ಪುಟ್ಟರಾಜ ಗವಾಯಿಗಳು ನಡೆದಾಡುವ ಜ್ಞಾನ ದೇಗುಲ

ಮುಧೋಳ ನಗರದ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಸಂಗೀತ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಲಾವಿದ ಡಾ. ಕೆ.ಎನ್. ನಾಗೇಶ್, ಅನಂದ ಪೂಜಾರಿ, ಸದುಗೌಡ ಪಾಟೀಲ್, ಅಶೋಕ ಕುಲಕರ್ಣಿ, ಹನುಮಂತ ಸೋರಗಾಂವಿ, ಬಿ.ಎಚ್. ಬೀಳಗಿ, ಹನುಮಂತ ವಜ್ಜರಮಟ್ಟಿ ಇದ್ದರು.
ಮುಧೋಳ ನಗರದ ಕಸಾಪ ಭವನದಲ್ಲಿ ಹಮ್ಮಿಕೊಂಡಿದ್ದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ 16ನೇ ಪುಣ್ಯಸ್ಮರಣೋತ್ಸವ ಹಾಗೂ ಸಂಗೀತ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಲಾವಿದ ಡಾ. ಕೆ.ಎನ್. ನಾಗೇಶ್, ಅನಂದ ಪೂಜಾರಿ, ಸದುಗೌಡ ಪಾಟೀಲ್, ಅಶೋಕ ಕುಲಕರ್ಣಿ, ಹನುಮಂತ ಸೋರಗಾಂವಿ, ಬಿ.ಎಚ್. ಬೀಳಗಿ, ಹನುಮಂತ ವಜ್ಜರಮಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ಕೆ.ಎನ್. ನಾಗೇಶ್ ಅಭಿಮತ
  • 16ನೇ ಪುಣ್ಯಸ್ಮರಣೋತ್ಸವ

ಮುಧೋಳ: ಪಂಡಿತ ಪುಟ್ಟರಾಜ ಗವಾಯಿಗಳು ಕೇವಲ ಸಂಗೀತ ಕ್ಷೇತ್ರದ ಸಾಧಕರಾಗಿರಲಿಲ್ಲ. ಅವರು ಜ್ಞಾನ, ಸಂಗೀತ ಹಾಗೂ ಸಮಾಜ ಸೇವೆಯ ಮೂಲಕ ಸಾವಿರಾರು ಜನರ ಬದುಕಿಗೆ ಬೆಳಕಾದ, ನಡೆದಾಡುವ ದೇವಸ್ಥಾನವಾಗಿದ್ದರು ಎಂದು ಅಂತಾರಾಷ್ಟ್ರೀಯ ಕಲಾವಿದ ಡಾ. ಕೆ.ಎನ್. ನಾಗೇಶ್ ಹೇಳಿದರು.

ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಸೋಮವಾರ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ಸ್ಮೃ ತಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ 16ನೇ ಪುಣ್ಯ ಸ್ಮರಣೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತ ಮತ್ತು ಸಾಹಿತ್ಯವನ್ನು ಸಮಾಜ ಪರಿವರ್ತನೆಯ ಮಾಧ್ಯಮವಾಗಿ ಬಳಸಿಕೊಂಡ ಗವಾಯಿಗಳು, ಅಂಗವಿಕಲರು ಹಾಗೂ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಬದುಕಿನ ಅವಕಾಶ ಕಲ್ಪಿಸುವ ಮೂಲಕ ವಿಶಿಷ್ಟ ಸೇವೆ ಸಲ್ಲಿಸಿದ್ದರು. ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದುಗೌಡ ಪಾಟೀಲ ಮಾತನಾಡಿ, ಜಾತಿ, ಧರ್ಮ ಹಾಗೂ ಭಾಷೆಯ ಎಲ್ಲೆಗಳನ್ನು ಮೀರಿ ಸಂಗೀತ ಮತ್ತು ವಿದ್ಯೆಯ ದಾಸೋಹ ಮಾಡಿದ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ. ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವಜನರಲ್ಲಿ ನಮ್ಮ ಕಲಾ ಪರಂಪರೆ ಹಾಗೂ ಹಿರಿಯರ ಆದರ್ಶಗಳ ಬಗ್ಗೆ ಅರಿವು ಮೂಡಿಸುತ್ತವೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಆನಂದ ಪೂಜಾರಿ ಮಾತನಾಡಿ, ಕನ್ನಡ ನಾಡು- ನುಡಿ ಹಾಗೂ ಸಂಗೀತ ಕ್ಷೇತ್ರಕ್ಕೆ ಗವಾಯಿಗಳ ಕೊಡುಗೆಯನ್ನು ಸ್ಮರಿಸುವುದು ಸಮಾಜದ ಕರ್ತವ್ಯ. ಸ್ಥಳೀಯವಾಗಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಯುವ ಪೀಳಿಗೆಗೆ ಗುರು ಪರಂಪರೆಯ ಪರಿಚಯವಾಗಲಿದೆ ಎಂದು ಹೇಳಿದರು.
ತಾಲೂಕು ಜಂಗಮರ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಗಣಾಚಾರಿ, ಕಸಾಪ ಗೌರವಾಧ್ಯಕ್ಷ ಎಚ್.ಎಚ್. ಬಾಡಗಿ, ಮಾಚಕನೂರ ಕೆಎಂಎಫ್ ಅಧ್ಯಕ್ಷ ಗೋಪಾಲಗೌಡ ದಾಸರಡ್ಡಿ, ಹಿರಿಯ ಕಲಾವಿದರಾದ ಅಪ್ಪಣ್ಣ ಕೋಲೂರ, ಶ್ರೀಶೈಲಯ್ಯ ಗಣಾಚಾರಿ, ಅಶೋಕ ಕುಲಕರ್ಣಿ, ಬಿ.ಎಚ್. ಬೀಳಗಿ, ಸ್ಮೃ ತಿ ಸಂಸ್ಥೆ ಅಧ್ಯಕ್ಷ ಹನುಮಂತ ಸೋರಗಾಂವಿ ಸೇರಿ ಕಲಾವಿದರು, ಗಣ್ಯರು ಹಾಗೂ ಸಂಗೀತಾಸಕ್ತರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net