ಯೋಧರ ಸೇವೆ ಸ್ಮರಣೀಯ

ಗುಳೇದಗುಡ್ಡ ಪಟ್ಟಣದ ರಾಠಿ ಹಾಗೂ ಕಾವಡೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು. ಪಿಇಟಿಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ, ಶಾಲೆ ಚೇರ್ಮನ್ ವಿಠ್ಠಲಸಾ ಕಾವಡೆ, ನಿರ್ದೇಶಕ ಪುರಷೋತ್ತಮ ಜಂವಾರ, ಎಸ್.ಎನ್. ಮಾಲಪಾಣಿ, ಮುಖ್ಯಗುರು ಆರ್. ಎಸ್. ಜಿರ್ಲಿ, ವೀಣಾ ಹಳ್ಳೂರ, ಶಬಾನಾ ಮಕಾನದಾರ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪಿಇಟಿಯ ಗೌರವಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿಕೆ
  • ಕಾರ್ಗಿಲ್ ವಿಜಯೋತ್ಸವ
  • ಭಾರತ ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಯೋಧರು ಜೀವನದ ಹಂಗು ತೊರೆದು ಹೋರಾಡಿ ದೇಶವನ್ನು ರಕ್ಷಿಸಿದ್ದಾರೆ.
ಗುಳೇದಗುಡ್ಡ: ಭಾರತ ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ನಮ್ಮ ಯೋಧರು ಜೀವನದ ಹಂಗು ತೊರೆದು ಹೋರಾಡಿ ದೇಶವನ್ನು ರಕ್ಷಿಸಿದ್ದಾರೆ. ಅವರ ಸೇವೆ ಸ್ಮರಣೀಯ ಎಂದು ಸ್ಥಳೀಯ ಪಿಇಟಿಯ ಗೌರವ ಕಾರ್ಯದರ್ಶಿ ರವೀಂದ್ರ ಪಟ್ಟಣಶೆಟ್ಟಿ ಹೇಳಿದರು.
ಸ್ಥಳೀಯ ರಾಠಿ ಹಾಗೂ ಕಾವಡೆ ಆಂಗ್ಲಮಾಧ್ಯಮ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ 27ನೇ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಯೋಧರ ದೇಶಸೇವೆ ಕುರಿತು ಅಧ್ಯಾಯನನ ಮಾಡಬೇಕು. ಇಂದು ದೇಶಸೇವೆ ಸಲ್ಲಿಸಲು ಹೆಚ್ಚಿನ ಯುವಕರು ಅಗ್ನಿವೀರರಾಗಿ ಸೇರ್ಪಡೆಯಾಗುತ್ತಿರುವುದು ಸಂತೋಷದ ವಿಷಯ ಎಂದರು.
ಪರ್ವತಿ ಗ್ರಾಮದ ನಿವೃತ್ತ ಯೋಧ ಮಂಜು ಆಸಂಗಿ ಹಾಗೂ ಖಾನಾಪೂರ ಗ್ರಾಮದ ಯೋಧ ಮಂಜಪ್ಪ ಕರಮಡಿ ಅವರನ್ನು ಸನ್ಮಾನಿಸಲಾಯಿತು.
ಶಾಲೆ ಚೇರ್ಮನ್ ವಿಠ್ಠಲಸಾ ಕಾವಡೆ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ನಿರ್ದೇಶಕ ಪುರಷೋತ್ತಮ ಜಂವಾರ, ಎಸ್.ಎನ್. ಮಾಲಪಾಣಿ, ಮುಖ್ಯಗುರು ಆರ್. ಎಸ್. ಜಿರ್ಲಿ, ವೀಣಾ ಹಳ್ಳೂರ, ಶಬಾನಾ ಮಕಾನದಾರ, ಶಿಕ್ಷಕಿ ಎಸ್.ಕೆ.ಕ್ಷೌರದ, ವೈಲೆಟ್ ಯರಗುಂಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net