ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಈ ವರೆಗೂ ನಡೆದ ಸಾರ್ವತ್ರಿಕ ಮತ್ತು ಉಪ ಚುನಾವಣೆ ಸೇರಿ ಒಟ್ಟು ೧೮ ಚುನಾವಣೆಗಳು ನಡೆದಿವೆ. ಇದರಲ್ಲಿ ಅತಿ ಹೆಚ್ಚು ೫ ಸಲ ಶಾಸಕರಾಗಿದ್ದವರು ಕಾಂಗ್ರೆಸ್‌ನ ಬಿ.ಟಿ.ಮುರನಾಳ. ೩ಸಲ ಬಿಜೆಪಿಯ ವೀರಣ್ಣ ಚರಂತಿಮಠ, ತಲಾ ಎರಡು ಸಲ ಜನತಾ ಪಕ್ಷದಿಂದ ಜಿ.ವಿ.ಮಂಟೂರ(೧೯೮೩ರಲ್ಲಿ ಪಕ್ಷೇತರ- ೧೯೮೫ರಲ್ಲಿ ಜನತಾ ಪಕ್ಷ) ಜನತಾದಳದ ಜನತಾದಳದಿಂದ ಅಜಯಕುಮಾರ ಸರನಾಯಕ, ಬಿಜೆಪಿಯ ಪಿ.ಎಚ್.ಪೂಜಾರ, ಕಾಂಗ್ರೆಸ್ ಪಕ್ಷದ ಎಚ್.ವೈ.ಮೇಟಿ, ತಲಾ ಒಂದು ಸಲ ಕಾಂಗ್ರೆಸ್ ಪಕ್ಷದ ಪರಪ್ಪ ಕಳ್ಳಿಗುಡ್ಡ, ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ಎಸ್.ನಿಜಲಿಂಗಪ್ಪ ಬಾಗಲಕೋಟೆ ಶಾಸಕರಾಗಿದ್ದರು.