ಸಸ್ಯ ಸಂತೆ ರೈತರ ಜೊತೆ ಸಾರ್ವಜನಿಕರಗೂ ಸಹಕಾರಿ

ಬಾಗಲಕೋಟೆ ತೋಟಗಾರಿಕೆ ವಿವಿ ಆವರಣದಲ್ಲಿ ಶನಿವಾರ ಸಸ್ಯ ಸಂತೆಗೆ ಜಿಲ್ಲಾಽಕಾರಿ ಸಂಗಪ್ಪ ಹಾಗೂ ವಿವಿ ಕುಲಪತಿ ಡಾ. ವಿಷ್ಣುವರ್ಧನ ಸಸಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು. ಡಾ. ತಮ್ಮಯ್ಯ, ಡಾ.-Àಕ್ರುದ್ಧೀನ್ ಇತರರು ಇದ್ದರು.
ಬಾಗಲಕೋಟೆ ತೋಟಗಾರಿಕೆ ವಿವಿ ಆವರಣದಲ್ಲಿ ಶನಿವಾರ ಸಸ್ಯ ಸಂತೆಗೆ ಜಿಲ್ಲಾಽಕಾರಿ ಸಂಗಪ್ಪ ಹಾಗೂ ವಿವಿ ಕುಲಪತಿ ಡಾ. ವಿಷ್ಣುವರ್ಧನ ಸಸಿಗೆ ನೀರೂಣಿಸುವ ಮೂಲಕ ಚಾಲನೆ ನೀಡಿದರು. ಡಾ. ತಮ್ಮಯ್ಯ, ಡಾ.-Àಕ್ರುದ್ಧೀನ್ ಇತರರು ಇದ್ದರು.
Published on
ಬಾಗಲಕೋಟೆ: ಸಸ್ಯ ಸಂತೆ ಬರೀ ರೈತರಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಸಹ ಇದು ಹೆಚ್ಚು ಸಹಕಾರಿ ಆಗಲಿದೆ. ತೋವಿವಿಯಲ್ಲಿ ಆಯೋಜಿಸಿರುವ ಸಸ್ಯ ಸಂತೆ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಜಿಲ್ಲಾಽಕಾರಿ ಸಂಗಪ್ಪ ಅವರು ತಿಳಿಸಿದರು.
ಬಾಗಲಕೋಟೆ ತೋಟಗಾರಿಕೆ ವಿವಿ ಆವರಣದಲ್ಲಿ ಆಯೋಜಿಸಿರುವ ಸಸ್ಯ ಸಂತೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಸ್ಯ ಸಂತೆಯಲ್ಲಿ ಉತ್ತಮ ಗುಣಮಟ್ಟದ ಬೀಜಗಳು ಮತ್ತು ವಿವಿಧ ತಳಿಯ ಸಸಿಗಳು ದೊರೆಯುವದರಿಂದ ರೈತರು ತಮ್ಮ ತೋಟಗಳಲ್ಲಿ ಬೆಳೆಯಲು ಮತ್ತು ಸಾರ್ವಜನಿಕರು ಕೈತೋಟ ಹಾಗೂ ಗಾರ್ಡನ್ ಮಾಡಿಕೊಳ್ಳಲು ಅವಕಾಶ ಇದೆ ಎಂದರು.
ಪರಿಸರ ಸಂರಕ್ಷಣೆಗೆ ಪೂರಕವಾಗಿ, ಪೌಷ್ಠಿಕ ಆಹಾರ ಬೆಳೆಯಲು, ಹಸಿರು ಆರ್ಥಿಕತೆಗೆ ಬುನಾಽ ಹಾಕಲು ಸಸ್ಯ ಸಂತೆ ಸಹಕಾರ ನೀಡುತ್ತದೆ. ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಮಣ್ಣು ಹಾಗೂ ವಾತಾವರಣವಿದೆ. ಆದರೆ, ಗಿಡಮರಗಳ ಸಂಖ್ಯೆ ಕಡಿಮೆ ಇದೆ. ರೈತರು ಸೇರಿದಂತೆ ಎಲ್ಲರೂ ಗಿಡಮರಗಳನ್ನು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಸಲಹೆ ನೀಡಿದರು.
ನಾವು ಇಂದು ನೆಟ್ಟಂತಹ ಗಿಡಮರಗಳು ನಾಳೆ ನಮ್ಮ ಮಕ್ಕಳ ಭವಿಷ್ಯಕ್ಕೂ ಬರುತ್ತವೆ. ಒಂದು ಕುಟುಂಬಕ್ಕೆ ಕನಿಷ್ಠ ಎರಡು ಮಕ್ಕಳನ್ನು ಮಾಡಿಕೊಳ್ಳುವಂತೆ, ಪ್ರತಿಯೊಬ್ಬರು ಕನಿಷ್ಠ ಹತ್ತು ಮರಗಳನ್ನು ನೆಡುವ ಗುರಿಯನ್ನು ಇಟ್ಟುಕೊಂಡಾಗ ನಮ್ಮ ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಬಿಟ್ಟು ಹೋಗಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತೋವಿವಿ ಕುಲಪತಿ ಡಾ. ವಿಷ್ಣುವರ್ಧನ ಮಾತನಾಡಿ, ರೈತರಿಗೆ ಒಳ್ಳೆಯ ಬೀಜ, ಸಸ್ಯ ತಳಿಗಳು ಒಂದೆ ಕಡೆ ದೊರೆಯಲಿ ಎಂಬ ಸದ್ದುದ್ದೇಶದಿಂದ ತೋವಿವಿ ಪ್ರತಿ ವರ್ಷ ಜೂನ, ಜುಲೈ ಮಾಹೆಯಲ್ಲಿ ಸಸ್ಯ ಸಂತೆ ಆಯೋಜಿಸುತ್ತದೆ. ಇದರ ಸದುಪಯೋಗವನ್ನು ಎಲ್ಲ ರೈತ ಬಾಂಧವರು, ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ರೈತರು ಮುಂದುವರೆದ ವಿಜ್ಞಾನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕಬ್ಬನ್ನು ಅತೀ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದು ಮುಂದಿನ ದಿನಮಾನಗಳಲ್ಲಿ ಬೇರೆ ಪರಿಣಾಮ ಆಗಬಹುದು. ಆದ್ದರಿಂದ ರಾಸಾಯನಿಕ ಮುಕ್ತ ಕೃಷಿ ಗೆ ಒತ್ತು ನೀಡಿ. ಮಣ್ಣಿನ ಆರೋಗ್ಯ ಕಾಪಾಡಿ. ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವ್ಯಾಪ್ತಿ ರಾಜ್ಯದ ೨೫ ಜಿಲ್ಲೆಗಳಿಗೆ ವಿಸ್ತರಿಸಿದ್ದು, ಗ್ರಾಮೀಣ ಯುವ ರೈತರನ್ನು ಉದ್ಯಮಿಗಳನ್ನಾಗಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು.
ತೋವಿವಿ ಶಿಕ್ಷಣ ನಿರ್ದೇಶಕ ಡಾ.ತಮ್ಮಯ್ಯ, ಸಂಶೋಧನಾ ನಿರ್ದೆಶಕ ಡಾ. -Àಕ್ರುದ್ಧೀನ, ವಿಸ್ತರಣಾ ನಿರ್ದೇಶಕ ಡಾ. ವೆಂಕಟೇಶಲು ಮುಖ್ಯ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ವಸಂತ ಗಾಣಿಗೇರ, ಡಾ.ಸಂಜೀವ ರೆಡ್ಡಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net