ಇನ್ನು ಹುನಗುಂದ ಕ್ಷೇತ್ರದಲ್ಲಿ ಸತತ ಮೂರು ಸಲ ಶಾಸಕರಾಗಿದ್ದ ಎಸ್.ಆರ್.ಕಾಶಪ್ಪನವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ೨೦೦೩ರಲ್ಲಿ ಉಪ ಚುನಾವಣೆ ನಡೆಯಿತು. ಕಾಂಗ್ರೆಸ್ ಪಕ್ಷ ಅನುಕಂಪದ ಲಾಭ ಪಡೆಯಲು ಎಸ್‌ಆರ್‌ಕೆ ಅವರ ಧರ್ಮಪತ್ನಿ ಗೌರಮ್ಮ ಅವರಿಗೆ ಪಕ್ಷದ ಟಿಕೆಟ್ ನೀಡಿತು. ಅಽಕಾರದಲ್ಲಿ ಎಸ್.ಎಂ.ಕೃಷ್ಣಾ ನೇತೃತ್ವದ ಕಾಂಗ್ರೆಸ್ ಪಕ್ಷ ಇತ್ತು. ೨೦೦೦ನೇ ಇಸ್ವಿ ನಂತರ ನಡೆದ ಅಂತ್ಯAತ ಜಿದ್ದಜಿದ್ದಿಯಿಂದ ನಡೆದ, ಘಟಾನುಘಟಿಗಳು ಕ್ಷೇತ್ರದಲ್ಲಿ ಠಿಕಾಣಿ ಹೂಡಿದ ಉಪ ಚುನಾವಣೆ ಇದಾಗಿತ್ತು. ಆಡಳಿತ ಪಕ್ಷದ ಶಕ್ತಿ ಎದುರು ವಿಪಕ್ಷಗಳು ದಿಕ್ಕಾಪಾಲಾಗಿ ಹೋಗಿದ್ದವು. ಅಂದು ಗೌರಮ್ಮ ಕಾಶಪ್ಪನವರ ೧೦೨೯೭ ಮತಗಳ ಅಂತರದಿAದ ಗೆಲುವು ಪಡೆದಿದ್ದರು. ಅದಕ್ಕೂ ಮುನ್ನ ೧೯೯೯ರಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಎಸ್.ಆರ್.ಕಾಶಪ್ಪನವರ ಅವರು ಕೇವಲ ೯೩೬ ಮತಗಳ ಅಂತರದಲ್ಲಿ ಗೆದ್ದಿದ್ದರು. ಉಪ ಚುನಾವಣೆಯಲ್ಲಿ ಭರ್ಜರಿ ಅಂತರ ಕಾಯ್ದುಕೊಂಡಿದ್ದ ಗೌರಮ್ಮ ಅವರು, ಬಳಿಕ ನಡೆದ ಕೆಲವೇ ತಿಂಗಳು ಅಂತರದಲ್ಲಿ ನಡೆದ ೨೦೦೪ ರ ಸಾರ್ವತ್ರಿಕ ಚುನಾವಣೆಯಲ್ಲಿ ೧೮೪೨೪ ಮತಗಳ ಅಂತರದಲ್ಲಿ ಸೋಲು ಕಂಡಿದ್ದರು.