಬಾರದು ಎಂದರು.
ಈಶ್ವರ ನಾಗರಾಳ ಮಾತನಾಡಿ, ಅವಳಿ ನಗರದ ಜನರು ಸಹೋದರರಂತೆ ಬಾಳುತ್ತಿದ್ದು, ವದಂತಿಗಳಿಗೆ ಅವಕಾಶ ನೀಡದೆ ಶಾಂತಿ ಕಾಪಾಡಬೇಕು. ತಹಸೀಲ್ದಾರ್ ಕರ್ತವ್ಯಕ್ಕೆ ಮರಳಿದ ಬಳಿಕ ಶಂಕುಸ್ಥಾಪನೆ ದಿನಾಂಕ ತಿಳಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದರು.
ಹಿರಿಯರಾದ ಡಾ. ಎ.ಕೆ. ನಾಗರಗೌಡ ಪಾಟೀಲ, ಸಿದ್ದಣ್ಣ ಸನಕಾಲ್, ಗಿರೀಶ ಮುತ್ತೂರ, ಉಸ್ಮಾನಸಾಬ್ ಲೇಂಗ್ರೆ, ಮಾರುತಿ ನಾಯಕ, ಮಲ್ಲೇಶಪ್ಪ ಕುಚನೂರ, ಈಶ್ವರ ನಾಗರಾಳ, ಸತ್ಯಪ್ಪ ಮಗದುಮ, ಹೊನ್ನಪ್ಪ ಬೀರಡಿ, ಬಸವರಾಜ ಮನ್ಮಿ, ಗಣಪತರಾವ್ ಹಜಾರೆ, ಬಾಬಾಗೌಡ ಪಾಟೀಲ, ಬಸವಪ್ರಭು ಹಟ್ಟಿ, ಬಾದಾಷಾ ಮುಲ್ಲಾ, ಕಷ್ಣಾ ಲೆಂಡಿ, ಮಹೇಶ ತುಂಗಳ, ಬಾಬು ತೆಳಗಿನಮನಿ, ಮಲ್ಲು ವಂದಾಲ, ರಾಜು ಅಮ್ಮನಗಿಮಠ, ಎಂ.ಬಿ. ನಾಶಿ, ಸಂಗಪ್ಪ ಕುಂದಗೋಳ, ಮಹ್ಮದ್ ಮಕಾನದಾರ, ಸುನೀಲ ಬನಹಟ್ಟಿ, ಬುದ್ಧಪ್ಪ ಕುಂದಗೋಳ, ಯಮುನಪ್ಪ ದೊಡಮನಿ, ಧರೆಪ್ಪ ಉಳ್ಳಾಗಡ್ಡಿ, ಸವಿತಾ ಹೊಸೂರ, ನಂದಾ ಕೊಕಟನೂರ, ದಾನಮ್ಮ ಬಾಗಲಮನಿ, ಬಸವರಾಜ ತೇಗಿ, ರಮೇಶ ಮಾಂಡವಕರ, ಸಂಜಯ ತೇಗ್ಗಿ ಹಾಗೂ ಹೊಸೂರ, ರಾಮಪುರ, ರಬಕವಿ, ಮದನಮಟ್ಟಿ ಸುತ್ತಮುತ್ತಲಿನ ಗ್ರಾಮಗಳ ಮಹಿಳೆಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು. ನಂತರ ಶಂಕರಲಿಂಗ ದೇವಸ್ಥಾನದ ಆವರಣದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net