ಮಹಾಲಿಂಗಪುರದಲ್ಲಿ ಉಡುಪಿ ಹೋಟೆಲ್ ಮಾಲೀಕರ ಸಂಘ ಮತ್ತು ಕಾನಿಪ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡ ಯಕ್ಷಗಾನ ಪ್ರದರ್ಶನವನ್ನು ಡಾ. ಅಜೀತ ಕನಕರಡ್ಡಿ ಉದ್ಘಾಟಿಸಿದರು. ಡಾ. ವಿಶ್ವನಾಥ ಗುಂಡಾ, ಎಚ್. ಸುರೇಶ ಶೆಟ್ಟಿ, ಅಲ್ಲಪ್ಪ ಗುಂಜಿಗಾಂವಿ ಇತರರಿದ್ದರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಅಜೀತ ಕನಕರಡ್ಡಿ ಹೇಳಿಕೆ
ಮಹಾಶಕ್ತಿ-ಮಹಾಕಾಳಿ ದೈವ ಪ್ರಸಂಗ
ಮಹಾಲಿಂಗಪುರ: ಕರಾವಳಿ ಭಾಗದಲ್ಲಿ ಹುಟ್ಟಿ ಬೆಳೆದ ನೃತ್ಯ ಹಾಡು ಸಂಗೀತ ಮತ್ತು ಮಾತುಗಾರಿಕೆಯಿಂದ ಕೂಡಿದ ಅದ್ಭುತ ರಂಗಕಲೆ ಯಕ್ಷಗಾನ ಹೆಸರಿರುವಂತೆ ಯಕ್ಷರ ಅಂದರೆ ದೇವತೆಗಳ ಹಾಡು, ಯಕ್ಷ ಗಾನ ದೇವತಾವಾಣಿ ಎಂದು ಡಾ. ಅಜೀತ ಕನಕರಡ್ಡಿ ಹೇಳಿದರು.
ಪಟ್ಟಣದ ಸಿದ್ಧಾರೂಢ ಬ್ರಹ್ಮ ವಿದ್ಯಾಶ್ರಮದಲ್ಲಿ ಗುರುವಾರ ರಾತ್ರಿ ಉಡುಪಿ ಹೋಟೆಲ್ ಮಾಲೀಕರ ಸಂಘ ಮತ್ತು ಕಾನಿಪ ಸಂಘದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಾಶಕ್ತಿ-ಮಹಾಕಾಳಿ ಯಕ್ಷಗಾನ ಪ್ರಸಂಗ ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕರ್ನಾಟಕದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೈವದ ಹಿನ್ನೆಲೆ ಇರುವುದು ಈಗ ಗೊತ್ತಾಗಿದೆ. ಅಂತಹ ಅಪರೂಪದ ಕಲೆಯನ್ನು ಈ ಭಾಗದ ಜನರಿಗೂ ನೋಡುವ ಅವಕಾಶ ದೊರೆಯಬೇಕು. ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಉತ್ತರ ಕರ್ನಾಟಕ ಭಾಗದ ಜನತೆಯು ಇನ್ನಷ್ಟು ಪ್ರೋತ್ಸಾಹ, ಸಹಕಾರ ನೀಡಬೇಕು ಎಂದರು.
ಹಾಲಾಡಿ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿಯ ಮಾಲೀಕ ಕೋಡಿ ವಿಶ್ವನಾಥ ಗಾಣಿಗ ಮಾತನಾಡಿ, ಉಡುಪಿ ಭಾಗದಲ್ಲಿ ಸಮಸ್ಯಗಳ ಪರಿಹಾರಕ್ಕಾಗಿ ಯಕ್ಷಗಾನ ಮಾಡಿಸುತ್ತಾರೆ. ಮಳೆ, ಬೆಳೆ, ಆರೋಗ್ಯ ಅಥವಾ ಸಂತಾನ ಭಾಗ್ಯ, ಹೊಸ ಉದ್ದಿಮೆ ಸ್ಥಾಪಿಸುವಾಗ ಯಕ್ಷಗಾನ ಮಾಡಿಸುವುದರಿಂದ ನಿರೀಕ್ಷಿತ ಫಲ ಸಿಗುತ್ತದೆಯೆಂಬ ನಂಬಿಕೆಯಿದೆ. ಭಕ್ತರು ತಮ್ಮ ಬೇಡಿಕೆಗಳಿಗಾಗಿ ಸಂಕಲ್ಪ ಮಾಡಿಕೊಂಡು, ಈಡೇರಿದ ನಂತರ ಯಕ್ಷಗಾನ ಪ್ರದರ್ಶನ ಏರ್ಪಡಿಸಿ ಹರಕೆ ತೀರಿಸುತ್ತಾರೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ಮಹಾಲಿಂಗಪುರ ಟೌನ್ ಅಧ್ಯಕ್ಷ ಡಾ. ವಿಶ್ವನಾಥ ಗುಂಡಾ, ಕಾನಿಪ ಅಧ್ಯಕ್ಷ ಮಹೇಶ ಮನ್ನಯ್ಯನವರಮಠ, ಪುರಸಭೆ ಮಾಜಿ ಸದಸ್ಯ ರವಿ ಜವಳಗಿ, ಎಚ್. ಸುರೇಶ ಶೆಟ್ಟಿ, ಅಲ್ಲಪ್ಪ ಗುಂಜಿಗಾಂವಿ, ಶಂಕರ ಅಂಬಿ, ಮಹಾಲಿಂಗಪ್ಪ ತಟ್ಟಿಮನಿ, ಶಂಕರ ಕೋಳಿಗುಡ್ಡ, ಮಹಾಲಿಂಗ ದೇಸಾಯಿ ಇತರರಿದ್ದರು.