ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ತಾಯಿ ಪಾತ್ರ ಮಹತ್ವ

ಮಹಾಲಿಂಗಪುರದಲ್ಲಿ ವಿದ್ಯಾಶ್ರೀ ಸ್ವಸಹಾಯ ಸಂಘದ ವತಿಯಿಂದ ಜರುಗಿದ ಮಾತೃವಂದನಾ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ದಯಾನಂದ ಆಚಾರ್ಯ, ಸಂಗಪ್ಪ ಜಮಖಂಡಿ, ಗಿರಿಮಲ್ಲಪ್ಪ ಯರಗಟ್ಟಿ, ಚಂದ್ರು ಯರಗಟ್ಟಿ ಇತರರಿದ್ದರು.
ಮಹಾಲಿಂಗಪುರದಲ್ಲಿ ವಿದ್ಯಾಶ್ರೀ ಸ್ವಸಹಾಯ ಸಂಘದ ವತಿಯಿಂದ ಜರುಗಿದ ಮಾತೃವಂದನಾ ಕಾರ್ಯಕ್ರಮದಲ್ಲಿ ನೂರಾರು ಮಕ್ಕಳು ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ದಯಾನಂದ ಆಚಾರ್ಯ, ಸಂಗಪ್ಪ ಜಮಖಂಡಿ, ಗಿರಿಮಲ್ಲಪ್ಪ ಯರಗಟ್ಟಿ, ಚಂದ್ರು ಯರಗಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಅಭಿಮತ
  • ಮಾತೃವಂದನಾ ಆಯೋಜನೆ
ಮಹಾಲಿಂಗಪುರ: ಅಮ್ಮ ಎಂದರೆ ಕೇವಲ ಜನ್ಮ ನೀಡಿದವಳಲ್ಲ. ಬದುಕಿಗೆ ಭದ್ರ ಬುನಾದಿ ಹಾಕುವ ಮಹಾನ್ ಶಕ್ತಿ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಸಂಪನ್ಮೂಲ ವ್ಯಕ್ತಿ ನಾರನಗೌಡ ಉತ್ತಂಗಿ ಹೇಳಿದರು.
ಸ್ಥಳೀಯ ಕುಬಸದ ಗಲ್ಲಿಯಲ್ಲಿ ವಿದ್ಯಾಶ್ರೀ ಸ್ವಸಹಾಯ ಸಂಘದ ವತಿಯಿಂದ ತಾಯಂದಿರ ದಿನಾಚರಣೆ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಮಾತೃವಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳ ಯಶಸ್ಸಿನ ಹಿಂದೆ ತಾಯಿಯ ತ್ಯಾಗ ಹಾಗೂ ಶ್ರಮ ಅಡಗಿದೆ ಎಂದರು. ಮಹಿಳೆಯರು ಮಕ್ಕಳಿಗೆ ಸಂಸ್ಕಾರ ಕಲಿಸಿ ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು.
ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗದೆ ಮೊಬೈಲ್, ಟಿವಿಗಳಿಂದ ದೂರವಿದ್ದು ಮಕ್ಕಳಿಗೆ ಮಾದರಿಯಾಗಿ ಮಕ್ಕಳಲ್ಲಿ ದೇಶಾಭಿಮಾನದ ಜತೆ ಧರ್ಮಾಭಿಮಾನ ಬೆಳೆಯುವಂತೆ ಮಾಡಬೇಕು. ನಿತ್ಯವೂ ಮನೆಯಲ್ಲಿ ಭಗವಂತನ ನಾಮಸ್ಮರಣೆ ಮಾಡುವುದರೊಂದಿಗೆ ಮಕ್ಕಳೂ ನಾಮಸ್ಮರಣೆಯಲ್ಲಿ ತೊಡಗುವಂತೆ ಮಾಡಬೇಕು. ಭಗವಂತನ ನಾಮಸ್ಮರಣೆಯಿಂದ ದೂರವಾಗಿ ಹಿಂದೂಗಳು ದುರ್ಬಲರಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.
ಜೆಸಿ ಆಂಗ್ಲ ಮಾಧ್ಯಮ ಶಾಲೆ ಉಪಾಧ್ಯಕ್ಷ ಶಿವಾನಂದ ತಿಪ್ಪಾ ಮಾತನಾಡಿ, ನೋವು ನುಂಗಿ ನಗುವ ನೀಡುವ ಕಣ್ಣಿಗೆ ಕಾಣುವ ದೇವರು ತಾಯಿ. ಇಂತಹ ಕಾರ್ಯಕ್ರಮ ಆಯೋಜಿಸಿ ಮಕ್ಕಳಲ್ಲಿ ಮಾತೃಪೂಜ್ಯ ಭಾವನೆಯ ಸಂಸ್ಕಾರ ಕಲಿಸುವ ಶ್ರೇಷ್ಠ ಕಾರ್ಯ ಕುಬಸದ ಗಲ್ಲಿಯಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಗಣ್ಯರಾದ ಸಂಗಪ್ಪ ಜಮಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾಳಿಕಾದೇವಿ ಮಂದಿರದ ಅರ್ಚಕ ದಯಾನಂದ ಆಚಾರ್ಯ ಅವರ ಮಾರ್ಗದರ್ಶನದಲ್ಲಿ ನೂರಾರು ಮಕ್ಕಳು ತಾಯಂದಿರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. ತಾಯಂದಿರು ಹೃದಯ ತುಂಬಿ ಮಕ್ಕಳನ್ನು ಹರಿಸಿದರು.
ಮುಖಂಡರಾದ ಗಿರಿಮಲ್ಲಪ್ಪ ಯರಗಟ್ಟಿ, ಚಂದ್ರು ಯರಗಟ್ಟಿ, ಶಂಕ್ರೆವ್ವ ಹನಗಂಡಿ, ಕಲ್ಲವ ಗಲಗಲಿ, ಸಿದ್ದು ಹಾವನಳ್ಳಿ, ಮಲ್ಲಪ್ಪ ಹುಣಶ್ಯಾಳ, ಚೈತ್ರಾ ಯರಗಟ್ಟಿ, ಶೃತಿ ಯರಗಟ್ಟಿ, ಅನುಪಮಾ ಗಲಗಲಿ, ಅಶ್ವಿನಿ ಗಲಗಲಿ, ಭಾರತಿ ನಡಕಟ್ನಿ, ದಾಕ್ಷಾಯಿಣಿ ನಡಕಟ್ನಿ, ದಾನಮ್ಮ ಹುಣಶ್ಯಾಳ ಸೇರಿ ಅನೇಕರು ಭಾಗವಹಿಸಿದ್ದರು. ಶಿಕ್ಷಕ ಸಿ.ವಿ.ಹುಣಶ್ಯಾಳ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net