ಪಕ್ಷ ಸಂಘಟನೆಗೆ ಕಾರ್ಯಕರ್ತರ ಬಲ ಮುಖ್ಯ

ಬೀಳಗಿ ಕ್ರಾಸ್ ಹತ್ತಿರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ಆರ್. ನಿರಾಣಿ ಉದ್ಘಾಟಿಸಿದರು. ವಿಪ ಸದಸ್ಯ ಪಿ.ಎಚ್. ಪೂಜಾರಿ, ಎಚ್.ಆರ್. ನಿರಾಣಿ, ಹೂವಪ್ಪ ರಾಠೋಡ ಇತರರಿದ್ದರು.
ಬೀಳಗಿ ಕ್ರಾಸ್ ಹತ್ತಿರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ ಕಾರ್ಯಕ್ರಮವನ್ನು ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ. ಮುರುಗೇಶ ಆರ್. ನಿರಾಣಿ ಉದ್ಘಾಟಿಸಿದರು. ವಿಪ ಸದಸ್ಯ ಪಿ.ಎಚ್. ಪೂಜಾರಿ, ಎಚ್.ಆರ್. ನಿರಾಣಿ, ಹೂವಪ್ಪ ರಾಠೋಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ಹೇಳಿಕೆ
  • ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ
ಬೀಳಗಿ: ಅತೀ ಹೆಚ್ಚು ಸದಸ್ಯತ್ವ ಪಡೆದುಕೊಂಡ ದೇಶದ ಏಕೈಕ ಪಕ್ಷ ಭಾರತೀಯ ಜನತಾ ಪಕ್ಷ. ಇದು ಪ್ರಧಾನಿ ನರೇಂದ್ರ ಮೋದಿಯವರ ಜನಪರ ಆಡಳಿತ ಇದಕ್ಕೆ ಸಾಕ್ಷಿಯಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ಹೇಳಿದರು.
ಬೀಳಗಿ ಕ್ರಾಸ್ ಹತ್ತಿರದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ನಡೆದ ಪಂ. ದೀನದಯಾಳ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ-2026 ಬೀಳಗಿ ವಿಧಾನ ಸಭಾ ಕ್ಷೇತ್ರದ ಮಂಡಲ ಮಟ್ಟದ ಪ್ರಶಿಕ್ಷಣ ವರ್ಗ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಂಎಲ್‌ಎ, ಎಪಿಂಗಳಿಗೆ ಗೆಲಿಸಿದರೆ ಸಾಲದು ಗ್ರಾಮ ಪಂಚಾಯಿತಿ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲುವು ಮುಖ್ಯ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬರುವಂತೆ ಮಾಡಿದಾಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ನಮ್ಮ ದೇಶ ಅಭಿವೃದ್ಧಿ ಸಂಕೇತವಾಗಿದೆ. ಕಾರ್ಯಕರ್ತರು ಬೂತ ಮಟ್ಟದಲ್ಲಿ ಜವಾಬ್ದಾರಿಯಿಂದ ಕೆಲಸ ಮಾಡಿ ಗೆದ್ದರೆ ಮಾತ್ರ ಮುಂದಿನ ಚುನಾವಣೆಗಳನ್ನು ಗೆಲ್ಲಲು ಸಾಧ್ಯ. ನಮ್ಮ ಜಿಲ್ಲೆಯಲ್ಲಿ ಬೋಗಸ್ ಮತದಾರರು ಹೆಚ್ಚು ಜನ ಇದ್ದಾರೆ ಅವುಗಳನ್ನು ಸೂಕ್ತ ಪರಿಶೀಲನೆಮಾಡಿ ಚುನಾವಣಾಽಕಾರಿಗಳ ಗಮನಕ್ಕೆ ತರಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರಿ ಮಾತನಾಡಿ, ರಾಷ್ಟç ನಿರ್ಮಾಣದ ವಿಚಾರ ಧಾರೆಗಳನ್ನು ಪ್ರತಿಯೊಬ್ಬರ ಮನದಲ್ಲಿ ತುಂಬುವ ಮನೋಭಾವ ಹೊಂದಿದ ಏಕೈಕ ಪಕ್ಷ ಭಾರತೀಯ ಜನತಾ ಪಾರ್ಟಿ. ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅಭಿವೃದ್ಧಿಮಾಡಲಾಗಿದೆ. ಪ್ರಧಾನಿಯವರ ಪರಿಕಲ್ಪನೆ ಯಾರು ಊಹಿಸದಷ್ಟು ಕೆಲಸ ಮಾಡಿದ್ದಾರೆ. ದೋಷ ರಹಿತ ಮತದಾರರ ಪಟ್ಟಿಯಾಗಬೇಕು. ಕಾಂಗ್ರೆಸ್ ತನ್ನ ಸ್ವಾರ್ಥ ಭಾವನೆಯಿಂದ ಭಾರತೀಯ ಸಂಸ್ಕೃತಿ, ಪರಂಪರೆಗೆ ತಿಲಾಂಜಲಿ ಇಟ್ಟಿದೆ. ಯುವ ಜನತೆ ಜಾಗೃತರಾಗಿ ಕಾಂಗ್ರೆಸ್ ಬುಡವಿಲ್ಲದಂತೆ ಮಾಡುವ ಸಂಕಲ್ಪ ಮಾಡಬೇಕಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಅರ್. ನಿರಾಣಿ, ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ಬಿಜೆಪಿ ತಾಲೂಕು ಅಧ್ಯಕ್ಷ ಹೊಳಬಸು ಬಾಳಾಶಟ್ಟಿ, ಪ್ರಧಾನ ಕಾರ್ಯದರ್ಶಿ ಗಂಗಾಧರ ಬಿಂಗಿ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಅಂಗಡಿ, ಮಲ್ಲಪ್ಪ ಶಂಭೋಜಿ, ಸಂಗಪ್ಪ ಕಟಗೇರಿ, ರಾಮಣ್ಣ ಕಾಳಪ್ಪಗೋಳ, ಶ್ರಿಶೈಲ ಗೌರಿ, ನ್ಯಾಯವಾದಿ ಮಹಾತೇಂಶ ಕೋಲಕಾರ, ಎಂ.ಬಿ.ಬೂಸರಡ್ಡಿ, ಮಿಥುನ ನಾಯಕ, ಬಸವಂತಪ್ಪ ಸಂಕಾನಟ್ಟಿ, ಕೆಎಂಎಫ್ ನಿರ್ದೇಶಕ ಸಿದ್ದಪ್ಪ ಕಡಪಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net