ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯ ಅವರೇ ಯಾವ ಸಾಧನೆಗಾಗಿ ಜನರ ಬಳಿ ನೀವು ಮತ ಕೇಳುತ್ತೀರಿ? ಈ ರಾಜ್ಯದಲ್ಲಿ ಎಲ್ಲ ಮುಖ್ಯಮಂತ್ರಿಗಳಿAದ ಅಽಕ ಸಾಲ ಮಾಡಿದ ಸಿಎಂ ನಾನು ಎಂದು ಹೇಳಿಕೊಂಡು ಕೇಳುತ್ತೀರಾ? ಈ ರಾಜ್ಯದಲ್ಲಿ ಮುಂದೆ ಹುಟ್ಟಲಿರುವ ಮಕ್ಕಳ ತಲೆ ಮೇಲೂ ೧.೫ ಲಕ್ಷ ರೂ. ಸಾಲದ ಹೊರೆ ಮಾಡಿಟ್ಟಿದ್ದೇನೆ ಎಂದು ಧೈರ್ಯದಿಂದ ಹೇಳಿಕೊಂಡು ಮತಯಾಚನೆ ಮಾಡುತ್ತೀರಾ ಎಂದು ಪ್ರಶ್ನಿಸಿದರು.