ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳವಣಿಗೆ ಅಗತ್ಯ

 ಬಾಗಲಕೋಟೆ ನಗರದ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಸಿಬಿಎಸ್‌ಇ  ಶಾಲೆಯ ಎರಡು ದಿನಗಳ ವಾರ್ಷಿಕೋತ್ಸವ ಸ್ಪಾಟ್‌ಲೈಟ್ ಕಾರ್ಯಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಚಾಲನೆ ನೀಡಿದರು. ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅಧ್ಯಕ್ಷತೆ ವಹಿಸಿದ್ದರು.  ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಪ್ರಾಂಶುಪಾಲ ಸಿ.ಬಿ ಸುರೇಶ್ ಹೆಗ್ಡೆ, ಉಪಪ್ರಾಂಶುಪಾಲ ಮಂಗಳಗೌರಿ ಹೆಗ್ಡೆ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಬಿಪ್ಸ್ ಶಾಲೆಯ ಎರಡು ದಿನಗಳ ವಾರ್ಷಿಕೋತ್ಸವ
  • ಎಸ್ಪಿ ಸಿದ್ಧಾರ್ಥ ಗೋಯಲ್ ಹೇಳಿಕೆ
  • ವಾರ್ಷಿಕೋತ್ಸವ ಸ್ಪಾಟ್‌ಲೈಟ್ ಕಾರ್ಯಕ್ರಮ
ಬಾಗಲಕೋಟೆ: ಭವ್ಯ ಭಾರತದ ನಿರ್ಮಾಣಕ್ಕೆ ವಿದ್ಯಾರ್ಥಿಗಳನ್ನ ಉತ್ತಮ ಪ್ರಜೆಗಳನ್ನಾಗಿ ನಿರ್ಮಿಸುವ ಕರ್ತವ್ಯ ಶಾಲೆಗಳ ಮೇಲಿದೆ. ಮಕ್ಕಳು ಸ್ವತಂತ್ರವಾಗಿ ಆಲೋಚನೆ ಮಾಡುವ ಸಾಮರ್ಥ್ಯ ಹೊಂದಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಹೇಳಿದರು.
ಇಲ್ಲಿನ ಬಿವಿವಿ ಸಂಘದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ ನೂತನ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಸವೇಶ್ವರ ಸಿಬಿಎಸ್‌ಇ ಶಾಲೆಯ ಎರಡು ದಿನಗಳ ವಾರ್ಷಿಕೋತ್ಸವ ಸ್ಪಾಟ್‌ಲೈಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭವಿಷ್ಯದ ಭವ್ಯ ಭಾರತದ ನಿರ್ಮಾಣಕ್ಕೆ ಮಕ್ಕಳನ್ನು ತಯಾರಿಸುವುದು ಪ್ರತಿಯೊಂದು ಶಾಲೆಯ ಆದ್ಯ ಕರ್ತವ್ಯವಾಗಿದೆ. ಈ ಕಾರ್ಯ ಸಾಧನೆಯಲ್ಲಿ ಪಾಲಕರ ಸಹಕಾರ ಅತ್ಯಗತ್ಯ. ಅದಕ್ಕಾಗಿ ಪಾಲಕರು ಶಾಲೆಯೊಂದಿಗೆ ಕೈಜೋಡಿಸಿದಾಗ ಮಾತ್ರ ಮಕ್ಕಳ ಸವಾರ್ಂಗೀಣ ಪ್ರಗತಿಯಾಗಲು ಸಾಧ್ಯ ಎಂದರು.
ಬಾಗಲಕೋಟೆ ಯುಕೆಪಿ ಉಪಮುಖ್ಯಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಮಕ್ಕಳು ಕಲಿಕೆಯ ಜತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವಾರ್ಷಿಕೋತ್ಸವ ಅತ್ಯುತ್ತಮ ವೇದಿಕೆಯಾಗಿದೆ. ಬಿಪ್ಸ್ ಶಾಲೆಯ ಭವ್ಯ ವಾರ್ಷಿಕೋತ್ಸವದ ಅಚ್ಚುಕಟ್ಟುತನ ನನಗೆ ನಿಜಕ್ಕೂ ಸಂತೋಷ ಉಂಟು ಮಾಡುತ್ತದೆ ಎಂದು ತಿಳಿಸಿದರು.
ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಪ್ರಾಂಶುಪಾಲ ಸಿ.ಬಿ ಸುರೇಶ್ ಹೆಗ್ಡೆ, ಉಪಪ್ರಾಂಶುಪಾಲ ಮಂಗಳಗೌರಿ ಹೆಗ್ಡೆ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆ

ಕ್ರೀಡೆ, ಶೈಕ್ಷಣಿಕ ವಿಷಯದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಎರಡು ದಿನಗಳ ಕಾರ್ಯಕ್ರಮದಲ್ಲಿ ಶಿವನ ದ್ವಾದಶ ಜ್ಯೋತಿಲಿರ್ಂಗಗಳ ದರ್ಶನದ ನೃತ್ಯ, ಬಸವಣ್ಣನವರ ಮಹಾಮನೆಯ ನಾಟಕ, ಶಿವಾಜಿ ಮಹಾರಾಜರ ನೃತ್ಯ ರೂಪಕ, ಮಹಾಭಾರತ ಆಧಾರಿತ ಮೈಮ್ ಶೋ, ದಸರಾ ದರ್ಬಾರ್ ವೈಭವದ ನೃತ್ಯ ರೂಪಕ, ಶ್ರೀಕೃಷ್ಣ ಪರಮಾತ್ಮನ ಲೀಲೆ ಹಾಗೂ ಭಗವದ್ಗೀತೆ ಆಧಾರಿತ ನೃತ್ಯ ರೂಪಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net