ಶಿಕ್ಷಕಿ ದಾಕ್ಷಾಯಿಣಿ ಮಂಡಿಗೆ ಪ್ರಶಸ್ತಿ

ದಾಕ್ಷಾಯಿಣಿ ಮಂಡಿ
ದಾಕ್ಷಾಯಿಣಿ ಮಂಡಿ
Published on
ಮಹಾಲಿಂಗಪುರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕೊಡಮಾಡುವ `ಇಂಡೋ-ನಾಮ್ ಸೈಂಟಿಫಿಕ್ ಸಮಿತ್ ಫೆಲೋಶಿಫ್-೨೦೨೬' ಪ್ರಶಸ್ತಿಗೆ ಪಟ್ಟಣದ ಶಿಕ್ಷಕಿ ದಾಕ್ಷಾಯಿಣಿ ಮಂಡಿ ಬಾಗಲಕೋಟೆ ಜಿಲ್ಲೆಯಿಂದ ಭಾಜನರಾಗಿದ್ದಾರೆ.
ದಾಕ್ಷಾಯಣಿ ಅವರು ಚಿಮ್ಮಡ ವಲಯದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ, ಶಿಕ್ಷಕರು ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಉಪಾಧ್ಯಕ್ಷರಾಗಿದ್ದು, ಬಾಗಲಕೋಟೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿದ್ದಾರೆ.
ಮೇ ೨೨ರಂದು ವಿಯೆಟ್ನಾಂ ದೇಶದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net