ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಹಿರಿದು

ರಬಕವಿ ಹೊಸೂರಿನಲ್ಲಿ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರಕ್ಕೆ ಡಿಡಿಪಿಐ ಅಜಿತ ಮನ್ನಿಕೇರಿ ಚಾಲನೆ ನೀಡಿದರು. ಬಿಇಒ ಎ.ಕೆ. ಬಸನ್ನವರ, ಸತೀಶ ಹಜಾರೆ ಇತರರಿದ್ದರು.
ರಬಕವಿ ಹೊಸೂರಿನಲ್ಲಿ ವಿಜ್ಞಾನ ಶಿಕ್ಷಕರಿಗಾಗಿ ಹಮ್ಮಿಕೊಂಡಿದ್ದ ವಿಜ್ಞಾನ ಕಾರ್ಯಾಗಾರಕ್ಕೆ ಡಿಡಿಪಿಐ ಅಜಿತ ಮನ್ನಿಕೇರಿ ಚಾಲನೆ ನೀಡಿದರು. ಬಿಇಒ ಎ.ಕೆ. ಬಸನ್ನವರ, ಸತೀಶ ಹಜಾರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಡಿಪಿಐ ಅಜಿತ ಮನ್ನಿಕೇರಿ ಅನಿಸಿಕೆ
  • ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಕಾರ್ಯಾಗಾರ
  • ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ
ರಬಕವಿ-ಬನಹಟ್ಟಿ : ವಿದ್ಯಾರ್ಥಿಗಳ ಮನದಾಳಕ್ಕೆ ಹೋಗಿ ಅವರ ಇಷ್ಟಾನುಸಾರ ಬೋಧನೆ ಮಾಡುವಲ್ಲಿ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಭಹುಮುಖ್ಯವಾಗಿದೆ ಎಂದು ಡಿಡಿಪಿಐ ಅಜಿತ ಮನ್ನಿಕೇರಿ ಹೇಳಿದರು.
ರಬಕವಿ ಹೊಸೂರಿನ ಪದ್ಮಾವತಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಹಜಾರೆ ೌಂಡೇಶನ್, ಜಿ.ಪಂ., ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಯೋಗದಲ್ಲಿ ಜಿಲ್ಲೆಯ ಪ್ರೌಢಶಾಲೆಗಳ ವಿಜ್ಞಾನ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಈ ಬಾರಿಯ ಎಸ್ಸೆಸ್ಸೆಲ್ಸಿ ಲಿತಾಂಶ ವೃದ್ಧಿಸಲು ಶಿಕ್ಷಕರು ಉತ್ತಮವಾದ ತಯಾರಿ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಡಾ. ಗಣೇಶ ಭಟ್ ಮಾತನಾಡಿ, ಶಿಕ್ಷಕರಾದವರು ಚಟುವಟಿಕೆಗಳ ಮೂಲಕ ಪಾಠ ಬೋಧಿಸುವ ಕಲೆ ಹೊಂದಿರಬೇಕು. ವಿದ್ಯಾರ್ಥಿಗಳು ತಮ್ಮ ಬೋಧನೆಯತ್ತ ಸೆಳೆಯುವ ಕೌಶಲ ಕರಗತ ಮಾಡಿಕೊಂಡಿರಬೇಕು ಎಂದು ಸಲಹೆ ನೀಡಿದರು.
ಪಠ್ಯ ಪುಸ್ತಕ ರಚನಾ ಸಮಿತಿ ಸದಸ್ಯ ಶಶಿಕುಮಾರ ಬಿ.ಎಸ್., ಬಿಇಒ ಎ.ಕೆ. ಬಸನ್ನವರ ಮಾತನಾಡಿದರು. ಸಂಸ್ಥೆ ಕಾರ್ಯಾಧ್ಯಕ್ಷ ಸತೀಶ ಹಜಾರೆ, ಆಡಳಿತಾಧಿಕಾರಿ ಭಾರತಿ ತಾಳಿಕೋಟಿ, ಶ್ರೀಶೈಲ ಕುಂಬಾರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net