ನಕ್ಕು ನಗಿಸಿದ ಹೆಣದ ಸೋಗಿನ ಮೆರವಣಿಗೆ..!

ಹೋಳಿ ಹಬ್ಬದ ಅಂಗವಾಗಿ ಗುಳೇದಗುಡ್ಡದ ನಗ್ಲಿ ಪೇಟೆ ನಾಟ್ಯ ಸಂಘದವರು ಮಾಡಿದ ಅಣಕು ಹೆಣದ ಸೋಗಿನ ಬಂಡಿ ದೃಶ್ಯ.
ಹೋಳಿ ಹಬ್ಬದ ಅಂಗವಾಗಿ ಗುಳೇದಗುಡ್ಡದ ನಗ್ಲಿ ಪೇಟೆ ನಾಟ್ಯ ಸಂಘದವರು ಮಾಡಿದ ಅಣಕು ಹೆಣದ ಸೋಗಿನ ಬಂಡಿ ದೃಶ್ಯ.
Published on
ಗುಳೇದಗುಡ್ಡ: ಹೋಳಿ ಹಬ್ಬದ ಅಂಗವಾಗಿ ಗುಳೇದಗುಡ್ಡ ಪಟ್ಟಣದಲ್ಲಿ ವಿವಿಧ ಓಣಿಗಳಲ್ಲಿ ಗೆಳೆಯರ ಬಳಗ, ಮ್ಯಾಳಗಳ ಯುವಕರು ಸೇರಿ ಮಂಗಳವಾರ ಕಾಮಣ್ಣ ರತಿದೇವಿ ಮೂರ್ತಿಪ್ರತಿಷ್ಠಾಪಿಸಿ, ರಾತ್ರಿ ಕಾಮದಹನ ಮಾಡಿದರು.
ಬುಧವಾರ ಒಬ್ಬರಿಗೊಬ್ಬರು ಬಣ್ಣ ಎರಚಿ ಸಂಭ್ರಮಿಸಿದರು.
ನಗರದ ನಗ್ಲಿಪೇಟೆಯ ನಾಟ್ಯ ಸಂಘದ ಅಣಕು ಹೆಣದ ಸೋಗಿನ ಬಂಡಿ ಮೆರವಣಿಗೆ ಹೋಳಿ ಹಬ್ಬಕ್ಕೆ ವಿಶೇಷ ಮೆರಗು ನೀಡಿತು. ಪುರುಷನಿಗೆ ಮಹಿಳೆಯ ವೇಷ ಹಾಕಿ, ಹೆಣದಂತೆ ಸಿಂಗಾರ ಮಾಡಿ ಟ್ರ‍್ಯಾಕ್ಟರ್‌ನಲ್ಲಿ ಕೂಡಿಸಿ, ಹಲಗಿ ಬಡಿಯುತ್ತ ಮೆರವಣಿಗೆ ಮಾಡಿದರು.
ಹೆಣ್ಣು ಮಕ್ಕಳ ವೇಷ ಧರಿಸಿದ ಪುರುಷರು, ನಾನಾ ತರಹದ ಕಸರತ್ತು, ಹಾವಭಾವ, ನಗೆ ಚಟಾಕಿಗಳನ್ನು ಹಾರಿಸಿ, ರಸ್ತೆಯುದ್ದಕ್ಕೂ ನೆರೆದಿದ್ದ ಜನರನ್ನು ರಂಜಿಸಿದರು.
ಅಣಕು ಹೆಣದ ಸೋಗು ನೋಡಲು ನಗರದ ರಸ್ತೆ ಯುದ್ದಕ್ಕೂ ನೂರಾರು ಜನ ಸೇರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net