ಜೀವನದಲ್ಲಿ ಪ್ರಯತ್ನವಿಲ್ಲದೆ ಸಾಧನೆ ಸಾಧ್ಯವಿಲ್ಲ

ಕಲಾದಗಿಯ ನವಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಗ್ರಾಪಂ ಅಧ್ಯಕ್ಷೆ ಖಾತುನಬೀ ಹಾರೋಣ ಉದ್ಘಾಟಿಸಿದರು. ಬಿಇಒ ಎಂ.ಎಸ್.ಬಡದಾನಿ, ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ಮಾದರ ಮತ್ತಿತರರಿದ್ದರು.
ಕಲಾದಗಿಯ ನವಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಲಿಕಾ ಹಬ್ಬವನ್ನು ಗ್ರಾಪಂ ಅಧ್ಯಕ್ಷೆ ಖಾತುನಬೀ ಹಾರೋಣ ಉದ್ಘಾಟಿಸಿದರು. ಬಿಇಒ ಎಂ.ಎಸ್.ಬಡದಾನಿ, ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ಮಾದರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಲ್ಲರ ಗಮನ ಸೆಳೆದ ಕಲಿಕಾ ಹಬ್ಬ
  • ಬಿಇಒ ಎಂ.ಎಸ್.ಬಡದಾನಿ ಹೇಳಿಕೆ
  • ಪ್ರಾಮಾಣಿಕ ಪ್ರಯತ್ನಮಾಡಿದರೆ ಜಾಣ ವಿದ್ಯಾರ್ಥಿಯಾಗಿ ಸಾಧನೆ ಮಾಡಲು ಸಾಧ್ಯವಿದೆ
ಕಲಾದಗಿ: ಯಾವೊಬ್ಬ ವಿದ್ಯಾರ್ಥಿಯೂ ದಡ್ಡನಲ್ಲ. ನಿರಂತರ ಕಲಿಕೆ, ಅಭ್ಯಾಸದಲ್ಲಿ ಆಸಕ್ತಿ ಹೊಂದಬೇಕು. ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಮಾಡಿದರೆ ಜಾಣ ವಿದ್ಯಾರ್ಥಿಯಾಗಿ ಸಾಧನೆ ಮಾಡಲು ಸಾಧ್ಯವಿದೆ ಎಂದು ಬಾಗಲಕೋಟೆ ಬಿಇಒ ಎಂ.ಎಸ್ ಬಡದಾನಿ ಹೇಳಿದರು.
ಗ್ರಾಮದ ನವಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕಲಿಕಾ ಹಬ್ಬ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಿಕೆಯಲ್ಲಿ ಯಾವೊಬ್ಬ ವಿದ್ಯಾರ್ಥಿಯೂ ಹಿಂದುಳಿಯದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿ ಎಲ್ಲ ಶಿಕ್ಷಕರ ಮೇಲಿದೆ. ಬರುವ ದಿನಗಳಲ್ಲಿ ಶಿಕ್ಷಕರಿಂದ ಈ ಕೆಲಸ ಶ್ರದ್ಧೆ ಪ್ರಾಮಾಣಿಕತೆಯಿಂದ ಆಗಲಿ ಎಂಬ ಆಶಯ ವ್ಯಕ್ತಪಡಿಸಿದರು.
ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಸಿ.ವೈ.ಸಂಗಮ ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಕಲಿಯುವಿಕೆಯ ಆಸ್ತಿಯನ್ನು ಮೂಡಿಸಲು ಬಹಳ ನೆರವಾಗುತ್ತದೆ. ಅದನ್ನು ಮಕ್ಕಳು ಶಿಕ್ಷಕರ ಮಾರ್ಗದರ್ಶನದಂತೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಖಾತುನಬೀ ಹಾರೋಣ ಉದ್ಘಾಟಿಸಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಸಂಜಯ ಮಾದರ, ಉಪಾಧ್ಯಕ್ಷೆ ಶಬಾನಾ ಮಾಗಿ, ಸಿಆರ್‌ಪಿ ಮಂಜುನಾಥ ಹೆಡಗಿ, ನವಗ್ರಾಮ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯಿನಿ ಮಲಕವ್ವ. ಎಸ್.ಚಿಕ್ಕನಟ್ಟಿ ಇದ್ದರು.

ಗಮನ ಸೆಳೆದ ಪ್ರದರ್ಶನ

ಇದಕ್ಕೂ ಮೊದಲು ನವಗ್ರಾಮದ ಪ್ರಮುಖ ಬೀದಿಯಲ್ಲಿ ನಡೆದ ಆಕರ್ಷಕ ಎತ್ತಿನ ಅಕ್ಷರ ಬಂಡಿಯ ಮೆರವಣಿಗೆ ಮನ ಸೆಳೆದರೆ, ಶಾಲಾ ಆವರಣದಲ್ಲಿ ಕಲಾದಗಿಯ ಕ್ಲಸ್ಟರ್ ಮಟ್ಟದ ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿದರು. ಮಕ್ಕಳೆ ಮಾಡಿಕೊಂಡು ಬಂದಿದ್ದ ಶೈಕ್ಷಣಿಕ ಜ್ಞಾನದ ವಿವಿಧ ಕಲಿಕಾವಸ್ತುಗಳ ಪ್ರದರ್ಶನ ಹಾಗೂ ಮಕ್ಕಳು ತಮ್ಮ ಕಲಿಕಾ ವಸ್ತುವಿನ ಬಗ್ಗೆ ನೀಡಿದ ವಿವರಣೆ ಎಲ್ಲರ ಮನ ಸೆಳೆಯುವಲ್ಲಿ ಯಶಸ್ವಿಯಾದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net