18 ತಿಂಗಳಲ್ಲಿ ಕಾಮಗಾರಿ ಮುಗಿಯಲಿ

 ಹುನಗುಂದ ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ಈಜು ಕೊಳದ ಕಾಮಗಾರಿ ಭೂಮಿ ಪೂಜೆಯನ್ನು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ನೆರವೇರಿಸಿದರು. ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ,  ಎ.ಕೆ.ಉಪನಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ ಇದ್ದರು.
ಹುನಗುಂದ ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ಈಜು ಕೊಳದ ಕಾಮಗಾರಿ ಭೂಮಿ ಪೂಜೆಯನ್ನು ಸಣ್ಣ ಕೈಗಾರಿಕೆ ಸಾರ್ವಜನಿಕ ಉದ್ಯಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ನೆರವೇರಿಸಿದರು. ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಎ.ಕೆ.ಉಪನಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ವಿಜಯಾನಂದ ಕಾಶಪ್ಪನವರ ಹೇಳಿಕೆ
  • ಈಜು ಕೊಳ ನಿರ್ಮಾಣಕ್ಕೆ ಭೂಮಿ ಪೂಜೆ
  • ಹುನಗುಂದ ಪಟ್ಟಣಕ್ಕೆ ಬಹುದಿನಗಳ ಬೇಡಿಕೆಯಾದ ಯುವಕರಿಗೆ, ಮಕ್ಕಳಿಗೆ ಈಜುಗಳ ಅವಶ್ಯಕತೆ ಇತ್ತು.
ಹುನಗುಂದ:

ರಾಜ್ಯದಲ್ಲಿ ಯಾವಾಗ ಕಾಂಗ್ರೆಸ್ ಪಕ್ಷ ಅಧಿಕಾರ ಬಂದಿದೆ. ಅಂದು ರೈತರ, ಬಡವ ಬಲ್ಲಿದ, ದಲಿತ ಸೇರಿ ಎಲ್ಲರನ್ನೂ ಎತ್ತಿ ಹಿಡಿವ ಕೆಲಸ ದೇಶ ಮತ್ತು ರಾಜ್ಯದಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಸಣ್ಣ ಕೈಗಾರಿಕೆ- ಸಾರ್ವಜನಿಕ ಉದ್ದೆಮೆಗಳ ಸಚಿವ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ಜಿಲ್ಲಾ ನಗರಾಭಿವೃದ್ಧಿ ಕೋಶ ಬಾಗಲಕೋಟೆ ಹಾಗೂ ಪುರಸಭೆಯ ಕಾರ್ಯಾಲಯ ಆಶ್ರಯದಲ್ಲಿ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ 3.50 ಕೋಟಿ ರೂ. ವೆಚ್ಚದ ಈಜು ಕೊಳದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಹುನಗುಂದ ಪಟ್ಟಣಕ್ಕೆ ಬಹುದಿನಗಳ ಬೇಡಿಕೆಯಾದ ಯುವಕರಿಗೆ, ಮಕ್ಕಳಿಗೆ ಈಜುಗಳ ಅವಶ್ಯಕತೆ ಇತ್ತು. ನದಿ ಬಾವಿಗಳಲ್ಲಿ ಈಜುಲು ಹೋಗಿ ಅಹಿತಕರ ಘಟನೆ ಯಾಗದ ಹಿತ ದೃಷ್ಠಿಯಿಂದ ಈಜುಗೊಳ ನಿರ್ಮಾಣ ಮಾಡಲಾಗುತ್ತಿದೆ. 18 ತಿಂಗಳಲ್ಲಿ ಈ ಕಾಮಗಾರಿ ಮುಗಿಯಲಿದೆ ಎಂದರು.
ಪಟ್ಟಣಕ್ಕೆ ಎಲ್ಲ ಸೌಕರ್ಯಗಳು ಒದಗಿಸಬೇಕು. ಯಾವುದೇ ಯೋಜನೆಯಿಂದ ವಂಚಿತ ಆಗಬಾರದು. ಮುಖ್ಯವಾಗಿ ತಾಲೂಕು ಕೇಂದ್ರ ವಾಗಿದೆ. ಹುನಗುಂದಕ್ಕೆ 42 ಕೋಟಿ ರೂ. ವೆಚ್ಚದ 247 ಮನೆ ಮನೆಗೂ ಕುಡಿಯುವ ನೀರಿನ ಕಾಮಗಾರಿ ಮುಗಿಯುವ ಹಂತದಲ್ಲಿದೆ. 43 ಕೋಟಿಯ ಒಳಚರಂಡಿ ಯೋಜನೆ ಮಂಜೂರು ಆಗಿದೆ, 11 ಕೋಟಿ ರೂ. ವೆಚ್ಚದಲ್ಲಿ ಅಮೃತ-2 ಕುಡಿಯುವ ನೀರಿನ ಆರಂಭವಾಗಲಿದೆ ಎಂದು ತಿಳಿಸಿದರು.
ಕೃಷ್ಣಾ ನದಿಯಿಂದ ಶಾಶ್ವತವಾಗಿ 170 ಹಳ್ಳಿಗೆ 135 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಹುನಗುಂದಲ್ಲಿ ಕೆರೆ ನಿರ್ಮಾಣ ಮಾಡಲಾಗುವುದು. ಹುನಗುಂದಕ್ಕೆ 50 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು 19 ಕೋಟಿ ವೆಚ್ಚದ ನಿರ್ಮಾಣ ಆಗಲಿದೆ. 100 ಶಾಲೆಗಳಿಗೆ ಸ್ಮಾಟ ಕ್ಲಾಸ್ ಮಾಡಲಾಗಿದೆ. ಇನ್ನೂ 140 ಶಾಲೆಗಳಿಗೆ ಸ್ಮಾಟ್ ಕ್ಲಾಸ್ ಮಾಡುತ್ತೇನೆ. ಮತಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ, ಕುಡಿಯುವ ನೀರು, ಆಸ್ಪತ್ರೆ, ಶಿಕ್ಷಣ, ಕೃಷಿ ನೀರಾವರಿ, ಮೂಲ ಸೌಕರ್ಯ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ತಾಪಂ ಮಾಜಿ ಅಧ್ಯಕ್ಷ ಅಮೀನಪ್ಪ ಸಂದಿಗವಾಡ, ಎ.ಕೆ.ಉಪನಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜೀಹಾಳ, ಬಸವರಾಜ ಗದ್ದಿ,ದೇವು ಡಂಬಳ, ಸಿದ್ದಪ್ಪ ಹೊಸೂರ, ಮಹಾಂತೇಶ ಅವಾರಿ, ಜಬ್ಬಾರ ಕಲಬುರ್ಗಿ, ಶರಣು ಬೆಲ್ಲದ, ತಹಸೀಲ್ದಾರ ಪ್ರದೀಪಕುಮಾರ ಹಿರೇಮಠ, ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ತಾಪಂ ಇಒ ಮುರಳೀಧರ ದೇಶಪಾಂಡೆ ಸೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net