ಉರಿವ ದೀಪ ಬೇರೆ ಬೇರೆ ಜಾತಿಯವರ ಶ್ರಮಗಳಿಂದ ಹಣತೆ, ಬತ್ತಿ ಮತ್ತು ತೈಲ ಒಂದುಗೂಡಿ ದೀಪ ಬೆಳಗುವುದು, ಅದು ಎಲ್ಲರ ಮನೆಯಲ್ಲಿ ಒಂದೇ ಸಮಾನ ಬೆಳಕು ನೀಡುವಂತೆ. ಮನುಷ್ಯನ ಬದುಕು ಬೆಳಗಾಗಬೇಕಾದಲ್ಲಿ ದೇಹವೆಂಬ ಪಣತೆ, ಎದೆಯಲ್ಲಿ ಪ್ರೇಮ ಎಂಬ ತೈಲ, ನಾವು ಮಾಡುವ ಸದಾಚಾರಗಳೆಂಬ ಭಕ್ತಿಯ ದೀಪ ಬೆಳಗಿಸಿದರೆ ಮನುಷ್ಯನ ಬದುಕು ಬೆಳಗುತ್ತದೆ. ಆಚಾರಕ್ಕೆ ಅರಸನಾಗು, ನೀತಿಗೆ ಪ್ರಭುವಾಗು, ಮಾತಿನಲ್ಲಿ ಚೂಡಾಮಣಿಯಾಗು ನನ್ನ ಕಂದ ನೀ ಜ್ಯೋತಿಯಾಗಿ ಬೆಳಗು ಎಂದು ತಾಯಿ ತನ್ನ ಕಂದನಿಗೆ ಎನ್ನುತ್ತಾಳೆ. ಬಸವಣ್ಣ ಪ್ರೇಮದಿಂದ ಜಗತ್ತನ್ನೇ ಮಹಾಮನೆ ಮಾಡಿದ್ದಾನೆ. ಸಹಜ ಪ್ರೇಮವೇ ಬದುಕಿಗೆ ಆನಂದ ನೀಡುತ್ತದೆ. ಸ್ವಾರ್ಥ ಪ್ರೇಮವು ಮನುಷ್ಯನಿಗೆ ದುಃಖ ನೀಡುವುದಲ್ಲದೆ ಬದುಕಿನಲ್ಲಿ ಬೆಳಕು ತರಲು ಸಾಧ್ಯವಿಲ್ಲ ಎಂದು ತಿಳಿಸಿದರು.