ಗುಳೇದಗುಡ್ಡ ಪಟ್ಟಣದ ಮುರುಘಾಮಠದಲ್ಲಿ ಸತ್ಸಂಗ ಸಾಧಕರ ವತಿಯಿಂದ ನಡೆದ ಗುರು ಪೂರ್ಣಿಮೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಶಿವಾಚಾರ್ಯ ಶ್ರೀಗಳ ಪಾದ ಪೂಜೆ ನೆರವೇರಿತು. ಸಾವಿತ್ರಿ ಜೋಗುರ, ನೇತ್ರಾ ತಾಂಡೂರ, ಗೀತಾ ಸಾರಂಗಮಠ, ಶಿಲ್ಪಾ ಶೀಲವಂತ, ರಾಘು ಪತ್ತಾರ, ಪ್ರಕಾಶ ರೋಜಿ, ದ್ರಾಕ್ಷಾಯಿಣಿ ಗೊಬ್ಬಿ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ
ವಿಶೇಷ ಉಪನ್ಯಾಸ ಕಾರ್ಯಕ್ರಮ
ಜಗತ್ತಿನಲ್ಲಿ ಗುರು ಸರ್ವ ಶ್ರೇಷ್ಠ. ಗುರುವಿನ ಮೂಲಕ ಎಲ್ಲವನ್ನು ಸಾಧಿಸಬೇಕು. ಗುರುಗಳನ್ನು ಗೌರವಿಸಬೇಕು. ಮಕ್ಕಳಿಗೆ ಸಂಸ್ಕಾರ, ಜ್ಞಾನ ಬಹಳ ಮುಖ್ಯ.
ಗುಳೇದಗುಡ್ಡ:
ಜಗತ್ತಿನಲ್ಲಿ ಗುರು ಸರ್ವ ಶ್ರೇಷ್ಠ. ಗುರುವಿನ ಮೂಲಕ ಎಲ್ಲವನ್ನು ಸಾಧಿಸಬೇಕು. ಗುರುಗಳನ್ನು ಗೌರವಿಸಬೇಕು. ಮಕ್ಕಳಿಗೆ ಸಂಸ್ಕಾರ, ಜ್ಞಾನ ಬಹಳ ಮುಖ್ಯ. ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಸ್ಕಾರ ಕಲಿಸಬೇಕು ಎಂದು ಕೆರೂರ ಚರಂತಿಮಠದ ಡಾ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾಮಠದಲ್ಲಿ ಭಾನುವಾರ ಸತ್ಸಂಗ ಸಾಧಕರ ವತಿಯಿಂದ ನಡೆದ ಗುರು ಪೂರ್ಣಿಮೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಭೂತಿ ಅತ್ಯಂತ ಪವಿತ್ರ ವಸ್ತು. ಅದನ್ನು ದಿನಾಲು ಹಣೆಗೆ ಹಚ್ಚುವುದರಿಂದ ಅನೇಕ ಚರ್ಮ ರೋಗಗಳು ಗುಣವಾಗಿತ್ತವೆ. ಸಾತ್ವಿಕ ಜೀವನ, ಭಕ್ತಿಗೆ ಬಡತನ ಇರಬಾರದು. ಪ್ರತಿಯೊಬ್ಬರೂ ಲಿಂಗ ಪೂಜೆ ಮಾಡಿಕೊಳ್ಳಬೇಕು ಎಂದರು.
ಶಿಕ್ಷಕಿ ದ್ರಾಕ್ಷಾಯಣಿ ಹಿರೇಮಠ ಅವರು ಗುರುವಿನ ಮಹತ್ವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈರಣ್ಣ ಪತ್ತಾರ ದಂಪತಿ ಶಿವಕುಮಾರ ಸ್ವಾಮೀಜಿ ಪಾದಪೂಜೆ ನೆರವೇರಿಸಿದರು.