ಬರದ ಛಾಯೆಗೆ ಕೃಷಿ ಕ್ಷೇತ್ರವೇ ತಲ್ಲಣ..!

ಬಾಗಲಕೋಟೆ ಹಿನ್ನೀರು ಪ್ರದೇಶದಲ್ಲಿ ಮೋಡಗಳ ಚಲ್ಲಾಟದ ಚಿತ್ರಣ
ಬಾಗಲಕೋಟೆ ಹಿನ್ನೀರು ಪ್ರದೇಶದಲ್ಲಿ ಮೋಡಗಳ ಚಲ್ಲಾಟದ ಚಿತ್ರಣ
Published on
ಬಾಗಲಕೋಟೆ:
ಕಳೆದ ಐದಾರು ವರ್ಷಗಳಿಂದ ಪ್ರವಾಹ, ಅತಿವೃಷ್ಠಿಯಿಂದ ತೀವ್ರ ಸಂಕಷ್ಟಕ್ಕೆ ಅನುಭವಿಸಿದ್ದ ಕೃಷಿ ಕ್ಷೇತ್ರವು ಪ್ರಸಕ್ತ ವರ್ಷ ಮತ್ತೊಂದು ಸವಾಲ್ ಎದುರಿಸುತ್ತಿದೆ. ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತಗೊಂಡಿದೆ. ವರುಣ ದೇವನ ಮುನಿಸಿಗೆ ಕೋಟೆನಾಡಿನ ಕೃಷಿ ಕ್ಷೇತ್ರವೇ ತಲ್ಲಣಗೊಳಿಸಿದೆ.!!
ಪೂರ್ವ ಮುಂಗಾರು, ಮುಂಗಾರು ಮಳೆ ಅಂದುಕೊAಡAತೆ ಸುರಿಯದ ಪರಿಣಾಮ ಅಕ್ಷರಶಃ ಅನ್ನದಾತರು ದಿಕ್ಕು ತೋಚದಂತಾಗಿದ್ದಾರೆ. ಒಣಬೇಸಾಯ ಕೃಷಿ, ತೋಟಗಾರಿಕಾ ಕ್ಷೇತ್ರವು ಬರದ ಛಾಯೆಗೆ ನಲುಗಿ ಹೋಗಿವೆ. ಮಳೆರಾಯನೇ ಕೈಕೊಟ್ಟರೇ ಮುಂದಿನ ಬದುಕು ಹೇಗೆ ಅಂತ ಕೃಷಿಕರು ಗಾಬರಿ ಬಿದ್ದಿದ್ದಾರೆ.
ಬಿತ್ತನೆ ಕುಂಠಿತ..
ಮುAಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಬಿತ್ತನೆ ಚುರುಕು ಪಡೆದುಕೊಳ್ಳುತ್ತಿತ್ತು. ಆದರೇ ಮಳೆ ಕೊರತೆಯಿಂದಾಗಿ ಹದ ಮಾಡಿದ ಭೂಮಿಗೆ ಬಿತ್ತನೆ ಮಾಡದೇ ರೈತರು ಆಕಾಶದತ್ತ ಮುಖ ಮಾಡಿದ್ದಾರೆ. ಬಿತ್ತನೆ ಗುರಿ ತಲುಪಲು ಸಾಧ್ಯವಾಗದ ಕಾರಣ ಭವಿಷ್ಯ ಆತಂಕ ಮನೆ ಮಾಡಿದೆ. ಪ್ರಸಕ್ತ ವರ್ಷ ಮೆಕ್ಕೆ ಜೋಳ, ಸಜ್ಜೆ, ತೊಗರಿ, ಹೆಸರು, ಸೂರ್ಯಕಾಂತಿ, ಸೂಯಾಬೀನ ಬಿತ್ತನೆಯಲ್ಲಿಯೂ ಹಿನ್ನಡೆಯಾಗಿದೆ. ಇನ್ನು ಬಾಗಲಕೋಟೆ, ಮುಧೋಳ, ಬಾದಾಮಿ, ಬೀಳಗಿ, ಜಮಖಂಡಿ, ರಬಕವಿ-ಬನಹಟ್ಟಿ, ಇಳಕಲ್ಲ, ಹುನಗುಂದ, ಗುಳೇದಗುಡ್ಡ ಸೇರಿದಂತೆ ವಿವಿಧ ತಾಲೂಕಿನಲ್ಲಿ ಒಣಬೇಸಾಯ ಕೃಷಿಯಲ್ಲಿ ಅಲ್ಲಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗುತ್ತೀವೆ. ಮೊಳಕೆ ಬಂದ ಬೆಳೆಗಳು ನೀರಿಲ್ಲದೆ ಕಣ್ಣು ಮುಂದೆ ಒಣಗುತ್ತಿರುವುದು ನೋಡಿ ಕೃಷಿಕರು ಕಣ್ಣೀರು ಹಾಕುತ್ತಿದ್ದಾರೆ.
ತೋಟಗಾರಿಕೆ ಕ್ಷೇತ್ರಕ್ಕೂ ಸಂಕಟ..
ಮಳೆ ಕೊರತೆ ಹಿನ್ನಲೆಯಲ್ಲಿ ತರಕಾರಿ ಬೆಳೆಗಳು ಗಗನಕ್ಕೆ ಏರಿವೆ. ಬೋರವೆಲ್ ಮೂಲಕ ಬೆಳೆಯುವ ರೈತರು ಮಳೆ ಕೊರತೆ ಹಿನ್ನಲೆಯಲ್ಲಿ ಬಿತ್ತನೆಗೆ ಹಿಂದೇಟು ಹಾಕುತ್ತಿದ್ದಾರೆ. ಆದರೇ ಮುಖ್ಯವಾಗಿ ಟೊಮೆಟೋ, ಈರುಳ್ಳಿ, ಮೆಣಸಿಕಾಯಿ, ಬೆಂಡಿ, ಚವಳಿ, ಮೆಂಥೆ, ಗಜ್ಜರಿ, ಮೂಲಂಗಿ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೆ ಏರಿದ ಪರಿಣಾಮ ಬಿತ್ತನೆಗೆ ಬೀಜಗಳ ಬೇಡಿಕೆ ಏರಿಕೆಯಾಗಿದೆ. ಆದರೇ ನಿರೀಕ್ಷಿತ ಇಳುವರಿ ಬರುವ ನಿಶ್ಚಿತತೆ ಇಲ್ಲ. ಬಾಳೆ, ಪಪ್ಪಾಯಿ, ದಾಳಿಂಬೆ, ದ್ರಾಕ್ಷಿ, ಚಿಕ್ಕು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ಮಳೆ ಇಲ್ಲದೆ ಸಂಕಟಕ್ಕೆ ಸಿಲುಕಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net