ಕಾಂಗ್ರೆಸ್ ಪತನವೇ ದಲಿತರ ಗುರಿ..!

ಬಾಗಲಕೋಟೆ ತಾಲೂಕಿನ ನೀರಲಕೇರೆ ತಾಂಡಾದಲ್ಲಿ ಗುರುವಾರ ಕುಡಚಿ ಮಾಜಿ ಶಾಸಕ ಪಿ.ರಾಜೀವ ಮತಯಾಚನೆ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ವಿ.ಪ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ರಂಗನಗನಗೌಡ ಗೌಡರ, ಬಲರಾಮ ನಾಯಕ್, ನಾಗರಾಜ ಪೂಜಾರಿ, ಸಂತೋಷ ಲಮಾಣಿ ಇತರರು ಇದ್ದರು.
ಬಾಗಲಕೋಟೆ ತಾಲೂಕಿನ ನೀರಲಕೇರೆ ತಾಂಡಾದಲ್ಲಿ ಗುರುವಾರ ಕುಡಚಿ ಮಾಜಿ ಶಾಸಕ ಪಿ.ರಾಜೀವ ಮತಯಾಚನೆ ಮಾತನಾಡಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ವಿ.ಪ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ರಂಗನಗನಗೌಡ ಗೌಡರ, ಬಲರಾಮ ನಾಯಕ್, ನಾಗರಾಜ ಪೂಜಾರಿ, ಸಂತೋಷ ಲಮಾಣಿ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಡಚಿ ಮಾಜಿ ಶಾಸಕ ಪಿ. ರಾಜೀವ ಹೇಳಿಕೆ
  • ನೀಲಾನಗರದಲ್ಲಿ ಭರ್ಜರಿ ಪ್ರಚಾರ
  • ಬಂಜಾರಾ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ಮೋಸ ಮತ್ತು ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅರ್ಥವಾಗಿವೆ
ಬಾಗಲಕೋಟೆ: ಬಂಜಾರಾ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ಮೋಸ ಮತ್ತು ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅರ್ಥವಾಗಿವೆ. ಮುಂದಿನ ಭವಿಷ್ಯಕ್ಕಾಗಿ ಎಸ್.ಸಿ., ಎಸ್.ಟಿ., ಪಂಗಡಗಳಿಗೆ ಬಹುದೊಡ್ಡ ಪೆಟ್ಟು ಕೊಟ್ಟ ಕಾಂಗ್ರೆಸ್ ಸೋಲಿಸಿ ಬಿಜೆಪಿಯನ್ನು 30 ಸಾವಿರಗಳ ಅಂತರದಲ್ಲಿ ಗೆಲ್ಲಸಲಿದ್ದಾರೆ ಎಂದು ಕುಡಚಿ ಮಾಜಿ ಶಾಸಕ ಪಿ. ರಾಜೀವ ಹೇಳಿದರು.
ಉಪಚುನಾವಣೆ ಹಿನ್ನೆಲೆ ನೀರಲಕೇರೆ ತಾಂಡಾದಲ್ಲಿ ಗುರುವಾರ ಮತಯಾಚನೆ ಮಾತನಾಡಿದ ಅವರು, ಈ ಚುನಾವಣೆಯು ನಮ್ಮ ಸಮಾಜದ ಭವಿಷ್ಯದ ಚುನಾವಣೆಯಾಗಿದ್ದು, ಬಿಜೆಪಿ ಗೆಲ್ಲಿಸಿ ಕಾಂಗ್ರೆಸ್ ಸರ್ಕಾರಕ್ಕೆ ಸಮಾಜದ ಶಕ್ತಿಯನ್ನು ತೋರಿಸಬೇಕಿದೆ ಎಂದರು.
