ಭ್ರಷ್ಟ ಆಡಳಿತಕ್ಕೆ ತಕ್ಕ ಪಾಠ ಕಲಿಸಿ

ಬಾಗಲಕೋಟೆ ಮತಕ್ಷೇತ್ರದ ಐಹೊಳೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿದರು. ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಸಕಲೇಶಪುರ ಶಾಸಕ ಮಂಜು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದೇವರಾಜ ಪಾಟೀಲ, ಮಹಾಂತೇಶ ಕಡಪಟ್ಟಿ ಇತರರಿದ್ದರು.
ಬಾಗಲಕೋಟೆ ಮತಕ್ಷೇತ್ರದ ಐಹೊಳೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಮಾತನಾಡಿದರು. ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಮುರುಗೇಶ ನಿರಾಣಿ, ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ, ಸಕಲೇಶಪುರ ಶಾಸಕ ಮಂಜು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದೇವರಾಜ ಪಾಟೀಲ, ಮಹಾಂತೇಶ ಕಡಪಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ
  • ಐಹೊಳೆಯಲ್ಲಿ ಮತಯಾಚನೆ
ಬಾಗಲಕೋಟೆ: ಭ್ರಷ್ಟ ಆಡಳಿತಕ್ಕೆ ಈ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಐಹೊಳೆ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ತೊಲಗಿಸಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.
ಉಪ ಚುನಾವಣೆ ಹಿನ್ನೆಲೆ ಐಹೊಳೆಯಲ್ಲಿ ಶುಕ್ರವಾರ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐಹೊಳೆ ಸ್ಥಳಾಂತರಕ್ಕೆ ಸರ್ಕಾರ ಆದೇಶ ಮಾಡಿದರೂ ಸಹ ಅದನ್ನು ನಿಲ್ಲಿಸಿ ಕಾಂಗ್ರೆಸ್ ಮೋಸ ಮಾಡಿದೆ. ಉಪಚುನಾವಣೆ ಮುಗಿದ ತಕ್ಷಣವೇ ಕೇಂದ್ರ ಸರ್ಕಾರದಿಂದ ಅವಶ್ಯವಿರುವ ಕೆಲಸಗಳನ್ನು ಮಾಡಲಾಗುತ್ತದೆ. ವೀರಣ್ಣ ಚರಂತಿಮಠರು ಗೆದ್ದ ಕೆಲವೇ ತಿಂಗಳುಗಳಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಗಂಡಾಂತರ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಿ ಮರು ಚುನಾವಣೆ ಬರುವ ಕಾಲ ಸಮೀಪವಿದೆ ಎಂದರು.
ಕಾಂಗ್ರೆಸ್ ದುರಾಡಳಿತದಿಂದ ಜನರಿಗೆ ರಾಜಕಾರಣಿಗಳ ಮೇಲಿನ ವಿಶ್ವಾಸ ಹೊರಟು ಹೋಗಿದೆ. ವೀರಣ್ಣ ಚರಂತಿಮಠರಂತಹ ಸಮಾಜದ ಹಿತೈಷಿಗಳನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಾಗಲಕೋಟೆ ನಗರಕ್ಕೆ ರಸ್ತೆ, ಕುಡಿಯುವ ನೀರು, ವಿವಿಧ ಶಿಕ್ಷಣ ವ್ಯವಸ್ಥೆ ಕಲ್ಪಿಸಿದ್ದಾರೆ. ಚರಂತಿಮಠರು ಗೆದ್ದರೆ ಒಳ್ಳೆಯ ಶಾಂತಿಯುತ ವಾತಾವರಣ ನಿರ್ಮಾಣವಾಗುತ್ತದೆ. ಜೊತೆಗೆ ಹಿಂದೂಗಳು ಧಾರ್ಮಿಕ ಮೆರವಣಿಗೆ ನಿರ್ಭಯವಾಗಿ ಮಾಡಲು ಸಾಧ್ಯ. ಇದು ಕೇವಲ ಉಪಚುನಾವಣೆ ಅಲ್ಲ, ಸಿದ್ದರಾಮಯ್ಯ ಸರ್ಕಾರದ ಹಿಂದೂ ಧೋರಣೆಗೆ ಬೇಸತ್ತ ಜನರ ಆಕ್ರೋಶದ ಸಂದೇಶ ಎಂದರು.
ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಗೆದ್ದರೆ ಸ್ಥಾಪನೆ ಆಗುವುದು ತಾಲಿಬಾನ್ ಸರ್ಕಾರ. ಹಿಂದು ವಿರೋಧಿ ಆಡಳಿತ ಮಾಡುವುದು ಅವರ ಗುರಿ ಎಂದರು.
ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿ, ರಾಜಕೀಯ ಮರುಜನ್ಮ ಕೊಟ್ಟ ಬಾಗಲಕೋಟೆ ಜಿಲ್ಲೆಯ ಋಣ ತೀರಿಸುವ ಕೆಲಸವನ್ನೂ ಸಿದ್ದರಾಮಯ್ಯ ಅವರು ಮಾಡಿಲ್ಲ ಎಂದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ವೀರಣ್ಣ ಚರಂತಿಮಠ ಅವರು ಕೇವಲ ಶಾಸಕರಾಗಿ ಮಾತ್ರ ಕೆಲಸ ಮಾಡದೇ ಬಾಗಲಕೋಟೆಯನ್ನು ಶೈಕ್ಷಣಿಕ ರಾಜಧಾನಿಯನ್ನಾಗಿ ಪರಿವರ್ತನೆ ಮಾಡಿ ಸಾವಿರಾರು ಉದ್ಯೋಗ ಸೃಷ್ಟಿಸಿದ್ದಾರೆ. ಬದುಕು ಕಳೆದುಕೊಂಡ ನಿರಾಶ್ರಿತರಿಗೆ ಮತ್ತೆ ಸೌಲಭ್ಯ ಒದಗಿಸಿಕೊಟ್ಟಿದ್ದಾರೆ. ಗೂಂಡಾಗಿರಿ ಕಾಂಗ್ರೆಸ್ ಸೋಲಿಸಿ ಬಿಜೆಪಿ ಗೆಲ್ಲಿಸಿ ಎಂದು ಕರೆ ಕೊಟ್ಟರು.
ವೀರಣ್ಣ ಚರಂತಿಮಠ ಅವರು ಮಾತಮಾಡಿ, ಐಹೊಳೆಗೆ ಕುಡಿಯುವ ನೀರಿನ ಯೋಜನೆ ಮಾಡಿ, ಸಂಪೂರ್ಣ ಸ್ಥಳಾಂತರಕ್ಕೆ ಸರ್ಕಾರದ ಆದೇಶ ತರುವ ಕೆಲಸ ಬಿಜೆಪಿ ಮಾಡಿತ್ತು. ಕಾಂಗ್ರೆಸ್ ಅದನ್ನು ರದ್ದು ಮಾಡಿ ವಿದೇಶದಿಂದ ಬರುವ ಪ್ರವಾಸಿಗರು ಕೊಳಚೆ ಪ್ರದೇಶ ನೋಡಿ ಹೋಗುವಂತ ಪರಿಸ್ಥಿತಿ ಇಲ್ಲಿ ನಿರ್ಮಾಣ ಮಾಡಿದೆ. ಐಹೊಳೆಯ ಸಾಮ್ರಾಜ್ಯದ ಮರು ಸ್ಥಾಪನೆಗಾಗಿ ಬಿಜೆಪಿಗೆ ಮತ ನೀಡಿ ಎಂದರು.
ಸಕಲೇಶಪುರ ಶಾಸಕ ಮಂಜು, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ದೇವರಾಜ ಪಾಟೀಲ, ಮಹಾಂತೇಶ ಕಡಪಟ್ಟಿ ಇತರರಿದ್ದರು.

ಬಿಜೆಪಿ ಪ್ರಚಾರಕ್ಕೆ ಕಾಂಗ್ರೆಸ್ ಅಡ್ಡಿ ಆರೋಪ

ಶಾಂತಿ ರೀತಿಯಿಂದ ನಡೆಯುತ್ತಿದ್ದ ಸಭೆ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಮೇಲೆ ಆಗಮಿಸಿ ಕೇ ಕೇ ಹಾಕಿ ಅಡ್ಡಿಪಡಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಬಿಜೆಪಿ ಕಾರ್ಯಕರ್ತರನ್ನು ಪ್ರಚೋದನೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಮುಖಂಡರು ಬಿಜೆಪಿ ಕಾರ್ಯಕರ್ತರಿಗೆ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಬಳಿಕ ಸಚಿವ ವಿ.ಸೋಮಣ್ಣ ಅಧಿಕಾರಿಗಳಿಗೆ ಕರೆ ಮಾಡಿ ಸೂಕ್ತ ಭದ್ರತೆ ಒದಗಿಸಬೇಕು. ಎಲ್ಲ ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳು ಅಂತ ಘೋಷಿಸಬೇಕು ಎಂದು ಮನವಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net