ಕಾರ್ಮಿಕರ ಕಲ್ಯಾಣವೇ ಸಂಸ್ಥೆ ಗುರಿ

 ಲೋಕಾಪುರ ಸಮೀಪ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್ಸ್‌ ಮಿಲ್ ಲಿ. ಘಟಕ-2 ರನ್ನನಗರದಲ್ಲಿ ಗೀತಾಂಜಲಿ ತಾರಾ ಬಳಗದ ಪ್ರಾರಂಭಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಂಜುನಾಥ ಆರಳಿಕಟ್ಟಿ, ಮಾಧವ ಜೋಶಿ, ವಸುಂಧರಾ, ಸುಧಾರಾಣಿ ಇತರರಿದ್ದರು.
ಲೋಕಾಪುರ ಸಮೀಪ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್ಸ್‌ ಮಿಲ್ ಲಿ. ಘಟಕ-2 ರನ್ನನಗರದಲ್ಲಿ ಗೀತಾಂಜಲಿ ತಾರಾ ಬಳಗದ ಪ್ರಾರಂಭಿಕ ಸಭೆಯನ್ನು ಗಣ್ಯರು ಉದ್ಘಾಟಿಸಿದರು. ಮಂಜುನಾಥ ಆರಳಿಕಟ್ಟಿ, ಮಾಧವ ಜೋಶಿ, ವಸುಂಧರಾ, ಸುಧಾರಾಣಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವ್ಯವಸ್ಥಾಪಕಿ ವಸುಂಧರಾ ಹೇಳಿಕೆ
  • ಗೀತಾಂಜಲಿ ತಾರಾ ಬಳಗ ಪ್ರಾರಂಭ
  • ಗೀತಾಂಜಲಿ ತಾರಾಬಳಗ ಮಹಿಳಾ ಸಂಘ ಕಾರ್ಮಿಕರ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಬಲೀಕರಣಕ್ಕಾಗಿ ಕಾರ್ಯತಂತ್ರ ರೂಪಿಸುವ ಉದ್ದೇಶ ಹೊಂದಿದೆ.
ಲೋಕಾಪುರ : ಬೀಳಗಿ ಶುಗರ್ಸ್‌ನಲ್ಲಿ ಕೆಲಸ ಮಾಡುವ ನೌಕರರ ಪತ್ನಿಯರ ಸಾಮಾಜಿಕ, ಆರ್ಥಿಕ ಹಾಗೂ ಸರ್ವತೋಮುಖ ಸಬಲೀಕರಣಕ್ಕಾಗಿ ಸ್ಥಾಪಿತವಾದ ನೋಂದಾಯಿತ ಸಂಸ್ಥೆಯೇ ‘ಗೀತಾಂಜಲಿ ತಾರಾಬಳಗ ಮಹಿಳಾ ಸಂಘ’ ಎಂದು ಬಾಪೂಜಿ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸಂಸ್ಥೆ ವ್ಯವಸ್ಥಾಪಕಿ ವಸುಂಧರಾ ಹೇಳಿದರು.
ಸಮೀಪದ ತಿಮ್ಮಾಪುರ ಗ್ರಾಮದ ಬೀಳಗಿ ಶುಗರ್ಸ್‌ ಮಿಲ್ ಲಿ. ಘಟಕ-2 ರನ್ನನಗರದಲ್ಲಿ ಬುಧವಾರ ಗೀತಾಂಜಲಿ ತಾರಾಬಳಗ ಮಹಿಳಾ ಸಂಘದ ಪ್ರಾರಂಭಿಕ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕುಟುಂಬಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಬಲೀಕರಣಕ್ಕಾಗಿ ವಿಚಾರ ವಿನಿಮಯ, ಸಲಹೆ, ಸೂಚನೆಗಳು ಹಾಗೂ ಸಮಗ್ರ ಕಾರ್ಯತಂತ್ರ ರೂಪಿಸುವ ಉದ್ದೇಶ ಹೊಂದಿದೆ ಎಂದರು.
ಡಾ. ಮಾಧವ ಯದುನಾಥ ಜೋಶಿ ಮಾತನಾಡಿ, ಸಂಸ್ಥೆ ದೃಷ್ಟಿಕೋನ, ಕಾರ್ಯತಂತ್ರದ ಆದ್ಯತೆಗಳು, ವಾರ್ಷಿಕ ಕಾರ್ಯ ಯೋಜನೆಗಳು ಹಾಗೂ ಮುಂಬರುವ ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಚರ್ಚಿಸಿ ಸಮಗ್ರ ಕಾರ್ಯರೂಪ ರೂಪಿಸಲು ಸಂಸ್ಥೆ ಮುಂದಾಗಿದೆ ಎಂದು ಅಭಿಪ್ರಾಯಪಟ್ಟರು.
ಬಾಪೂಜಿ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸಂಸ್ಥೆ ವ್ಯವಸ್ಥಾಪಕಿ ಸುಧಾರಾಣಿ ಸಂಜೀವ ಮಾತನಾಡಿ, ಗೀತಾಂಜಲಿ ತಾರಾ ಬಳಗವನ್ನು ಮಹಿಳಾ ಸಬಲೀಕರಣ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಾದರಿ ಸಂಸ್ಥೆಯಾಗಿ ರೂಪಿಸಲು ನೆರವಾಗಲಿದೆ ಎಂದು ಹೇಳಿದರು.
ನಿರ್ದೇಶಕ ಮಂಜುನಾಥ ಅರಳಿಕಟ್ಟಿ, ಕಾರ್ಖಾನೆ ಮುಖ್ಯಸ್ಥ ಸಂಗಮೇಶ ಬೇವೂರ, ಉಮಾದೇವಿ ಪಾಟೀಲ, ಸುರೇಶಗೌಡ ಪಾಟೀಲ, ರಾಹುಲ ನಾಡಗೌಡ, ಅನುಷಾ ನಾಡಗೌಡ, ಎಚ್.ಎಲ್. ಪಾಟೀಲ ಶುಭ ಹಾರೈಸಿದರು.
ಗೀತಾಂಜಲಿ ತಾರಾ ಬಳಗದ ಅಧ್ಯಕ್ಷೆ ಮಂಜುಳಾ ಹಲಗತ್ತಿ, ಉಪಾಧ್ಯಕ್ಷೆ ಉಮಾದೇವಿ ಪಾಟೀಲ, ಕಾರ್ಮಿಕ ಕಲ್ಯಾಣಾಧಿಕಾರಿ ಪಾರ್ವತಿ ಚಿನವಾಲರ, ಮಹಾಂತೇಶ ಹೂಗಾರ, ಸಂಗಮೇಶ ಕೂಡ್ಲಿ, ಗೋವಿಂದ ಚಟಾನಿ, ರವಿ ಹಲಗತ್ತಿ, ಬಸವರಾಜ ಹುಣಶಿಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net