ದಲಿತರಿಗಾಗಿ ಬಿಜೆಪಿ ಹೆಚ್ಚಿಸಿದ ಮೀಸಲಾತಿ ಕಾಂಗ್ರೆಸ್ ಮತ್ತೆ ರದ್ದುಮಾಡಿ ಮೋಸ ಮಾಡಿದೆ. ನ್ಯಾಯಾಲಯದಲ್ಲಿ ಮೀಸಲಾತಿ ಬಗ್ಗೆ ಸೂಕ್ತ ವಾದಮಾಡುವಲ್ಲಿ ಸರ್ಕಾರ ವಿಲವಾಗಿದೆ. ಇದು ಬಂಜಾರಾ ಸಮುದಾಯಕ್ಕೆ ಕೊಟ್ಟ ದೊಡ್ಡ ಕೊಡಲಿ ಏಟು. ಬಾಗಲಕೋಟೆಯಲ್ಲಿ ಒಂದೇ ಒಂದು ಕಾಮಗಾರಿಯಾಗಿಲ್ಲ. ಚರಂತಿಮಠ ಅವರ ಆಡಳಿತಾವಧಿಯಲ್ಲಿ ಜಾರಿಯಾದ ಯೋಜನೆಗಳು ಇಂದಿಗೂ ಮುಂದುವರಿದಿವೆ. ಹೀಗಾಗಿ ವೀರಣ್ಣ ಚರಂತಿಮಠ ಅವರನ್ನು ಗೆಲ್ಲಿಸಬೇಕು ಎಂದು ತಿಳಿಸಿದರು.
ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಮಾತನಾಡಿ, ಬಿಜೆಪಿಯು ಹಿಂದೂ ಪರ ಸರ್ಕಾರವಾಗಿದೆ. ನಿಮಗೆ ಅನ್ಯಾಯವಾದರೆ ನಿಮ್ಮ ಜೊತೆಗೆ ನಾವಿರುತ್ತೇವೆ ಹೊರತು ಕೇವಲ ಪ್ರಚಾರಕ್ಕೆ ಬರುವ ಸಿದ್ದರಾಮಯ್ಯ ಅಲ್ಲ. ಅವರ ಅಪಪ್ರಚಾರದಿಂದ ದಲಿತ ಸಮುದಾಯದ ದಾರಿ ತಪ್ಪಿಸುತ್ತಿದ್ದಾರೆ. ಉಪ ಚುನಾವಣೆ ಮುಗಿದ ನಂತರ ಕುರ್ಚಿ ಜಗಳದಿಂದಲೇ ಕಾಂಗ್ರೆಸ್ ಪತನವಾಗಲಿದೆ. ಆ ಪಕ್ಷದಲ್ಲಿ ನೀತಿಯೂ ಇಲ್ಲ ನೇತಾರನೂ ಇಲ್ಲ. ಶಿರೂರು, ಭಗವತಿಗೆ ನೀರಾವರಿ ಯೋಜನೆ ಸೇರಿ ಅನೇಕ ಅಭಿವೃದ್ಧಿ ಕಾರ್ಯ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದಿವೆ ಎಂದು ತಿಳಿಸಿದರು.
ವೈದ್ಯರಾದ ಕಾಶಿನಾಥ ಪೂಜಾರಿ, ರಮೇಶ ಕಟ್ಟಿಮಣಿ, ಡಾ. ಅವಿನಾಶ್ ಕಟ್ಟಿಮಣಿ, ಆನಂದ ಕಟ್ಟಿಮನಿ, ಪುಂಡಲೀಕ ಕಟ್ಟಿಮಣಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು. ವಿ.ಪ ಮಾಜಿ ಸದಸ್ಯ ಎಂ.ಡಿ. ಲಕ್ಷ್ಮೀ ನಾರಾಯಣ, ಜಿ.ಪಂ. ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ, ರಂಗನಗನಗೌಡ ಗೌಡರ, ಬಲರಾಮ ನಾಯಕ್, ನಾಗರಾಜ ಪೂಜಾರಿ, ಸಂತೋಷ ಲಮಾಣಿ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net