ಬೋರವೆಲ್ ಉದ್ಯಮಕ್ಕೂ ಯುದ್ಧದ ಬಿಸಿ

ರಬಕವಿ/ಬನಹಟ್ಟಿಯ ಜಗದಾಳ ಗ್ರಾಮದ ರೈತ ಪಂಡಿತಪ್ಪ ಎಲಿತೋಟ ಅವರ ಜಮೀನಿನಲ್ಲಿ ಬೋರವೆಲ್ ಕೊರೆಯುತ್ತಿರುವ ದಶ್ಯ.
ರಬಕವಿ/ಬನಹಟ್ಟಿಯ ಜಗದಾಳ ಗ್ರಾಮದ ರೈತ ಪಂಡಿತಪ್ಪ ಎಲಿತೋಟ ಅವರ ಜಮೀನಿನಲ್ಲಿ ಬೋರವೆಲ್ ಕೊರೆಯುತ್ತಿರುವ ದಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ರೈತರಿಗೆ ಹೆಚ್ಚಿದ ಹೊರೆ
  • ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ
  • ಡೀಸೆಲ್ ದರ ಏರಿಕೆ ಹಾಗೂ ಬೋರವೆಲ್ ಉಪಕರಣಗಳ ಬೆಲೆ ಹೆಚ್ಚಳ
ರಬಕವಿ/ಬನಹಟ್ಟಿ: ಇರಾನ್-ಇಸ್ರೇಲ್ ನಡುವಿನ ಯುದ್ಧದ ಪರಿಣಾಮ ಸ್ಥಳೀಯ ಮಟ್ಟದಲ್ಲೂ ಕಾಣಿಸಿಕೊಳ್ಳುತ್ತಿದ್ದು, ಬೋರವೆಲ್ ಉದ್ಯಮಕ್ಕೂ ದೊಡ್ಡ ಹೊಡೆತ ನೀಡಿದೆ. ಡೀಸೆಲ್ ದರ ಏರಿಕೆ ಹಾಗೂ ಬೋರವೆಲ್ ಉಪಕರಣಗಳ ಬೆಲೆ ಹೆಚ್ಚಳದಿಂದಾಗಿ ಬೋರವೆಲ್ ಕೊರೆಯುವ ವೆಚ್ಚದಲ್ಲಿ ಗಮನಾರ್ಹ ಏರಿಕೆಯಾಗಿದೆ.
ಹಿಂದೆ ಪ್ರತಿ ಅಡಿಗೆ 90ರಿಂದ 100 ರೂ.ಗಳಿಗೆ ಮಾಡುತ್ತಿದ್ದ ಬೋರವೆಲ್ ಕೊರೆಯುವಿಕೆ ಇದೀಗ 130ರಿಂದ150 ರೂ.ರವರೆಗೆ ಏರಿಕೆಯಾಗಿದೆ. ಬೋರವೆಲ್ ಕಾರ್ಯದಲ್ಲಿ ಬಳಸುವ ಬಿಟ್ ದರವು 25ರಿಂದ 75 ಸಾವಿರ ರೂ.ವರೆಗೆ ಏರಿಕೆ ಕಂಡಿದ್ದು, ಹ್ಯಾಮರ್ ಸೇರಿ ಇತರೆ ಬಿಡಿಭಾಗಗಳ ಕೊರತೆ ಉಂಟಾಗಿದೆ.
ಸರಕು ಪೂರೈಕೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆ ಹಲವು ಬೋರವೆಲ್ ಲಾರಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಇದರ ಪರಿಣಾಮವಾಗಿ ಹೊಸ ಬೋರವೆಲ್ ಕೊರೆಯುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ತಾಲೂಕಿನಾದ್ಯಂತ ರೈತರು ನೀರಾವರಿ ಅಗತ್ಯಕ್ಕಾಗಿ ಬೋರವೆಲ್‌ಗಳ ಮೇಲೆ ಅವಲಂಬಿತರಾಗಿದ್ದು, ಈಗಿನ ಬೆಲೆ ಏರಿಕೆ ಅವರ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡ ತಂದಿದೆ.
"

ಕಷಿಗೆ ಕೊಳವೆಬಾವಿ ಅತ್ಯಗತ್ಯ. ಆದರೆ ಹೆಚ್ಚಿದ ವೆಚ್ಚದಿಂದ ಬೋರವೆಲ್ ಮಾಡಿಸುವುದು ಕಷ್ಟವಾಗಿದೆ. ಸರ್ಕಾರ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.
-ತುಕಾರಾಮ ಕಾಂಬಳೆ, ಬನಹಟ್ಟಿಯ ರೈತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net