ನಾಳೆ ಅಭಿನಂದಾನ ಗ್ರಂಥ ಬಿಡುಗಡೆ

ಗುಳೇದಗುಡ್ಡದಲ್ಲಿ ರಂಗಪ್ಪ ಶೇಬಿನಕಟ್ಟಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ರವೀಂದ್ರ ಪಟ್ಟಣಶೆಟ್ಟಿ, ಡಾ.ವಿ.ಎ.ಬೆನಕನಾಳ, ಪ್ರೊ.ಎನ್.ಬಿ.ಚಿತ್ರಗಾರ, ಸಂಗಣ್ಣ ಹುನಗುಂದ, ಅಶೋಕ ಹೆಗಡೆ, ಪ್ರಕಾಶ ಶೇಬಿನಕಟ್ಟಿ ಇದ್ದರು.
ಗುಳೇದಗುಡ್ಡದಲ್ಲಿ ರಂಗಪ್ಪ ಶೇಬಿನಕಟ್ಟಿ ಅಭಿನಂದನಾ ಸಮಿತಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಶೇಖರ ಶೀಲವಂತ ಮಾತನಾಡಿದರು. ರವೀಂದ್ರ ಪಟ್ಟಣಶೆಟ್ಟಿ, ಡಾ.ವಿ.ಎ.ಬೆನಕನಾಳ, ಪ್ರೊ.ಎನ್.ಬಿ.ಚಿತ್ರಗಾರ, ಸಂಗಣ್ಣ ಹುನಗುಂದ, ಅಶೋಕ ಹೆಗಡೆ, ಪ್ರಕಾಶ ಶೇಬಿನಕಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿಕೆ
  • ಶಿವಕೃಪಾ ರಂಗ ಮಂದಿರದಲ್ಲಿ ಕಾರ್ಯಕ್ರಮ
ಗುಳೇದಗುಡ್ಡ: ಪಟ್ಟಣದ ಹಿರಿಯ ಸ್ವಯಂಸೇವಕ ರಂಗಪ್ಪ ಶೇಬಿನಕಟ್ಟಿ ಅವರ ಅಭಿನಂದನಾ ಸಮಿತಿ ವತಿಯಿಂದ ನೋವುಂಡು ನಲಿದವರು ಎಂಬ ಅಭಿನಂದಾನ ಗ್ರಂಥ ಬಿಡುಗಡೆ ಕಾರ್ಯಕ್ರಮ ಮೇ 5ರಂದು ಬೆಳಗ್ಗೆ 10.30ಕ್ಕೆ ಪಟ್ಟಣದ ಶಿವಕೃಪಾ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ರಾಜಶೇಖರ ಶೀಲವಂತ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ತಳಮಟ್ಟದ ಕಾರ್ಯಕರ್ತರಾಗಿ, ಸಮಾಜ ಸೇವಕರಾಗಿ ಸಮಾಜಕ್ಕೆ ಸಾಕಷ್ಟು ಕೊಡುಗೆ ನೀಡಿ, 84 ವಸಂತಗಳನ್ನು ಪೂರೈಸಿದ ರಂಗಪ್ಪ ಶೇಬಿನಕಟ್ಟಿ ಅವರ ಅಭಿಮಾನಿಗಳಿಂದ ಅಭಿನಂದನಾ ಹಾಗೂ ಸಹಸ್ರ ಚಂದ್ರದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಹಂಪಿ ಹೇಮಕೂಟ ಗಾಯತ್ರಿ ಪೀಠದ ಜ.ಶ್ರೀ. ದಯಾನಂದಪುರಿ ಸ್ವಾಮೀಜಿ, ಸ್ಥಳೀಯ ಗುರುಸಿದ್ಧೇಶ್ವರ ಮಠದ. ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಗದ್ದನಕೇರಿಯ ಮಳೆರಾಜೇಂದ್ರಮಠದ ಭಾಸ್ಕರ ಸ್ವಾಮೀಜಿ, ದೇವಾಂಗಮಠದ ರಾಘವೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಸಂಸದ ಪಿ.ಸಿ.ಗದ್ದಿಗೌಡರ ಅಧ್ಯಕ್ಷತೆ ವಹಿಸುವರು. ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ ಶೆಟ್ಟರ್, ಕರ್ನಾಟಕ ದೇವಾಂಗ ಸಂಘದ ಅಧ್ಯಕ್ಷ ರವೀಂದ್ರ ಕಲ್ಬುರ್ಗಿ ಭಾಗವಹಿಸುವರು.
ಭಾರತೀಯ ಶಿಕ್ಷಣ ಮಂಡಳಿಯ ಅಖಿಲ ಭಾರತೀಯ ಸಂಘಟನಾ ಮಂತ್ರಿ ಶಂಕರಾನಂದಜಿ ಮುಖ್ಯ ವಕ್ತಾರರಾಗಿ ಭಾಗವಹಿಸುವರು. ಸಾಹಿತಿಗಳಾದ ಡಾ.ವಿ.ಎ.ಬೆನಕನಾಳ, ಎಸ್.ವಿ. ಚೌಡಾಪುರ ಉಪಸ್ಥಿತರಿರುವರು.
ಡಾ.ವಿ.ಎ.ಬೆನಕನಾಳ ಅವರ ರಾಷ್ಟ್ರ ನೇತಾರ ಅಟಲ್ ಬಿಹಾರಿ ವಾಜಪೇಯಿ, ಎಸ್.ವಿ. ಚೌಡಾಪುರ ಅವರ ದೇವರ ದಾಸಿಮಯ್ಯನವರ ಆಯ್ದ 50 ವಚನಗಳು ಇಂಗ್ಲಿಷ್ ಆವೃತ್ತಿ ಕೃತಿಗಳು ಬಿಡುಗಡೆ ಗೊಳ್ಳಲಿವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರವೀಂದ್ರ ಪಟ್ಟಣಶೆಟ್ಟಿ, ಡಾ.ವಿ.ಎ.ಬೆನಕನಾಳ, ಪ್ರೊ.ಎನ್.ಬಿ.ಚಿತ್ರಗಾರ, ಸಂಗಣ್ಣ ಹುನಗುಂದ, ಅಶೋಕ ಹೆಗಡೆ, ಪ್ರಕಾಶ ಶೇಬಿನಕಟ್ಟಿ, ವಿಠ್ಠಲ ಪತ್ತಾರ, ಉಮೇಶ ಜಾಲಿಗಿಡದ, ರವಿ ಶೇಬಿನಕಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net