ಶ್ರೇಷ್ಠ ಕಲಾವಿದರನ್ನು ಗುರುತಿಸುವ ಕಾರ್ಯ ಶ್ಲಾಘನೀಯ

ಜಮಖಂಡಿ ನಗರದ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿವು ಹೂಗಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಬು ಜತ್ತಕರ್, ಸೋಮೇಶ ಸಿಂಧೂರ, ಮಹಾನಂದಾ ವಿಜಯ ಸಿಂಧೂರ ಇತರರಿದ್ದರು.
ಜಮಖಂಡಿ ನಗರದ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶಿವು ಹೂಗಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಬು ಜತ್ತಕರ್, ಸೋಮೇಶ ಸಿಂಧೂರ, ಮಹಾನಂದಾ ವಿಜಯ ಸಿಂಧೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯವಾದಿ ಎನ್.ಎಸ್. ದೇವರವರ ಹೇಳಿಕೆ
  • ಪ್ರಶಸ್ತಿ ಪ್ರದಾನ ಕಾರ್ಯಕ್ರಮ
  • ವಿಜಯ ಸಿಂಧೂರ ಅವರು ರಚಿಸಿದ ಕಲಾಕೃತಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ವಿಶೇಷ ಗೌರವಕ್ಕೆ ಪಾತ್ರವಾಗಿವೆ
ಜಮಖಂಡಿ: ವಿಜಯ ಸಿಂಧೂರ ಅವರು ಅಪರೂಪದ ಚಿತ್ರಕಲಾವಿದರಾಗಿದ್ದು, ಕಲೆ ಜತೆಗೆ ಸಂಗೀತದ ಆರಾಧಕರೂ ಆಗಿದ್ದರು. ಅವರು ರಚಿಸಿದ ಕಲಾಕೃತಿಗಳು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ವಿಶೇಷ ಗೌರವಕ್ಕೆ ಪಾತ್ರವಾಗಿವೆ ಎಂದು ಹಿರಿಯ ನ್ಯಾಯವಾದಿ ಎನ್.ಎಸ್. ದೇವರವರ ಹೇಳಿದರು.
ನಗರದ ಸಿಂಧೂರ ಆರ್ಟ್ ಗ್ಯಾಲರಿಯಲ್ಲಿ ವಿಜಯ ಸಿಂಧೂರ ಆರ್ಟ್ ಫೌಂಡೇಷನ್ ಹಾಗೂ ವಿಜಯಪುರದ ಕ್ಯಾನ್ವಾಸ್ ಆರ್ಟ್ ಫೌಂಡೇಷನ್ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಜಯ ಸಿಂಧೂರ ಆರ್ಟ್ ಫೌಂಡೇಷನ್ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲೆಯನ್ನೇ ಕೃಷಿಯನ್ನಾಗಿ ಮಾಡಿಕೊಂಡು ವಿವಿಧ ವರ್ಣಗಳಲ್ಲಿ ಹಲವಾರು ರಚನಾತ್ಮಕ ಕಲಾಕೃತಿಗಳನ್ನು ಸೃಷ್ಠಿಸಿದ ಅವರು, ವರ್ಣಶಿಲ್ಪಿ ಕೆ. ವೆಂಕಪ್ಪ ಪ್ರಶಸ್ತಿ ಸೇರಿ ಅನೇಕ ಗೌರವಗಳಿಗೆ ಭಾಜನರಾಗಿದ್ದರು. ಮೇಧಾವಿ ಕಲಾವಿದರಾಗಿ ತುಂಬು ಜೀವನ ನಡೆಸಿದ ವಿಜಯ ಸಿಂಧೂರ ಅವರ ಹೆಸರಿನ ಫೌಂಡೇಷನ್ ಮೂಲಕ ನಾಡಿನ ಶ್ರೇಷ್ಠ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಈ ಕಾರ್ಯ ನಿರಂತರವಾಗಿ ನಡೆದುಕೊಂಡು ಬರಬೇಕು ಎಂದು ಅವರು ಆಶಿಸಿದರು.
ಮುತ್ತಿನಕಂತಿ ಹಿರೇಮಠದ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಗಳು, ವಿಜಯಪುರದ ಹಿರಿಯ ಕಲಾವಿದ ವಿದ್ಯಾಧರ ಸಾಲಿ, ಶಿವು ಹೂಗಾರ, ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಬು ಜತ್ತಕರ್, ದಿ. ವಿಜಯ ಸಿಂಧೂರ ಅವರ ಪುತ್ರ ಸೋಮೇಶ ಸಿಂಧೂರ, ಮಹಾನಂದಾ ವಿಜಯ ಸಿಂಧೂರ, ಬಸವರಾಜ ಮುಸಂಡಿ, ರಾಜೀವ ಸಿಂಧೂರ, ಸ್ವಪ್ನಿಲ್ ಸಿಂಧೂರ, ಜ್ಯೋತಿ ಯಾವಗಲ್ ಇದ್ದರು. ಮಾರುತಿ ಭಜಂತ್ರಿ ಅವರಿಂದ ಶಾಸೀಯ ಸಂಗೀತ ಕಾರ್ಯಕ್ರಮ ಜರುಗಿತು. ಕಲಾವಿದ ರಮೇಶ್ ಚವಾಣ್ ಸ್ವಾಗತಿಸಿದರು. ಅಮೃತಾ ಸಿಂಧೂರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net