ಜಮಖಂಡಿ ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಆಯೋಜಿಸಿದ್ದ ದತ್ತಿನಿಧಿ ಉಪನ್ಯಾಸ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಉದ್ಘಾಟಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೇಲ್ಲಿಕೇರಿ, ಹಿರಿಯ ಸಾಹಿತಿ ಶಂಕರ ಬೈಚಬಾಳ, ನಿವತ್ತ ಶಿಕ್ಷಕ ಶ್ಯಾಮ ಕುಲಕರ್ಣಿ, ಓಲೆಮಠದ ಆನಂದದೇವರು, ಪ್ರಸಾದಯ್ಯ ಹಿರೇಮಠ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶಿಕ್ಷಕರ ನಿರಪೇಕ್ಷ ಸೇವೆ ಗುರುತಿಸಿ ಸತತ 26 ವರ್ಷಗಳಿಂದ ಪ್ರಶಸ್ತಿ
ದತ್ತಿನಿಧಿ ಉಪನ್ಯಾಸ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಜಾನಪದ ಸಾಹಿತ್ಯ ಜೀವನ ಮೌಲ್ಯಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ
ಜಮಖಂಡಿ: ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಮುಖಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಗುರುತಿಸಿ ಸತತ 26 ವರ್ಷಗಳಿಂದ ಪ್ರಶಸ್ತಿ ನೀಡುತ್ತಿರುವ ಮಧುರಖಂಡಿಯ ಗವಿಮಠ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯವಾಗಿದೆ ಎಂದು ವಿಜಯಪುರ ಜಿಲ್ಲಾ ಕಾರ್ಮಿಕ ಅಧಿಕಾರಿ ಉಮಾಶ್ರೀ ಕೋಳಿ ಹೇಳಿದರು.
ತಾಲೂಕಿನ ಮಧುರಖಂಡಿ ಗ್ರಾಮದಲ್ಲಿ ಗವಿಮಠ ಪ್ರತಿಷ್ಠಾನ, ಬಾಗಲಕೋಟೆ, ಜಮಖಂಡಿ, ಹುನಗುಂದ ಮತ್ತು ಇಲಕಲ್ ಕನ್ನಡ ಸಾಹಿತ್ಯ ಪರಿಷತ್ತುಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ದತ್ತಿನಿಧಿ ಉಪನ್ಯಾಸ, ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಸಾಹಿತಿ ಶಂಕರ ಬೈಚಬಾಳ ಮಾತನಾಡಿ, ಇಂದಿನ ಸಮಾಜದಲ್ಲಿ ಮೌಲ್ಯಗಳ ಕುಸಿತವಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ, ಜಾನಪದ ಸಾಹಿತ್ಯ ಜೀವನ ಮೌಲ್ಯಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೇಲ್ಲಿಕೇರಿ ಮಾತನಾಡಿ, ಗವಿಮಠ ಕುಟುಂಬವು ಪೋಷಕರ ಸ್ಮರಣಾರ್ಥ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿರುವುದು ಯುವಪೀಳಿಗೆಗೆ ಪ್ರೇರಣೆಯಾಗಿದೆ ಎಂದು ಹೇಳಿದರು.
ನಿವತ್ತ ಶಿಕ್ಷಕ ಶ್ಯಾಮ ಕುಲಕರ್ಣಿ ಕಡಿಮೆ ವೆಚ್ಚದ ವಿಜ್ಞಾನ ಪ್ರಯೋಗಗಳನ್ನು ಪ್ರದರ್ಶಿಸಿ, ಮನರಂಜನಾ ವಿಧಾನದಲ್ಲಿ ಬೋಧನೆ ಮಾಡಿದರೆ ಮಕ್ಕಳಲ್ಲಿ ವಿಷಯಾಸಕ್ತಿ ಹೆಚ್ಚುತ್ತದೆ ಎಂದು ಅಭಿಪ್ರಾಯಪಟ್ಟರು.
ಓಲೆಮಠದ ಆನಂದದೇವರು ಸಾನ್ನಿಧ್ಯ ವಹಿಸಿದ್ದರು. ಪ್ರಸಾದಯ್ಯ ಹಿರೇಮಠ ನೇತತ್ವ ವಹಿಸಿದ್ದರು.
ಡಾ. ಟಿ.ಪಿ. ಗಿರಡ್ಡಿ, ಪ್ರೊ. ಬಿ.ಆಯ್. ಕಡ್ಡಿ, ವೆಂಕಟೇಶ ಇನಾಮದಾರ, ಪ್ರಭು ಮಾಲಗಿತ್ತಿಮಠ, ಜೆ.ಕೆ. ಹುಸೇನಭಾಯಿ, ತಾಲೂಕು ಕಸಾಪ ಅಧ್ಯಕ್ಷ ಸಂತೋಷ ತಳಕೇರಿ, ಗವಿಸಿದ್ದಯ್ಯ ಗವಿಮಠ, ಡಾ. ಮತ್ಯುಂಜಯ ಗವಿಮಠ, ಉಮೇಶ ಸಿದರಡ್ಡಿ, ಪ್ರಭು ಹಿಡಕಲ್ ಇತರರು ಇದ್ದರು.
ಐಶ್ವರ್ಯ ಮತ್ತು ಕಾವ್ಯ ಗವಿಮಠ ಪ್ರಾರ್ಥಿಸಿದರು. ಡಾ. ಬಸವರಾಜ ಗವಿಮಠ ಸ್ವಾಗತಿಸಿದರು. ಡಾ. ಪ್ರಕಾಶ ಖಾಡೆ ಆಶಯ ನುಡಿಗಳನ್ನಾಡಿದರು. ರಶ್ಮಿ ಗವಿಮಠ ನಿರೂಪಿಸಿದರು. ಡಾ. ಲಿಂಗಾನಂದ ಗವಿಮಠ ವಂದಿಸಿದರು.