ಸಹಕಾರ ಚಳವಳಿ ಹುಟ್ಟಿದ್ದೇ ಕರ್ನಾಟಕದಲ್ಲಿ

ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಪಿಕೆಪಿಎಸ್‌ನ ನೂತನ ಕಟ್ಟಡವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಸುನಂದಮ್ಮ ತಾಯಿ, ಬಿ.ಎಸ್. ಸಿಂಧೂರ, ರಾಮಪ್ಪ ಕಣಬೂರ ಇತರರಿದ್ದರು.
ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಪಿಕೆಪಿಎಸ್‌ನ ನೂತನ ಕಟ್ಟಡವನ್ನು ಶಾಸಕ ನಾಡೋಜ ಜಗದೀಶ ಗುಡಗುಂಟಿ ಉದ್ಘಾಟಿಸಿದರು. ಸುನಂದಮ್ಮ ತಾಯಿ, ಬಿ.ಎಸ್. ಸಿಂಧೂರ, ರಾಮಪ್ಪ ಕಣಬೂರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ನಾಡೋಜ ಜಗದೀಶ ಗುಡಗುಂಟಿ ಅಭಿಮತ
  • ಶೂರ್ಪಾಲಿ ಪಿಕೆಪಿಎಸ್ ಮುಖ್ಯ ಕಚೇರಿ ನೂತನ ಕಟ್ಟಡ ಉದ್ಘಾಟನೆ
ಜಮಖಂಡಿ: ರೈತರು ಆರ್ಥಿಕವಾಗಿ ಸಬಲರಾಗಲು ಮತ್ತು ಅವರ ಜೀವನಮಟ್ಟ ಅಭಿವೃದ್ಧಿ ಹೊಂದಲು ಸಹಕಾರಿ ಸಂಘಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ತಾಲೂಕಿನ ಶೂರ್ಪಾಲಿ ಗ್ರಾಮದ ಪುನರ್ವಸತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಚೇರಿ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಸಹಕಾರ ಚಳವಳಿ ಹುಟ್ಟಿದ್ದೇ ಕರ್ನಾಟಕದಲ್ಲಿ. ಆದರೆ, ಮಹಾರಾಷ್ಟçದಲ್ಲಿ ಈ ರಂಗ ದೊಡ್ಡ ಕ್ರಾಂತಿಯನ್ನೇ ಮಾಡಿದೆ. ರೈತರು ತಾವು ಬೆಳೆದ ಬೆಳೆಗಳಿಗೆ ಮೌಲ್ಯವರ್ಧನೆ ಮಾಡಿ, ಉತ್ತಮ ಬೆಲೆ ಪಡೆದುಕೊಳ್ಳಲು ಸಹಕಾರಿ ಸಂಘಗಳು ಸಹಕಾರಿಯಾಗಲಿವೆ. ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಪೂರಕವಾಗಿವೆ. ಗ್ರಾಮೀಣ ಪ್ರದೇಶದಲ್ಲಿ ಇಂತಹ ಸುಸಜ್ಜಿತ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರಂಗ ಮಠದ ಸುನಂದಮ್ಮ ತಾಯಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಬಿ.ಕೆ. ಗಲಗಲಿ ದಂಪತಿ ಮಾತನಾಡಿದರು.
ಪಂಚಯ್ಯಾ ಗುರುಪಾದಯ್ಯ ಹಿರೇಮಠ, ಬಸಯ್ಯ ಗುರುಲಿಂಗಯ್ಯಾ ಮಠದ, ಈರಯ್ಯಾ ಪಂಚಯ್ಯಾ ಹಿರೇಮಠ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ರಾಮಪ್ಪ ಕಣಬೂರ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಪಿಕೆಪಿಎಸ್ ಸಂಘಗಳ ಅಧ್ಯಕ್ಷರನ್ನು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿ.ಎಸ್. ಸಿಂಧೂರ, ಶಂಕರ ಬಾಲಪ್ಪನವರ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ, ಸುಶೀಲಕುಮಾರ ಬೆಳಗಲಿ, ರವಿ ಐಗಳಿ, ಸಂತೋಷ ಬಾಡಗಿ, ರಾಜಶೇಖರ ಟೊಪಗಿ, ಅಶ್ವಿನಿ ರುದ್ರಗೌಡ, ಅನೀಲ ಕುಂಚನೂರ, ಶಿವಗೊಂಡ ದಳವಾಯಿ, ಮಹಾಲಿಂಗಪ್ಪ ಕುಂಚನೂರ, ಗಿರಮಲ್ಲ ಅರಕೇರಿ, ಅಪ್ಪಾಸಾಬ ಬಾಲಪ್ಪನವರ, ನೀಲವ್ವ ಮಂಗೊಂಡ, ಮಹಾಬೂಬಿ ಶೇಖ, ಪರಶುರಾಮ ಶಿಂಗೆ, ಲಕ್ಕಪ್ಪ ದಳವಾಯಿ, ಮುಖ್ಯಕಾರ್ಯನಿರ್ವಾಹಕ ದುಂಡಪ್ಪ ಕುಂಚನೂರ ಇತರರಿದ್ದರು.
ಪ್ರಶಾಂತ ಕಲಬುರ್ಗಿ ರೈತ ಗೀತೆ ಹಾಡಿದರು. ಆನಂದ ದುಪದಾಳ ಸ್ವಾಗತಿಸಿದರು. ಚನಗಿರಿ ಹೊಸೂರ ನಿರೂಪಿಸಿದರು. ಸದಾಶಿವ ಕುಂಬಾರ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net