ಕಾಮಗಾರಿ ಗುಣಮಟ್ಟದಿಂದ ಕೂಡಿರಲಿ

ಗುಳೇದಗುಡ್ಡದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಪದವಿ ಕಾಲೇಜಿನ ಕಟ್ಟಡ ಕಾಮಗಾರಿಯನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಭಾನುವಾರ ಪರಿಶೀಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ವೈ.ಆರ್. ಹೆಬ್ಬಳ್ಳಿ, ಎಂ.ಎಂ.ಜಮಖಾನಿ, ಶಿವಾನಂದ ಮಳಿಮಠ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡದ ಕಾಮಗಾರಿ
  • ಶಾಸಕ ಭೀಮಸೇನ ಚಿಮ್ಮನಕಟ್ಟಿ
ಗುಳೇದಗುಡ್ಡ: ಕಾಲೇಜು ಕಟ್ಟಡದ ಕಾಮಗಾರಿ ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಪಟ್ಟಣದ ಆಸಂಗಿ ರಸ್ತೆ ಸಮೀಪದ ನಿರ್ಮಿಸಲಾಗುತ್ತಿರುವ ಸರ್ಕಾರಿ ಪದವಿ ಕಾಲೇಜ ನೂತನ ಕಟ್ಟಡದ ಕಾಮಗಾರಿಯನ್ನು ಭಾನುವಾರ ಪರಿಶೀಲಿಸಿದ ಅವರು, ಸರಿಯಾದ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಿ, ಪದವಿ ಕಾಲೇಜು ಶೀಘ್ರದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಬೇಕು ಎಂದು ಗುತ್ತಿಗೆದಾರರಿಗೆ ಸೂಚಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಜಯ ಬರಗುಂಡಿ, ವೈ.ಆರ್. ಹೆಬ್ಬಳ್ಳಿ, ಎಂ.ಎಂ.ಜಮಖಾನಿ, ಶಿವಾನಂದ ಮಳಿಮಠ, ಮುಬಾರಕ್ ಮಂಗಳೂರ, ರಾಜು ಸಂಗಮ, ಫಕೀರಪ್ಪ ತಳವಾರ, ಮೂಕಪ್ಪ ಹೂನೂರ, ಯಲಗುರದಪ್ಪ ಗೌಡರ, ರಜಾಕ್ ಕುದರಿ, ಸಲೀಮ ಮೋಮಿನ್, ಜಮೀರ ಮೌಲ್ವಿ, ರಫೀಕ ಕಲ್ಬುರ್ಗಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net